ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

83 ನೇ ಕನ್ನಡ ಸಾಹಿತ್ಯ ಸಮ್ಮೇಳನ: ತುಂಬಿ ತುಳುಕುತ್ತಿದೆ ಸಭಾಂಗಣ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 24: ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೂ ಮುನ್ನವೇ ತುಂಬಿ ತುಳುಕುತ್ತಿತ್ತು.

ವೇದಿಕೆಯ ಮುಂಭಾಗದಲ್ಲಿ 35ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದ್ದು, ಎಲ್ಲವೂ ಜನರಿಂದ ಭರ್ತಿಯಾಗಿದ್ದವು,ಇದರಿಂದಾಗಿ ಕೂರಲು ಕುರ್ಚಿ ಸಿಗದೆ ಬಹುತೇಕ ಜನರು ಪರದಾಡುತ್ತಿದ್ದರು. ಸಮ್ಮೇಳನ ಕ್ಕೆ ನಿರೀಕ್ಷೆ ಮೀರಿ ಜನರು ಹರಿದು ಬರುತ್ತಿದ್ದಾರೆ.

ಸಮ್ಮೇಳನಕ್ಕೆಂದು ಹೆಸರನ್ನು ದಾಖಲಿಸಿದವರ ಸಂಖ್ಯೆಯೇ 12 ಸಾವಿರ ದಾಟಿದೆ.

ಇಂದಿನಿಂದ(ನ.24) ಮೂರು ದಿನಗಳ ಕಾಲ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗಿದೆ.

83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಗ್ರ ಮಾಹಿತಿ83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಗ್ರ ಮಾಹಿತಿ

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಕನ್ನಡ ಜಾತ್ರೆಯ ಅಧ್ಯಕ್ಷತೆಯನ್ನು ಸಾಹಿತಿ ಚಂದ್ರಶೇಖರ್ ಪಾಟೀಲ್ ವಹಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ನಂತರ ಸಮ್ಮೇಳನಾಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲರ ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ.

ಚಿತ್ರಗಳು : ಸಾಂಸ್ಕೃತಿಕ ನಗರಿಯಲ್ಲಿ ಅಕ್ಷರ ಜಾತ್ರೆ

Live: 83rd Kannada Sahitya Sammelana in Mysuru

ಸಮ್ಮೇಳನಕ್ಕಾಗಿ 135ಅಡಿ ಅಗಲ ಹಾಗೂ 48ಅಡಿ ಉದ್ದದ ಪ್ರಧಾನ ವೇದಿಕೆ ಸಜ್ಜಾಗಿದೆ. 27 ವರ್ಷದ ಬಳಿಕ ಮೈಸೂರಿನಲ್ಲಿ ಅಕ್ಷರಜಾತ್ರೆ ನಡೆಯುತ್ತಿದೆ. ಕನ್ನದದ ಬೃಹತ್ ಉತ್ಸವದ ಕುರಿತ ಲೈವ್ ಅಪ್ಡೇಟ್ಸ್ ಗಳು ಒನ್ ಇಂಡಿಯಾ ಕನ್ನಡದಲ್ಲಿ ಲಭ್ಯವಾಗಲಿವೆ.

ಮಧ್ಯಾಹ್ನ 12.30: 1 ಗಂಟೆಗೂ ಹೆಚ್ಚು ಕಾಲ ವಿಳಂಭವಾದ ಸಾಹಿತ್ಯ ಸಮ್ಮೇಳನದ ಉದ್ಘಾಟನೆ. ಬೆಳಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಬೇಕಾಗಿತ್ತು. ಆದರೆ ಮಧ್ಯಾಹ್ನ 12.20 ಆದರೂ ಆಗಲಿಲ್ಲ. ಇದರಿಂದ ನೆರೆದಿದ್ದ ಜನರು ಬೇಸತ್ತು ಅಸಮಾಧಾನ ವ್ಯಕ್ತಪಡಿಸಿದರು

ಬೆಳಿಗ್ಗೆ 11.30: ಸಾಹಿತ್ಯ ಸಮ್ಮೇಳನಕ್ಕೆ ಪ್ರತಿಭಟನೆ ಕಾವು. ರಾಮನಗರ, ಚನ್ನಪಟ್ಟಣ, ಮಾಗಡಿ ಯಿಂದ ಬಂದ ಸಾಹಿತ್ಯಾಸಕ್ಕರನ್ನ ಕಡೆಗಣಸಿದ್ದಾರೆ, ರಾಮನಗರ ಜಿಲ್ಲೆಗೆ ಯಾವುದೇ ಕೌಂಟರ್ ತೆರದಿಲ್ಲ ಎಂದು ಸ್ವಾಗತ ಸಮಿತಿ ವಿರುದ್ಧ ಗರಂ ಆದ ಸಾಹಿತ್ಯ ಪ್ರಿಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆಳಿಗ್ಗೆ 11.10: ಕೆ.ಆರ್.ವೃತ್ತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಕನ್ನಡ ಧ್ವಜದ ಕೆಂಪು-ಹಳದಿ ಬಣ್ಣದ ಶಾಲು ಧರಿಸಿ ಗಮನ ಸೆಳೆದರಲ್ಲದೇ, ಮೆರವಣಿಗೆಯನ್ನು ವೀಕ್ಷಿಸಿದರು. ಅಷ್ಟೇ ಅಲ್ಲದೇ ಸರಿಯಾಗಿ ಸಾಲಿನಲ್ಲಿ ಸಾಗುವಂತೆ ತಿಳಿಸಿದರು. ಅಕ್ಷರ ಜಾತ್ರೆಯ ಕರ್ಷಕ ಮೆರವಣಿಗೆಗೆ ಚಾಲನೆ ಕನ್ನಡಪರ ಸಂಘಟನೆಗಳು ವಿದ್ಯಾರ್ಥಿಗಳ ಕೈಗೆ ಕನ್ನಡ ಬಾವುಟಗಳನ್ನು ನೀಡಿದರು.

ಬೆಳಿಗ್ಗೆ 11.05: ಗಾಂಧಿ ವೃತ್ತ, ಸಯ್ಯಾಜಿರಾವ್, ರಸ್ತೆ, ಕೆ.ಆರ್.ವೃತ್ತ, ಬನುಮಯ್ಯ ಕಾಲೇಜು ರಸ್ತೆ, ಅಂಡರ್ ಫೀಟ್ ರಸ್ತೆ ಮೂಲಕ ಮಹಾರಾಜ ಕಾಲೇಜನ್ನು ತಲುಪುತ್ತಿರುವ ಮೆರವಣಿಗೆ. ಕನ್ನಾಭಿಮಾನಿಗಳು, ಸಾಹಿತ್ಯಾಸಕ್ತರು ಮೆರವಣಿಗೆಯನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ.

ಬೆಳಿಗ್ಗೆ 11.00: ಮೆರವಣಿಗೆಯು ವಿವಿಧ ಜಾನಪದ ಕಲಾತಂಡಗಳು, ಹುಲಿವೇಷ, ಸೀರೆ, ಶರ್ಟ್ ಧೋತಿ ಧರಿಸಿದ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿಯರನ್ನೊಳಗೊಂಡಿದೆ. ಎತ್ತಿನ ಗಾಡಿ ವಿವಿಧ ಸ್ತಬ್ಧಚಿತ್ರಗಳು ಮರವಣಿಗೆಯಲ್ಲಿ ಪಾಲ್ಗೊಂಡಿದ್ದು, ಪ್ರಮುಖ ಬೀದಿಗಳಲ್ಲಿ ಸಾಗಿ ಬರುತ್ತಿದೆ. ಕನ್ನಡ ಪ್ರೇಮಿಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೀಕ್ಷಿಸುತ್ತಿದ್ದಾರೆ.

ಬೆಳಿಗ್ಗೆ 10.15: ಎಲ್ಲೆಲ್ಲೂ ಕನ್ನಡದ ಭಾವುಗಳಿಂದ ಕಂಗೊಲಿಸುತ್ತಿರುವ ಮೆರವಣಿಗೆ, ಸುಮಾರು 20 ಜನಪದ ಕಲಾತಂಡಗಳು ಸಾಂಪ್ರದಾಯಿಕ ಉಡುಗೆ ತೊಟ್ಟಿರುವ ಸಾವಿರಾರು ಶಾಲಾ ಕಾಲೇಜಿನ ವಿದ್ಯಾರ್ಥಿಗಳು,ವಿವಿಧ ವೇಶಭೂಷಣಗಳ ತೊಟ್ಟ ಕಲಾವಿದರು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದಾರೆ.

ಬೆಳಿಗ್ಗೆ 9.55: ವಿವಿಧ ಸ್ಥಬ್ದ ಚಿತ್ರಗಳು ಹಾಗೂ ಎತ್ತಿನ ಗಾಡಿಗಳು, ಸಾರೋಟುಗಳು ಭಾಗಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನ್, ಮೇಯರ್ ಎಂ.ಜೆ ರವಿಕುಮಾರ್ ,ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವಿರೇಶ್ ಇತರರು ಭಾಗಿ

ಬೆಳಿಗ್ಗೆ 9.50: ನೂರಾರು ಜನಪದ ಕಲಾತಂಡಗಳು, ವಿವಿಧ ವೇಷಭೂಷಣಳು ಸಾವಿರಾರು ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಭಾಗಿ

ಬೆಳಿಗ್ಗೆ 9.45: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ಸಿ.ಮಹದೇವಪ್ಪ

Live: 83rd Kannada Saahitya Sammelana in Mysuru

‌ಬೆಳಿಗ್ಗೆ 9.30: ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ವಿವಿಧ ಜನಪದಕಲಾತಂಡಗಳ ಮೆರಗು

ಬೆಳಿಗ್ಗೆ 9.15: ಹಾಜರಾತಿ ಪ್ರಮಾಣ ಪತ್ರಕ್ಕಾಗಿ ಪ್ರಧಾನ ವೇದಿಕೆಯ ಮುಂಭಾಗದಲ್ಲೇ ಗಲಾಟೆ, ಸಮ್ಮೇಳನಾರಂಭಕ್ಕೂ ಮುನ್ನವೇ ಆರಂಭವಾದ ಗೊಂದಲ

ಬೆಳಿಗ್ಗೆ 9.05: ಕೋಟೆ ಆಂಜನೇಯ ದೇವಸ್ಥಾನದಿಂದ ‌ಮಲ್ಲಿಗೆ ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲರ ಮೆರವಣಿಗೆ ಆರಂಭ.

ಬೆಳಿಗ್ಗೆ 8.55 : ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಕ್ಷಣಗಣನೆ

ಬೆಳಿಗ್ಗೆ 8.45: ಅಕ್ಷರ ಜಾತ್ರೆಗೆ ಹರಿದುಬರುತ್ತಿರುವ ಜನಸಾಗರ

ಬೆಳಿಗ್ಗೆ 8.30: ಕನ್ನಡ, ರಾಷ್ಟ್ರ ಧ್ವಜಾರೋಹಣ

English summary
3days 83rd Kannada Sahitya Sammelana will be started from today (Nov 24th) in Mysuru. Oneindia Kannada will give live updates of the Kannada langauge fest here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X