ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂಜನಗೂಡು ಕಾಡಂಚಿನ ಜನರ ನಿದ್ದೆಗೆಡಿಸಿದ ಚಿರತೆ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 02 : ಚಿರತೆ ಹಾವಳಿಯಿಂದ ಮೈಸೂರು ಜಿಲ್ಲೆಯ ನಂಜನಗೂಡು ಕಾಡಂಚಿನ ಗ್ರಾಮಗಳ ಜನ ತತ್ತರಿಸಿ ಹೋಗಿದ್ದಾರೆ. ಚಿರತೆಯೊಂದು ಕಳೆದ ಎರಡು ವರ್ಷಗಳಿಂದ ಕಾಡಂಚಿನ ಕೋಣನೂರು ಗ್ರಾಮ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಅಡ್ಡಾಡುತ್ತಾ ಜಾನುವಾರು ಸೇರಿದಂತೆ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಿದೆ.

ಕೋಣನೂರು ಗ್ರಾಮ ವ್ಯಾಪ್ತಿಯಲ್ಲಿ ನೂರಾರು ಎಕರೆ ಪ್ರದೇಶ ಕುರುಚಲು ಗಿಡಗಳಿಂದ ಕೂಡಿದ ಅರಣ್ಯಪ್ರದೇಶವಿದ್ದು, ಹಲವು ಬಗೆಯ ವನ್ಯಪ್ರಾಣಿಗಳು ವಾಸಿಸುತ್ತಿವೆ. ಅರಣ್ಯಕ್ಕೆ ಹೊಂದಿಕೊಂಡಂತೆ ರೈತರ ಕೃಷಿ ಭೂಮಿಗಳಿದ್ದು, ಇಲ್ಲಿ ಬೆಳೆಯುವ ಬೆಳೆಗೆ ಕಾಡಾನೆ ಹಾವಳಿಯಾದರೆ, ಜನರಿಗೆ ಚಿರತೆ ಭಯ ಆವರಿಸಿದೆ. [ಕುಂದನಹಳ್ಳಿಯಲ್ಲಿ ಕುರಿ ಕೋಳಿ ತಿಂದು ತೇಗಿದ ಚಿರತೆ]

nanjangud

ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವವರು ರೈತರು ಹಾಗೂ ಕೂಲಿ ಕಾರ್ಮಿಕರಾಗಿದ್ದು, ದುಡಿದೇ ಬದುಕಬೇಕಾದ ಅನಿವಾರ್ಯತೆಯಿದೆ. ಇವರು ಜೀವನೋಪಾಯಕ್ಕಾಗಿ ಕೋಳಿ, ಕುರಿ, ಮೇಕೆ ಹಾಗೂ ಹಸುಗಳನ್ನು ಸಾಕುತ್ತಿದ್ದು ಇದನ್ನು ಚಿರತೆಗಳು ಕೊಂದು ತಿನ್ನುತ್ತಿರುವುದರಿಂದ ಬಹಳಷ್ಟು ಸಂಕಷ್ಟ ಎದುರಿಸುವಂತಾಗಿದೆ. [ಬಂಡೀಪುರದಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದ ಕರಿ ಚಿರತೆ!]

ಎರಡು ವರ್ಷಗಳ ಹಿಂದೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಸೆರೆ ಸಿಕ್ಕಿತ್ತು. ಬಳಿಕ ಬೋನನ್ನು ಮುರಿದು ತಪ್ಪಿಸಿಕೊಂಡಿತ್ತು. ಆ ನಂತರ ಅದು ಇಲ್ಲಿಯವರೆಗೆ ಬೋನಿಗೆ ಬೀಳದೆ ಜನರನ್ನು ಕಾಡುತ್ತಿದೆ. ಕಾಡಂಚಿನ ಗ್ರಾಮಗಳಲ್ಲಿ ಚಿರತೆ ಬಲಿ ಪಡೆದ ಪ್ರಾಣಿಗಳ ದೊಡ್ಡ ಪಟ್ಟಿಯೇ ಇದೆ. [ಕಾಡು ಬಿಟ್ಟು ನಾಡಿಗೆ ಚಿರತೆ ನುಗ್ಗಲು ಕಾರಣವೇನು?]

ಕೋಣನೂರು ಗ್ರಾಮದಲ್ಲಿ ಸುಮಾರು 15, ಚುಂಚನಹಳ್ಳಿಯಲ್ಲಿ 5, ಹನುಮನಪುರ 1, ದಾಸನೂರು 1, ತಗಡೂರು 3, ಕಾರ್ಯ 1, ಉಮ್ಮತ್ತೂರು 1, ಅವತಾಳಪುರ 1, ಕೃಷ್ಣರಾಜಪುರ 1 ಹೀಗೆ ಸುಮಾರು 30ಕ್ಕೂ ಹೆಚ್ಚು ಪ್ರಾಣಿಗಳನ್ನು ಚಿರತೆ ತಿಂದು ತೇಗಿದೆ.

ಚಿರತೆ ದಾಳಿಯಿಂದ ನಷ್ಟ ಅನುಭವಿಸಿದ ರೈತರಿಗೆ ಸಮರ್ಪಕವಾಗಿ ಪರಿಹಾರವೂ ದೊರೆತಿಲ್ಲ. ಇನ್ನು ಅರಣ್ಯ ಇಲಾಖೆ ಬಳಿ ಬೋನಿನ ಕೊರತೆಯಿರುವುದರಿಂದ ಎಲ್ಲೆಂದರಲ್ಲಿ ಬೋನು ಇಡುವುದು ಕಷ್ಟವಾಗಿದೆ. ಚಿರತೆ ಸೆರೆಹಿಡಿಯುವ ತನಕ ಈ ವ್ಯಾಪ್ತಿಯ ಜನ ನೆಮ್ಮದಿಯಾಗಿ ಬದುಕವುದು ಕಷ್ಟವಾಗಿದೆ. ಅರಣ್ಯ ಇಲಾಖೆ ಇತ್ತಗಮನ ಹರಿಸುತ್ತದೆಯೇ? ಎಂಬುದನ್ನು ಕಾದು ನೋಡಬೇಕು.

English summary
Leopard spotted around the Konanuru village of Nanjangud taluk, Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X