ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಂದಿಯ ಉರುಳಿಗೆ ಸಿಲುಕಿದ್ದ ಚಿರತೆ ರಕ್ಷಣೆ

By ಬಿ.ಎಂ.ಲವಕುಮಾರ್
|
Google Oneindia Kannada News

ಮೈಸೂರು, ಜುಲೈ 30 : ಆಗೊಮ್ಮೆ ಈಗೊಮ್ಮೆ ಕಾಣಿಸುತ್ತಿದ್ದ ಚಿರತೆ ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿ ಸಾವು-ಬದುಕಿನ ನಡುವೆ ಹೋರಾಡುತ್ತಿತ್ತು. ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಮೈಸೂರು ಮೃಗಾಲಯಕ್ಕೆ ಕಳುಹಿಸಿರುವ ಘಟನೆ ಎಚ್.ಡಿ.ಕೋಟೆ ತಾಲೂಕಿನ ಬೆಳತೂರು ಗ್ರಾಮದ ಬಳಿ ನಡೆದಿದೆ.

ಸೆರೆ ಸಿಕ್ಕಿದ ಚಿರತೆ 3 ವರ್ಷದ್ದಾಗಿದೆ. ಇದು ಊರಿನತ್ತ ಬರುವ ಸಂಚು ರೂಪಿಸುತ್ತಿದ್ದಾಗಲೇ ಉರುಳಿಗೆ ಸಿಕ್ಕಿ ಬಿದ್ದಿದೆ. ಜಮೀನಿಗೆ ಬಂದು ಫಸಲು ನಾಶ ಮಾಡುತ್ತಿದ್ದ ಕಾಡು ಹಂದಿಗಳನ್ನು ಬೇಟೆಯಾಡುವ ಸಲುವಾಗಿ ಕೆಲವು ಬೇಟೆಗಾರರು ಶನಿವಾರ ರಾತ್ರಿ ಬೆಳತೂರು ಗ್ರಾಮದ ಬಳಿ ಇರುವ ಚಿಕ್ಕನಾಯಕ ಅವರ ಜಮೀನಿನ ಬಳಿ ತಂತಿ ಬೇಲಿ ಸಮೀಪ ಉರುಳುನ್ನು ಹಾಕಿದ್ದರು.

ಮೈಸೂರಿನಲ್ಲಿ ಸತ್ತ ಚಿರತೆ ಹೊತ್ತು ಸೆಲ್ಫಿಗೆ ಮುಗಿಬಿದ್ದ ಜನ ಮೈಸೂರಿನಲ್ಲಿ ಸತ್ತ ಚಿರತೆ ಹೊತ್ತು ಸೆಲ್ಫಿಗೆ ಮುಗಿಬಿದ್ದ ಜನ

ರಾತ್ರಿ ಅದೇ ಹಾದಿಯಲ್ಲಿ ಬಂದ ಚಿರತೆ ಜಮೀನಿನ ಕಡೆ ನುಗ್ಗುವಾಗ ಉರುಳಿಗೆ ಸಿಕ್ಕಿಕೊಂಡಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿತ್ತು. ಭಾನುವಾರ ಬೆಳಗ್ಗೆ ರೈತರು ಜಮೀನು ಕಡೆತೆರಳುತ್ತಿದ್ದ ವೇಳೆ ಜಮೀನಿನಲ್ಲಿ ಉರುಳಿಗೆ ಸಿಕ್ಕಿ ಒದ್ದಾಡುತ್ತಿದ್ದ ಚಿರತೆಯನ್ನು ನೋಡಿ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸತ್ಯಮಂಗಲ ಅರಣ್ಯದ ರಸ್ತೆಯಲ್ಲಿ ಚಿರತೆಗಳ ಚಿನ್ನಾಟ!ಸತ್ಯಮಂಗಲ ಅರಣ್ಯದ ರಸ್ತೆಯಲ್ಲಿ ಚಿರತೆಗಳ ಚಿನ್ನಾಟ!

Leopard rescued in H.D.Kote, Mysuru

ಈ ನಡುವೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿಸಿಎಫ್ ಪರಮೇಶ್ವರ್, ಎಸಿಎಫ್ ಹನುಮಂತ, ಆರ್‍ಎಫ್‍ಓ ಮಧು, ಮೊದಲಾದವರು ಸಿಬ್ಬಂದಿಯೊಂದಿಗೆ ಆಗಮಿಸಿದ ರೈತರನ್ನು ಮತ್ತು ಗ್ರಾಮಸ್ಥರನ್ನು ಚದುರಿಸಿ ಚಿರತೆಯನ್ನು ಸೆರೆ ಹಿಡಿದು ಮೈಸೂರಿನ ಮೃಗಾಲಯಕ್ಕೆ ಕಳುಹಿಸಲಾಗಿದೆ.

English summary
3 year old leopard was rescued in H.D.Kote taluk, Mysuru. Forest department officials sent Leopard to Mysuru Zoo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X