ಕೊನೆಗೂ ಸೆರೆ ಸಿಕ್ಕಿತು ಮೈಸೂರಿನ ಚಿರತೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು: ಚಾಮುಂಡಿಬೆಟ್ಟದಲ್ಲಿದ್ದುಕೊಂಡು ಸುತ್ತಮುತ್ತಲ ಬಡಾವಣೆಯ ಜನರ ನಿದ್ದೆಗೆಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಚಾಮುಂಡಿ ಬೆಟ್ಟದ ತಪ್ಪಲಿನ ಗೌರಿಶಂಕರನಗರದಲ್ಲಿ ಆಗಾಗ್ಗೆ ಕಾಣಿಸಿಕೊಂಡು ಭಯ ಹುಟ್ಟಿಸಿತ್ತು. ಜನ ನೀಡಿದ ದೂರಿನ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇರಿಸಿ ಕಾಯತೊಡಗಿತ್ತು.

leopard in captivity in Mysuru

ಮಂಗಳವಾರ ಬೆಳಿಗ್ಗೆ ಬೋನಿಟ್ಟ ಸ್ಥಳಕ್ಕೆ ಹೋಗಿ ನೋಡಿದವರಿಗೆ ಅಚ್ಚರಿ ಕಾದಿತ್ತು. ಇದುವರೆಗೆ ಜನರನ್ನು ಬೆಚ್ಚಿ ಬೀಳಿಸಿದ್ದ ಚಿರತೆ ಬೋನಿನಲ್ಲಿ ಸೆರೆಯಾಗಿ ಹೊರಗೆ ಹೋಗಲು ಹೊಂಚು ಹಾಕುತ್ತಾ ಘರ್ಜಿಸುತ್ತಿತ್ತು. ಬಳಿಕ ಅದನ್ನು ವಾಹನದಲ್ಲಿ ಸಾಗಿಸಿ ಅರಣ್ಯಕ್ಕೆ ಬಿಡಲಾಯಿತು. ಸದ್ಯ ಜನ ನೆಮ್ಮದಿಯಿಂದ ಓಡಾಡುತ್ತಿದ್ದಾರೆ.

leopard in captivity in Mysuru

ಇದೊಂದೇ ಅಲ್ಲದೆ ಬೇರೆ ಚಿರತೆಯೂ ಇದೆ ಎನ್ನಲಾಗುತ್ತಿದೆ. ಆದರೆ ಉಪಟಳ ನೀಡುತ್ತಿದ್ದ ಚಿರತೆಯೇ ಸೆರೆ ಸಿಕ್ಕಿದೆ ಎನ್ನುವುದು ನೆಮ್ಮದಿಯ ತರುವ ವಿಚಾರವಾಗಿದೆ.

leopard in captivity in Mysuru

ಈ ಹಿಂದೆ ಚಿರತೆ ಕಾಣಿಸಿಕೊಂಡಾಗ ಬಡಾವಣೆಯ ಜನರು ದೂರದಿಂದೆಲೇ ವಿಡಿಯೋ, ಪೋಟೋ ತೆಗೆದುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿಯೂ ಈ ಅವಕಾಶವನ್ನು ಕೆಲವರು ಬಳಸಿಕೊಂಡರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
leopard plagued by Mysuru Gowri shankarnagar and other side. That leopard in captivity on Tuesday
Please Wait while comments are loading...