ಸಿದ್ದರಾಮಯ್ಯಗೆ ಮುಖಭಂಗ, ತವರಲ್ಲಿ ಜೆಡಿಎಸ್‌ಗೆ ಗೆಲುವು

Posted By:
Subscribe to Oneindia Kannada

ಮೈಸೂರು, ಜೂನ್ 14 : ವಿಧಾನಪರಿಷತ್ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖಭಂಗವಾಗಿದೆ. ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ ಅವರು ಗೆಲುವು ಸಾಧಿಸಿದ್ದು, ತವರು ಜಿಲ್ಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸಲು ಸಿದ್ದರಾಮಯ್ಯ ಮಾಡಿದ ತಂತ್ರ ವಿಫಲವಾಗಿದೆ.

ಸೋಮವಾರ ಬೆಳಗ್ಗೆ ಮೈಸೂರಿನ ಜೆಎಸ್‌ಎಸ್‌ ಕಾಲೇಜಿನಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆ ಆರಂಭವಾಗಿತ್ತು. ಮಂಗಳವಾರ ಮುಂಜಾನೆ 5 ಗಂಟೆಗೆ ಮತ ಎಣಿಕೆ ಮುಕ್ತಾಯಗೊಂಡಿದೆ. 21, 544 ಮತಗಳನ್ನು ಪಡೆದ ಕೆ.ಟಿ.ಶ್ರೀಕಂಠೇಗೌಡ ಅವರು ಜಯಭೇರಿ ಬಾರಿಸಿದರು. [ಬಸವರಾಜ ಹೊರಟ್ಟಿಗೆ ದಾಖಲೆ ಗೆಲುವು]

siddaramaiah

ಮೊದಲನೇ ಪ್ರಾಶಸ್ತ್ಯದ ಮತಗಳಲ್ಲಿ ಬಹುಮತ ಬರದ ಕಾರಣ 2ನೇ ಪ್ರಾಶಸ್ತ್ಯದ ಮತಗಳನ್ನು ಎಣಿಕೆ ಮಾಡಲಾಯಿತು. ಶ್ರೀಕಂಠೇಗೌಡ ಅವರು ಗೆಲುವು ಸಾಧಿಸಿದರು. ಕಾಂಗ್ರೆಸ್ ಅಭ್ಯರ್ಥಿ ಡಾ.ರವೀಂದ್ರ ಅವರು ಸೋಲುವ ಜೊತೆಗೆ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಕೇವಲ 9,323 ಮತಗಳನ್ನು ಮಾತ್ರ ಪಡೆದಿದ್ದಾರೆ.

ಬಿಜೆಪಿಯ ಮೈ.ವಿ.ರವಿಶಂಕರ್, ಕಾಂಗ್ರೆಸ್‌ನ ಡಾ.ಎಚ್.ಎನ್.ರವೀಂದ್ರ, ವಾಟಾಳ್ ನಾಗರಾಜ್, ಪ್ರೊ.ಕೆ.ಎಸ್.ಭಗವಾನ್ ಮುಂತಾದವರು ಚುನಾವಣಾ ಕಣದಲ್ಲಿದ್ದರು. [ವಿಧಾನಪರಿಷತ್ ಫಲಿತಾಂಶ: ಯಾರಿಗೆ ಲಾಭ? ಯಾರಿಗೆ ನಷ್ಟ?]

ಜೂನ್ 9ರಂದು ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆದಿತ್ತು. ಕ್ಷೇತ್ರದಲ್ಲಿ ಒಟ್ಟು 52,800 ಮತಗಳು ಚಲಾವಣೆಯಾಗಿದ್ದವು. ಇವುಗಳಲ್ಲಿ 5,743 ಮತಗಳು ತಿರಸ್ಕೃತಗೊಂಡಿವೆ.

ಪಡೆದ ಮತಗಳು

* ಕೆ.ಟಿ.ಶ್ರೀಕಂಠೇಗೌಡ (ಜೆಡಿಎಸ್) - 21,544
* ಮೈ.ವಿ.ರವಿಶಂಕರ್ (ಬಿಜೆಪಿ) - 19,728
* ಡಾ.ರವೀಂದ್ರ (ಕಾಂಗ್ರೆಸ್) - 9323
* ವಾಟಾಳ್ ನಾಗರಾಜ್ - 823

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Set back for Chief Minister Siddaramaiah at Mysuru in Legislative Council election. JDS candidate K.T.Shrikante Gowda registered a victory in South Graduates Constituency.
Please Wait while comments are loading...