ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಕ್ಷ್ಮಮ್ಮನ ಸೂರಿನ ಕನಸು ಈಡೇರಿಸುವರೇ ಎಚ್.ಡಿ.ಕುಮಾರಸ್ವಾಮಿ?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 3 : ಎಚ್.ಡಿ. ಕುಮಾರಸ್ವಾಮಿ 2006-07 ರಲ್ಲಿ ಸಿಎಂ ಆಗಿದ್ದಾಗ ಮೈಸೂರಿನಲ್ಲಿರುವ ಲಕ್ಷಮ್ಮ ಎಂಬ ಮಹಿಳೆಯ ಗುಡಿಸಲೊಂದರಲ್ಲಿ ವಾಸ್ತವ್ಯ ಹೂಡಿದ್ದರು. ಆ ಸಮಯದಲ್ಲಿ ಗುಡಿಸಲನ್ನು ಮನೆಯಾಗಿ ಪರಿವರ್ತಿಸುವುದಾಗಿ ಆ ಕುಟುಂಬಕ್ಕೆ ಭರವಸೆ ನೀಡಿದ್ದರು.

ಈ ಭರವಸೆಯನ್ನು ನಂಬಿಕೊಂಡು 11 ವರ್ಷದಿಂದ ಕುಮಾರಸ್ವಾಮಿ ಅವರನ್ನೇ ಎದುರು ನೋಡುತ್ತಿದ್ದಾರೆ ಲಕ್ಷಮ್ಮ. ಮೈಸೂರಿನ ಮೇದರ್ ಬ್ಲಾಕ್ ನಲ್ಲಿರುವ ಲಕ್ಷ್ಮಮ್ಮ ಅವರ ಗುಡಿಸಲಿನಲ್ಲಿ ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದ ವೇಳೆ ಸೊಪ್ಪಿನ ಸಾರು, ಮುದ್ದೆ ಸವಿದಿದ್ದರಂತೆ.

ಮೊದಲು ನಮ್ಮ ರೈತರನ್ನು ಉಳಿಸಬೇಕಿದೆ: ಎಚ್.ಡಿ. ಕುಮಾರಸ್ವಾಮಿಮೊದಲು ನಮ್ಮ ರೈತರನ್ನು ಉಳಿಸಬೇಕಿದೆ: ಎಚ್.ಡಿ. ಕುಮಾರಸ್ವಾಮಿ

ತದ ನಂತರ ಬೆಂಗಳೂರಿಗೆ ತೆರಳಿದ್ದ ಕುಮಾರಸ್ವಾಮಿ ಆ ಸಮಯದಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿದಿದ್ದರು. ಇದೀಗ ಮತ್ತೆ ಎಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರು ಬಂದು ನಮ್ಮ ಸಮಸ್ಯೆ ಆಲಿಸುತ್ತಾರೆ, ಇಂದಲ್ಲ, ನಾಳೆ ಮನೆ ಕಟ್ಟಿಸಿಕೊಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಲಕ್ಷಮ್ಮ.

Kumarswamy stayed Lakshmamma hut during his grama vastavya.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಲಕ್ಷ್ಮಮ್ಮ, ಈಗ ಕುಮಾರಸ್ವಾಮಿ ಮತ್ತೆ ಸಿಎಂ ಆಗಿದ್ದಾರೆ. ಸಿಎಂ ಮೈಸೂರಿಗೆ ಬಂದರು ಸರಿಯೇ ಅಥವಾ ನಾವೇ ಬೆಂಗಳೂರಿಗೆ ತೆರಳಿ ಮನವಿ ಮಾಡುತ್ತೀವಿ ಅವರು ನಮಗೆ ಮೋಸ ಮಾಡುವುದಿಲ್ಲ.

ಕುಮಾರಸ್ವಾಮಿ ಮಲಗಿದ್ದ ಮಂಚ, ಬೆಡ್ ಶೀಟ್ ಅನ್ನು ಇವತ್ತಿಗೂ ಜೋಪಾನ ಮಾಡಿದ್ದೇನೆ ಎಂದು ಭಾವುಕರಾಗಿ ನುಡಿಯುತ್ತಾರೆ.

English summary
CM HD Kumaraswamy stayed Lakshmamma hut during his grama vastavya. At that time he promised to build a house. Since then Lakshmamma family waiting for CM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X