ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಇಂಡಿಯಾ ಟುಡೆ ಸಮೀಕ್ಷೆ ಸುಳ್ಳು,ಜೆಡಿಎಸ್ ಕಿಂಗ್ ಮೇಕರ್‌ ಅಲ್ಲ ಕಿಂಗ್'

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಏಪ್ರಿಲ್ 14: ಇಂಡಿಯಾ ಟುಡೇ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ಗೆ ನೂರು ಸ್ಥಾನ ಬರುತ್ತದೆ ಆದರೆ ನಿಜವಾಗಿ ಜೆಡಿಎಸ್‌ಗೆ ನೂರು ಸ್ಥಾನ ಬರುತ್ತದೆ. ಕಾಂಗ್ರೆಸ್ ಗೆ 40 ಸ್ಥಾನ ಬರುತ್ತದೆ ಅಷ್ಟೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದರು.

ನಿನ್ನೆಯಷ್ಟೆ ಪ್ರಕಟವಾದ ಇಂಡಿಯಾ ಟುಡೇ ಮತ್ತು ಕಾರ್ವಿ ಸಂಸ್ಥೆಗಳ ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಕ್ಷೆ ಪ್ರಕಾರ ಜೆಡಿಎಸ್ ಪಕ್ಷವು ಕಿಂಗ್ ಮೇಕರ್ ಆಗಲಿದೆ ಎಂಬ ವಿಷಯಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಸಮೀಕ್ಷೆ ಸುಳ್ಳು, ಜೆಡಿಎಸ್‌ಗೆ ಇನ್ನೂ ಹೆಚ್ಚಿನ ಸ್ಥಾನ ಬರಲಿದೆ ಎಂದಿದ್ದಾರೆ.

ಇಂಡಿಯಾ ಟುಡೇ, ಕಾರ್ವಿ ಸಮೀಕ್ಷೆ : ಯಾವ ಪಕ್ಷಕ್ಕೆ ಎಷ್ಟು ಸೀಟು?ಇಂಡಿಯಾ ಟುಡೇ, ಕಾರ್ವಿ ಸಮೀಕ್ಷೆ : ಯಾವ ಪಕ್ಷಕ್ಕೆ ಎಷ್ಟು ಸೀಟು?

ಸಮೀಕ್ಷೆ ಫಲಿತಾಂಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, 'ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅವರು ಈ ಸಮೀಕ್ಷೆಯನ್ನು ಮಾಡಿಸಿದ್ದಾರೆ, ಆದರೆ ಅವರು ಯಾವ ಮಾನದಂಡ ಇಟ್ಟುಕೊಂಡು ಸಮೀಕ್ಷೆ ಮಾಡಿಸಿದ್ದಾರೆ ನನಗೆ ತಿಳಿದಿಲ್ಲ. ಆದರೆ ಈ ಸಮೀಕ್ಷೆ ಅವರ ಕೃಪಾಪೋಷಿತವೇ ಎಂಬುದು ಅರಿವಿದೆ' ಎಂದರು.

Kumaraswamy said India today opinion poll is a lie

ಮೈಸೂರಿನಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಯಾವುದೇ ಸಮೀಕ್ಷೆಗಳ ಬಗ್ಗೆ ನನ್ನ ತಕರಾರಿಲ್ಲ, ಆದರೆ ನಾನು ಕಿಂಗ್ ಮೇಕರ್ ಅಲ್ಲ, ಜನ ನನ್ನನ್ನ ಕಿಂಗ್ ಮಾಡೋಕೆ ತಿರ್ಮಾನ ಮಾಡಿದ್ದಾರೆ' ಎಂದು ಸಮೀಕ್ಷೆಯಲ್ಲಿ ಬಂದ ಫಲಿತಾಂಶಕ್ಕಿಂತಲೂ ವ್ಯತಿರಿಕ್ತವಾದ ಫಲಿತಾಂಶ ಬರುತ್ತದೆ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎನ್ನುವವರೇ ಹೆಚ್ಚು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎನ್ನುವವರೇ ಹೆಚ್ಚು

ಜೆಡಿಎಸ್ ಕಷ್ಟದ ಪರಿಸ್ಥಿತಿಯಲ್ಲಿದ್ದಾಗಲೇ ನಾವು 58 ಸ್ಥಾನ ಗೆದ್ದಿದ್ದೆವು, ಈ ಬಾರಿ ಹಿಂದಿನ ದಿನಗಳಿಗಿಂತ ಈಗ ಪಕ್ಷದ ವರ್ಚಸ್ಸು ಹೆಚ್ಚಾಗಿದೆ ಹಾಗಾಗಿ ಇನ್ನೂ ಹೆಚ್ಚಿನ ಸ್ಥಾನ ಗಳಿಸುತ್ತೇವೆ ಎಂದರು.

English summary
JDS state president HD Kumaraswamy said 'India today opnion poll is a lie. CM Siddaramiah's media assistant Dinesh Amin Mattu influenced that opinion poll. in fact JDS will get 100 seats and congress will get 40 only'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X