ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಆರ್ ಎಸ್ ಗೆ ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ದಂಪತಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ.20: ಕೆಆರ್ ಎಸ್ ನಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಾಗಿನ ಅರ್ಪಿಸಿದರು. ಜಲಾಶಯದ ಬಳಿ ಬಾಗಿನಗಳಿಗೆ ಪೂಜಾ ಕೈಂಕರ್ಯ ಕೈಗೊಳ್ಳಲಾಯಿತು. ಪುರೋಹಿತ ಡಾ. ಭಾನು ಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಪೂಜಾ ಕಾರ್ಯ ನಡೆಯಿತು.

4.20ಕ್ಕೆ ಬಾಗಿನ ಸಮರ್ಪಣೆ ಮಾಡಿದ ಸಿಎಂ, ಕಾಲ್ನಡಿಗೆಯಲ್ಲೇ ಸಂಚರಿಸಿ ಡ್ಯಾಂ ವೀಕ್ಷಣೆ ಮಾಡಿದರು. ಸಿಎಂ ಎಚ್.ಡಿ.ಕೆ ಗೆ ಪತ್ನಿ ಅನಿತಾ, ಸಚಿವರಾದ ಡಿ.ಕೆ.ಶಿವಕುಮಾರ್, ಸಿ.ಎಸ್.ಪುಟ್ಟರಾಜು ಸಾಥ್ ನೀಡಿದರು.

ಮೈದುಂಬಿದ ಹಾರಂಗಿಗೆ ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿಮೈದುಂಬಿದ ಹಾರಂಗಿಗೆ ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ

ಡ್ಯಾಂ ಮೇಲಿಂದಲೇ ಜನರತ್ತ ಎಚ್ ಡಿಕೆ, ಡಿಕೆಶಿ ಕೈ ಬೀಸಿದರು. ಈ ವೇಳೆ ಪೂಜಾ ಕುಣಿತ, ಪಟದ ಕುಣಿತ, ವಿವಿಧ ಜಾನಪದ ಕಲಾ ತಂಡಗಳು, ಮಂಗಳವಾಧ್ಯ, ಕಳಸ ಹೊತ್ತ ಮಹಿಳೆಯರೊಂದಿಗೆ ಪೂರ್ಣ ಕುಂಭ ಹೊತ್ತು ಅದ್ದೂರಿಯಾಗಿ ಸ್ವಾಗತಿಸಲಾಯಿತು.

Kumaraswamy offers bagina to KRS reservoir

ಬಾಗಿನ ಸಲ್ಲಿಕೆ ಬಳಿಕ ಕಾವೇರಿ ಮಾತೆ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.

ರಾಜ್ಯದಲ್ಲಿ ಹಲವು ವರ್ಷಗಳಿಂದ ಮಳೆಯೇ ಆಗಿರಲಿಲ್ಲ. ಇದೀಗ ರಾಜ್ಯದಲ್ಲಿ ನಾಲ್ಕು ಜಲಾಶಯಗಳು ಭರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ಬಾಗಿನ ಅರ್ಪಣೆ‌ ಮಾಡಲು ಬಂದಿದ್ದೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ತುಂಬೈತೆ ಕೆಆರ್ ಎಸ್: ರುದ್ರರಮಣೀಯ ವಿಡಿಯೋ ಐತೆ ನೋಡಿ!ತುಂಬೈತೆ ಕೆಆರ್ ಎಸ್: ರುದ್ರರಮಣೀಯ ವಿಡಿಯೋ ಐತೆ ನೋಡಿ!

ಜಲಾಶಯಗಳು ಭರ್ತಿಯಾದ ವೇಳೆ ಬಾಗಿನ ಅರ್ಪಣೆ‌ ಮಾಡುವುದು ಹಿಂದಿನಿಂದಲೂ ಪ್ರತೀತಿ. ನಿನ್ನೆ ಗುರುವಾರ ಹಾರಂಗಿಯಲ್ಲಿ ಬಾಗಿನ ಆರ್ಪಣೆ ಮಾಡಿದ್ದೇವೆ. ಇಂದು ಶುಕ್ರವಾರ ಕೆಆರ್ ಎಸ್ ಗೆ ಅರ್ಪಣೆ ಮಾಡಿದೆ. ನಂತರ ಕಬಿನಿಯಲ್ಲಿ ಬಾಗಿನ ಅರ್ಪಣೆ ಮಾಡುತ್ತೇವೆ ಎಂದರು.

ನಮ್ಮ‌ ಸಚಿವ ಸಂಪುಟದ ಕೆಲವು ಸಚಿವರುಗಳ ಸಹ ಬಾಗಿನ ಅರ್ಪಣೆ‌ ಮಾಡಲು ನನ್ನ‌ ಜೊತೆ ಬಂದಿದ್ದಾರೆ ಎಂದು ಮೈಸೂರಿನಲ್ಲಿ‌ ಸಿಎಂ‌ ಕುಮಾರಸ್ವಾಮಿ ಹೇಳಿದರು.

Kumaraswamy offers bagina to KRS reservoir

ಮಾಜಿ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ನಿರಾಕರಿಸಿದ ಅವರು, ನಾನು ಈ ಸಮಯದಲ್ಲಿ ರಾಜಕೀಯ ವಿಚಾರಗಳಿಗೆ ಉತ್ತರಿಸುವುದಿಲ್ಲ ಎಂದರು.

45 ವರ್ಷದ ಬಳಿಕ ದಾಖಲೆ ಬರೆದ ಕಾವೇರಿ ಕಣಿವೆಯ 4 ಜಲಾಶಯಗಳು!45 ವರ್ಷದ ಬಳಿಕ ದಾಖಲೆ ಬರೆದ ಕಾವೇರಿ ಕಣಿವೆಯ 4 ಜಲಾಶಯಗಳು!

ಚಾಮುಂಡೇಶ್ವರಿ ದರ್ಶನ ಪಡೆದ ಸಿಎಂ
ಬೆಳಗ್ಗೆ ನಾಡ ಅಧಿದೇವತೆ ದರ್ಶನಕ್ಕೆ ಆಗಮಿಸಿದ ಸಿಎಂ ಅವರನ್ನು ಚಾಮುಂಡಿ ಬೆಟ್ಟದ ಅಡಳಿತ ಮಂಡಳಿ ಪೂರ್ಣ ಕುಂಭ ಹೊತ್ತು ಅದ್ದೂರಿಯಾಗಿ ಸ್ವಾಗತಿಸಿತು. ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಸಿಎಂ ದಂಪತಿ ಸಮೇತ ಆಗಮಿಸಿದ್ದರು.

ಸಿಎಂಗೆ ಸಚಿವ ಜಿ‌ಟಿ.ದೇವೇಗೌಡ, ಡಿ.ಕೆ.ಶಿವಕುಮಾರ್, ಎನ್.ಮಹೇಶ್ ಮತ್ತಿತರರು ಸಾಥ್ ನೀಡಿದರು.

English summary
Chief Minister Kumaraswamy offers bagina to KRS reservoir. Minister GT Deve Gowda, DK Shivakumar, N. Mahesh and others were present.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X