ರೈಲು ಬಳಸಿ ಮುಷ್ಕರ ಬಿಸಿ ತಪ್ಪಿಸಿಕೊಂಡ ಮೈಸೂರಿಗರು

Written By:
Subscribe to Oneindia Kannada

ಮೈಸೂರು, ಜುಲೈ, 25: ಸದಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಮೈಸೂರಿನ ನಗರ ಬಸ್ ನಿಲ್ದಾಣ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಗಳು ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಬಿಕೋ ಎನ್ನುತ್ತಿದ್ದವು.

ಕೆಲವರು ಬಸ್ ನಿಲ್ದಾಣಗಳಲ್ಲಿ ಅಡ್ಡಾಡುತ್ತಿರುವುದನ್ನು ಹೊರತು ಪಡಿಸಿದರೆ ಮೈಸೂರಿನಲ್ಲಿ ಅಂತಹ ಸಮಸ್ಯೆ ಕಂಡು ಬಂದಿಲ್ಲ. ನಗರ ಹೊರತು ಪಡಿಸದಂತೆ ಗ್ರಾಮೀಣ ಪ್ರದೇಶಗಳ ಕಡೆಗೆ ಖಾಸಗಿ ಬಸ್ ಹಾಗೂ ಇತರೆ ವಾಹನಗಳು ತೆರಳುತ್ತಿರುವುದರಿಂದ ಅಲ್ಲದೆ ಮೊದಲೇ ಜನ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿರುವುದರಿಂದ ಅಂತಹ ಸಮಸ್ಯೆ ಕಂಡು ಬಂದಿಲ್ಲ.[ಎಲ್ಲ ಪ್ರತಿಭಟನೆಗಳನ್ನು ಸರ್ಕಾರ ಹತ್ತಿಕ್ಕುತ್ತಿರುವುದೇಕೆ?]

ಮುಷ್ಕರ ಕೂಡ ಶಾಂತಿಯುತವಾಗಿ ನಡೆದ ಪರಿಣಾಮ ಯಾವುದೇ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ. ಬಸ್ ಗಳನ್ನು ಡಿಪೋ ಬಳಿ ನಿಲ್ಲಿಸಲಾಗಿದ್ದು, ಬಸ್ ನಿಲ್ದಾಣ ಮಾತ್ರ ಖಾಲಿ ಖಾಲಿಯಾಗಿ ಕಂಗೊಳಿಸುತ್ತಿವೆ.

ಆಟೋ ಕಾರು ಬಾರು

ಆಟೋ ಕಾರು ಬಾರು

ಹೆಚ್ಚನುವರು ಆಟೋಗಳಲ್ಲಿ ಓಡಾಡುತ್ತಿರುವುದರಿಂದ ಎಲ್ಲೆಡೆ ಆಟೋಗಳದ್ದೇ ಕಾರುಬಾರು ಕಂಡು ಬಂತು. ಮ್ಯಾಕ್ಸಿಕ್ಯಾಬ್ ಗಳಲ್ಲಿ ಜನ ಓಡಾಡುತ್ತಿರುವುದರಿಂದ ಮಾಮೂಲಿಗಿಂತ ಹೆಚ್ಚಿನ ದರವನ್ನು ಪಡೆದ ಪ್ರಕರಣಗಳು ವರದಿಯಾಗಿವೆ.

ಕೇರಳ ಪ್ರಯಾಣ ಸುಗಮ

ಕೇರಳ ಪ್ರಯಾಣ ಸುಗಮ

ಕೇರಳಕ್ಕೆ ಮೈಸೂರಿನಿಂದ ಖಾಸಗಿ ಬಸ್ ಸಂಪರ್ಕ ಇದ್ದ ಕಾರಣ ಯಾವ ತಾಪತ್ರಯ ಆಗಲಿಲ್ಲ, ಪ್ರವಾಸಿಗರು ಖಾಸಗಿ ಬಸ್ ಆಶ್ರಯಿಸಿದರು.

ಮಕ್ಕಳ ಪರದಾಟ ಇಲ್ಲ

ಮಕ್ಕಳ ಪರದಾಟ ಇಲ್ಲ

ಮುಷ್ಕರದ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಿರುವುದರಿಂದ ವಿದ್ಯಾರ್ಥಿಗಳ ಪರದಾಟ ಕಂಡು ಬರಲಿಲ್ಲ. ಬಸ್ ಸಂಚಾರ ಇಲ್ಲದಿದ್ದರೂ ನಗರದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡು ಬರಲಿಲ್ಲ.

 ರೈಲಿನತ್ತ ನುಗ್ಗಿದ ಪ್ರಯಾಣಿಕರು

ರೈಲಿನತ್ತ ನುಗ್ಗಿದ ಪ್ರಯಾಣಿಕರು

ಮೈಸೂರಿನಿಂದ ಬೆಂಗಳೂರಿಗೆ ತೆರಳುವವರು ರೈಲ್ವೆ ವ್ಯವಸ್ಥೆಯನ್ನು ಸರಿಯಾಗಿ ಬಳಸಿಕೊಂಡರು. ವಾರದ ಕೊನೆಯಲ್ಲಿ ಪ್ರವಾಸಿಗರು ನಗರಕ್ಕೆ ಬಂದಿದ್ದರಾದರೂ ಮುಷ್ಕರದ ವಿಷಯ ತಿಳಿದ ಮೊದಲೇ ಮರಳಿದ್ದರು.

ಸಂಚಾರ ವಿರಳ

ಸಂಚಾರ ವಿರಳ

ಮೈಸೂರಲ್ಲಿ ಸಾರಿಗೆ ಸಂಚಾರ ವಿರಳವಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru: KSRTC strike effects Mysuru district on 25 July. Public transportation was badly affected in the district on Monday (July 25) as most of the KSRTC employees did not turn up for duty owing to their indefinite strike demanding a salary hike.
Please Wait while comments are loading...