ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಮುಕ್ತ ವಿವಿಯಲ್ಲಿ 35 ಕೋರ್ಸ್‌ಗಳಿಗೆ ಶೀಘ್ರ ಮಾನ್ಯತೆ

By Nayana
|
Google Oneindia Kannada News

ಮೈಸೂರು, ಜು.6: ಕಳೆದ ಎರಡು ವರ್ಷಗಳಿಂದ ಮಾನ್ಯತೆ ಸಮಸ್ಯೆಯಲ್ಲಿ ಸಿಲುಕಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಈಗ ಸ್ವಲ್ಪ ನಿಟ್ಟುಸಿರು ಬಿಟ್ಟಿದೆ. ಮುಕ್ತ ವಿವಿಗೆ ಆದಷ್ಟು ಬೇಗ ಮತ್ತೆ ಮಾನ್ಯತೆ ದೊರೆಯಲಿದೆ ಎನ್ನುವ ಭರವಸೆ ಮೂಡಿದೆ.

ಕಳೆದ ಎರಡು ವರ್ಷಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದರು, ಇದೀಗ ಮುಕ್ತ ವಿವಿ ಇನ್‌ಹೌಸ್‌ ಕೋರ್ಸ್‌ಗಳು, ತಾಂತ್ರಿಕೇತರ ಕೋರ್ಸ್‌ಗಳಿಗೆ ಮಾನ್ಯತೆ ನೀಡಲು ಯುಜಿಸಿ ಮನಸ್ಸು ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ದೆಹಲಿಯಲ್ಲಿ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ ಮುಕ್ತ ವಿವಿ ನಿಯೋಗದೊಂದಿಗೆ ಸಭೆ ನಡೆಸಿತ್ತು.

ಪ್ರಶ್ನೆಪತ್ರಿಕೆ ಕೋಡ್‌ ಅದಲು ಬದಲು, ವಿಟಿಯು ಪರೀಕ್ಷೆ ಮುಂದಕ್ಕೆ ಪ್ರಶ್ನೆಪತ್ರಿಕೆ ಕೋಡ್‌ ಅದಲು ಬದಲು, ವಿಟಿಯು ಪರೀಕ್ಷೆ ಮುಂದಕ್ಕೆ

ಈ ಹಿನ್ನೆಲೆಯಲ್ಲಿ ಯುಜಿಸಿ ನಿವೃತ್ತ ಅಧ್ಯಕ್ಷ ಪ್ರೊ. ವಿ.ಎಚ್‌. ಚವ್ಹಾಣ್‌ ಅಧ್ಯಕ್ಷತೆಯ ಯುಜಿಸಿ ಪರಿಣಿತರ ಸಮಿತಿ ಸಭೆ ಮುಂದೆ ಗುರುವಾರ ಹಾಜರಾದ ನಿಯೋಗ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದ ಪೂರಕ ದಾಖಲೆಗಳ ಮೂರು ಪ್ರತಿಯನ್ನು ನೀಡಿತು. ಮುಕ್ತ ವಿವಿ ಕುಲಪತಿ ಪ್ರೊ. ಡಿ. ಶಿವಲಿಂಗಯ್ಯ ಕೂಡ ವಿಯಷವನ್ನು ಮನವರಿಕೆ ಮಾಡಿಕೊಟ್ಟರು.ನಿಯೋಗದಲ್ಲಿ ಕುಲಸಚಿವ ಡೀನ್‌, ಯುಜಿಸಿ ಸಂಯೋಜಕರಿದ್ದರು.

KSOU may get recognition for 35 courses soon

ಮುಕ್ತ ವಿವಿಯ ಈ ವರ್ಷ ಶೈಕ್ಷಣಿಕ ಅವಧಿಗೆ ಮಾನ್ಯತೆ ನೀಡುವ ಕುರಿತು ಯುಜಿಸಿಯಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಸಭೆಯಲ್ಲೂ ಯಾವುದೇ ಅಡ್ಡಿ ಉಂಟಾಗುವ ವಿಷಯಗಳ ಬಗ್ಗೆ ಚರ್ಚೆಯಾಗಿಲ್ಲ.ಹೀಗಾಗಿ, ಇನ್ನು ಒಂದು ತಿಂಗಳಲ್ಲಿಯುಜಿಸಿ ಅಧಿಕೃತ ಆದೇಶ ಹೊರಡಿಸುವ ವಿಶ್ವಾಸ ಇದೆ. ಹೀಗಾಗಿ ಜೈಲೈಯಿಂದಲೇ ವಿವಿಯ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಲಿದೆ ಎಂದು ಕುಲಪತಿ ಪ್ರೊ. ಡಿ. ಶಿವಲಿಂಗಯ್ಯ ತಿಳಿಸಿದ್ದಾರೆ.

English summary
The University Grants Commission (UGC) is likely to grant recognition to 35 courses, proposed by the Karnataka State Open University (KSOU), in a couple of days. A delegation, of KSOU officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X