ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಪಿಎಲ್ ಫೈನಲ್ಸ್ ಗೆ ಸಾಕ್ಷಿಯಾಗಲಿದೆ ಸಾಂಸ್ಕೃತಿಕ ನಗರಿ ಮೈಸೂರು

By ಯಶಸ್ವಿನಿ
|
Google Oneindia Kannada News

ಮೈಸೂರು, ಆಗಸ್ಟ್ 9 : ಮೈಸೂರಿನಲ್ಲಿ ಮುಂದಿನ ಒಂದೆರಡು ತಿಂಗಳು ಹಬ್ಬದ ವಾತಾವರಣ. ಒಂದೆಡೆ ದಸರಾ ಕ್ರೀಡೆಯ ಸಂಭ್ರಮ, ಮತ್ತೊಂದೆಡೆ ಕ್ರಿಕೆಟ್ ಲೋಕದ ಅನಾವರಣ. ಹೌದು, ಈ ಬಾರಿಯ ಟೂರ್ನಿ ಆ.15 ರಂದು ಬೆಂಗಳೂರಿನಲ್ಲಿ ಆರಂಭಗೊಂಡು, ಹುಬ್ಬಳ್ಳಿಗೆ ಸಾಗಿ, ಮೈಸೂರಿನಲ್ಲಿ ಕೊನೆಗೊಳ್ಳಲಿದೆ.

ಬೆಂಗಳೂರಿನಲ್ಲಿ ಮೂರು ಪಂದ್ಯಗಳು ಹಾಗೂ ಹುಬ್ಬಳ್ಳಿಯಲ್ಲಿ 11 ಪಂದ್ಯಗಳನ್ನು ಆಯೋಜಿಸಲಾಗಿದೆ. ಮೈಸೂರಿನಲ್ಲಿ ಆ. 28 ರಿಂದ ಸೆ. 6ರ ವರೆಗೆ ಪಂದ್ಯಗಳು ನಡೆಯಲಿವೆ.

ನಗರದ ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣವು ಎರಡು ಸೆಮಿಫೈನಲ್ ಮತ್ತು ಫೈನಲ್‌ ಸೇರಿದಂತೆ ಒಟ್ಟು 10 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಕಳೆದ ಬಾರಿಯ ಸೆಮಿ ಹಾಗೂ ಫೈನಲ್‌ ಪಂದ್ಯಗಳು ಹುಬ್ಬಳ್ಳಿಯಲ್ಲಿ ನಡೆದಿದ್ದವು. ಈ ಬಾರಿ ಆ ಅವಕಾಶ ಮೈಸೂರಿಗೆ ಲಭಿಸಿದೆ. ಏಳು ಲೀಗ್‌ ಪಂದ್ಯಗಳು ಮೈಸೂರಿನಲ್ಲಿ ಆಯೋಜನೆಯಾಗಿವೆ.

ಮೈಸೂರು ವಾರಿಯರ್ಸ್ ನಿಂದ ಕೆಪಿಎಲ್ ಗಾಗಿ ಟ್ಯಾಲೆಂಟ್ ಹಂಟ್ಮೈಸೂರು ವಾರಿಯರ್ಸ್ ನಿಂದ ಕೆಪಿಎಲ್ ಗಾಗಿ ಟ್ಯಾಲೆಂಟ್ ಹಂಟ್

ಆ. 28 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಮೈಸೂರು ವಾರಿಯರ್ಸ್-ಶಿವಮೊಗ್ಗ ಲಯನ್ಸ್ ತಂಡಗಳು ಎದುರಾಗಲಿವೆ.

ಸೆ.1 ಮತ್ತು ಸೆ. 2ರಂದು ತಲಾ ಎರಡು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಮಧ್ಯಾಹ್ನ 2 ಗಂಟೆಗೆ ಹಾಗೂ ಎರಡನೇ ಪಂದ್ಯ ಸಂಜೆ 6.30ಕ್ಕೆ ಆರಂಭವಾಗಲಿದೆ. ಎರಡು ಲೀಗ್‌ ಪಂದ್ಯಗಳನ್ನು ಹೊರತುಪಡಿಸಿ ಇತರ ಎಲ್ಲ ಪಂದ್ಯಗಳು ಹೊನಲು ಬೆಳಕಿನಲ್ಲಿ ನಡೆಯಲಿವೆ.

ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಪಂದ್ಯಗಳಿಗೆ ಆತಿಥ್ಯ ವಹಿಸಿದ್ದ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಕೆಪಿಎಲ್ ಟೂರ್ನಿಯ ಆಯೋಜನೆಗೆ ಸಿದ್ಧತೆ ನಡೆಯುತ್ತಿದೆ. ತವರಿನ ತಂಡ ಮೈಸೂರು ವಾರಿಯರ್ಸ್ ಆಟಗಾರರು ಟೂರ್ನಿಗೆ ಕಠಿಣ ತರಬೇತಿ ನಡೆಸುತ್ತಿದ್ದಾರೆ. ಹಲವು ಹೊಸಬರನ್ನು ಸೇರಿಸಿಕೊಂಡಿರುವ ತಂಡ ಬಲಿಷ್ಠವಾಗಿದ್ದು, ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದೆ.

 ಟಿಕೆಟ್ ದರ ನಿರ್ಧಾರವಾಗಿಲ್ಲ

ಟಿಕೆಟ್ ದರ ನಿರ್ಧಾರವಾಗಿಲ್ಲ

ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ನಡೆಯಲಿರುವ ಪಂದ್ಯಗಳ ಟಿಕೆಟ್ ದರ ನಿರ್ಧಾರವಾಗಿದ್ದು, ಆನ್‌ಲೈನ್‌ನಲ್ಲಿ ಟಿಕೆಟ್ ಗಳು ಲಭ್ಯವಿದೆ. ಮೈಸೂರಿನಲ್ಲಿ ನಡೆಯಲಿರುವ ಪಂದ್ಯಗಳ ಟಿಕೆಟ್ ‌ ದರ ನಿರ್ಧಾರವಾಗಿಲ್ಲ. ಬೆಂಗಳೂರಿನ ಪಂದ್ಯಗಳ ಟಿಕೆಟ್ ಗೆ 5 ರೂ.ನಿಂದ 1000 ಹಾಗೂ ಹುಬ್ಬಳ್ಳಿಯ ಪಂದ್ಯಗಳಿಗೆ 50 ರಿಂದ 300ರೂ ವರೆಗೆ ದರ ನಿಗದಿಪಡಿಸಲಾಗಿದೆ.

ಮೈಸೂರಿನಲ್ಲಿ ನಡೆಯಲಿರುವ ಪಂದ್ಯಗಳ ಟಿಕೆಟ್ ದರವನ್ನು ಮುಂದಿನ ವಾರ ನಡೆಯಲಿರುವ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಕೆಎಸ್ ಸಿಎ ಮೈಸೂರು ವಲಯ ನಿಯಂತ್ರಕ ಎಸ್‌.ಬಾಲಚಂದರ್ ತಿಳಿಸಿದರು.

ಮೈಸೂರು ವಾರಿಯರ್ಸ್ ನಾಯಕ ಸುಚಿತ್

ಮೈಸೂರು ವಾರಿಯರ್ಸ್ ನಾಯಕ ಸುಚಿತ್

ಇತ್ತ ಆಲ್ ರೌಂಡರ್ ಜೆ.ಸುಚಿತ್ ಅವರನ್ನು ಮೈಸೂರು ವಾರಿಯರ್ಸ್ ತಂಡದ ನಾಯಕರಾಗಿ ನೇಮಿಸಲಾಗಿದೆ. ಕಳೆದ ಬಾರಿಯ ಟೂರ್ನಿಯಲ್ಲಿ ತಂಡವನ್ನು ಕರುಣ್ ನಾಯರ್ ಮುನ್ನಡೆಸಿದ್ದರು. ಈ ಸಲದ ಟೂರ್ನಿಗೆ ಕರುಣ್ ಲಭ್ಯರಿಲ್ಲ. ಇದರಿಂದ ನಾಯಕತ್ವದ ಜವಾಬ್ದಾರಿ ಯಾರ ಹೆಗಲಿಗೆ ಬೀಳಲಿದೆ ಎಂಬ ಕುತೂಹಲವಿತ್ತು.

ಎಡಗೈ ಸ್ಪಿನ್ನರ್ ಆಗಿರುವ ಸುಚಿತ್ ಕೆಳಗಿನ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಕಳೆದ ಬಾರಿಯ ಟೂರ್ನಿಯಲ್ಲಿ 'ಪರ್ಪಲ್ ಕ್ಯಾಪ್'ಪಡೆದಿದ್ದರಲ್ಲದೆ, 13 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಗಮನ ಸೆಳೆದಿದ್ದರು. ಸುಚಿತ್ ಅವರು ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದಾರೆ.

ಪಂದ್ಯಗಳ ವೇಳಾಪಟ್ಟಿ

ಪಂದ್ಯಗಳ ವೇಳಾಪಟ್ಟಿ

ಆ. 28: ಮೈಸೂರು ವಾರಿಯರ್ಸ್-ಶಿವಮೊಗ್ಗ ಲಯನ್ಸ್ (ಆರಂಭ ಸಂಜೆ 6.30).
ಆ. 29: ಶಿವಮೊಗ್ಗ ಲಯನ್ಸ್-ಬೆಳಗಾವಿ ಪ್ಯಾಂಥರ್ಸ್ (ಸಂಜೆ 6.30).
ಸೆ. 1: ಮೈಸೂರು ವಾರಿಯರ್ಸ್-ಬೆಳಗಾವಿ ಪ್ಯಾಂಥರ್ಸ್ (ಆರಂಭ ಮಧ್ಯಾಹ್ನ 2.00)
ಹುಬ್ಬಳ್ಳಿ ಟೈಗರ್ಸ್- ಬೆಂಗಳೂರು ಬ್ಲಾಸ್ಟರ್ಸ್ (ಸಂಜೆ 6.30).
ಸೆ. 2: ಶಿವಮೊಗ್ಗ ಲಯನ್ಸ್- ಬಿಜಾಪುರ ಬುಲ್ಸ್ (ಮಧ್ಯಾಹ್ನ 2.00);
ಬೆಂಗಳೂರು ಬ್ಲಾಸ್ಟರ್ಸ್- ಮೈಸೂರು ವಾರಿಯರ್ಸ್ (ಸಂಜೆ 6.30).
ಸೆ. 3: ಬಳ್ಳಾರಿ ಟಸ್ಕರ್ಸ್- ಶಿವಮೊಗ್ಗ ಲಯನ್ಸ್ (ಸಂಜೆ 6.30)
ಸೆ. 4: ಮೊದಲ ಸೆಮಿಫೈನಲ್, ಸೆ.5: ಎರಡನೇ ಸೆಮಿಫೈನಲ್, ಸೆ.6: ಫೈನಲ್
(ಎಲ್ಲ ಪಂದ್ಯಗಳು ಸಂಜೆ 6.30 ಕ್ಕೆ ಆರಂಭವಾಗಲಿವೆ)

 ಮೆಂಟರ್ ಆಗಿ ಮಾಜಿ ಬೌಲರ್ ವೆಂಕಟೇಶ್ ಪ್ರಸಾದ್

ಮೆಂಟರ್ ಆಗಿ ಮಾಜಿ ಬೌಲರ್ ವೆಂಕಟೇಶ್ ಪ್ರಸಾದ್

ಮೈಸೂರು ವಾರಿಯರ್ಸ್ ತಂಡದ ಮೆಂಟರ್ ಆಗಿ ಭಾರತ ಕ್ರಿಕೆಟ್ ತಂಡದ ಮಾಜಿ ಬೌಲರ್ ವೆಂಕಟೇಶ್ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ. ಮೈಸೂರು ವಾರಿಯರ್ಸ್ ಮಾಲೀಕ ಎನ್ ಆರ್ ಸಮೂಹವು ಇಂದು ಕರ್ನಾಟಕ ಪ್ರೀಮಿಯರ್ ಲೀಗ್ 2018ರ ತಂಡವನ್ನು ಪರಿಚಯಿಸಿದೆ.

ಈ ಬಾರಿಯ ಆವೃತ್ತಿಗೆ ಕಿಶನ್ ಬೆಡಾರೆ ಮತ್ತು ಗೌತಮ್ ಸಾಗರ್ ಇಬ್ಬರು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ ತಂಡಕ್ಕೆ ವಿವಿಧ ಕಂಪನಿಗಳು ಪ್ರಾಯೋಜಕತ್ವ ವಹಿಸಿವೆ.

 ನೂತನ ತಂಡ ಹೀಗಿದೆ ನೋಡಿ

ನೂತನ ತಂಡ ಹೀಗಿದೆ ನೋಡಿ

ಅಮಿತ್ ವರ್ಮಾ, ಕೆ.ಗೌತಮ್, ಜೆ. ಸುಚಿತ್(ನಾಯಕ), ರಾಜೂ ಭಟ್ಕಳ, ಬಿ.ಎನ್ ಭರತ್, ಎಸ್.ಪಿ ಮಂಜುನಾಥ್, ಶೋಯೆಬ್ ಮ್ಯಾನೇಜರ್, ಅರ್ಜುನ್ ಹೊಯ್ಸಳ, ಕೆ.ವಿ ಸಿದ್ಧಾರ್ಥ್, ಪ್ರತಿಕ್ ಜೈನ್, ವೈಶಾಕ್ ವಿಜಯ್ ಕುಮಾರ್, ಶರತ್ ಶ್ರೀನಿವಾಸ್, ಮನೋಜ್ ಕೆ.ಎಚ್, ಕುಶಾಲ್ ವಾಧ್ವಾನಿ, ಲವ್ನಿತ್ ಸಿಸೋಡಿಯಾ, ವಿನಯ್ ಸಾಗರ್, ಕಿಶನ್ ಬೆಡಾರೆ, ಗೌತಮ್ ಸಾಗರ್.

English summary
KPL matches will be held from August 28 to September 6 in Mysore. Matches will be held at the Gangotri Glades Stadium in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X