'ಹಾಳಾಗಿ ಹೋಗ್ತೀಯಾ' ಸಿಎಂಗೆ ಕೊಳ್ಳೇಗಾಲದ ವ್ಯಕ್ತಿಯಿಂದ ಶಾಪ

Written By:
Subscribe to Oneindia Kannada

ಮೈಸೂರು, ಜೂನ್, 28: " ಸಾರ್ ನಮ್ಮ ತಾಯಿಗೆ ಮೈ ಹುಷಾರಿಲ್ಲ, ಏನಾದ್ರೂ ಸಹಾಯ ಮಾಡಿ" ಎಂದು ಬೇಡಿಕೊಂಡವನಿಗೆ ಸ್ಪಂದಿಸದೇ ತರಾತುರಿಯಲ್ಲಿ ಕಾರು ಏರಿದ ಸಿಎಂ ಸಿದ್ದರಾಮಯ್ಯಗೆ ಸಿಕ್ಕಿದ್ದು "ಹಾಳಾಗಿ ಹೋಗ್ತೀಯಾ" ಎಂಬ ಶಾಪ.

ಯದುವೀರ್ ಅರಸ್ ಮದುವೆಗೆ ಭೇಟಿ ನೀಡಿ ಸೋಮವಾರ ರಾತ್ರಿ ಮೈಸೂರಿನಲ್ಲೇ ತಂಗಿದ್ದ ಸಿದ್ದರಾಮಯ್ಯ ಬೆಳಗ್ಗೆ ಜನತಾ ದರ್ಶನವನ್ನು ಹಮ್ಮಿಕೊಂಡಿದ್ದರು. ಮೈಸೂರಿನ ಶಾರದಾ ನಗರದಲ್ಲಿರುವ ತಮ್ಮ ನಿವಾಸದ ಬಳಿ ಜನರಿಂದ ಅಹವಾಲು ತೆಗೆದುಕೊಳ್ಳುವ ಕಾರ್ಯಕ್ರಮ ಇಟ್ಟುಕೊಂಡಿದ್ದರು.[ಕಾಗೆ ಹಾರಿಸೋದು ಅಂದ್ರೆ ಏನು, ನಿಮಗೇನಾದ್ರೂ ಗೊತ್ತಾ?]

mysuru

ಆಗ ಆಗಮಿಸಿದ ಒಬ್ಬ ವ್ಯಕ್ತಿ ಸಿದ್ದರಾಮಯ್ಯ ಅವರಿಗೆ ಕೆಂಪು ಶಾಲೊಂದನ್ನು ನೀಡಲು ಬಂದಿದ್ದಾರೆ. ಪೂಜೆ ಮಾಡಿ ತಂದಿದ್ದೇನೆ ಇದನ್ನು ಸಿದ್ದರಾಮಯ್ಯ ಅವರಿಗೆ ನೀಡುತ್ತೇನೆ ಎಂದು ಕಾರು ಏರಲು ಮುಂದಾಗಿದ್ದ ಸಿಎಂ ಬಳಿ ತೆರಳಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಅವರನ್ನು ತಡೆದಿದ್ದಾರೆ.[ಸಿಎಂ ಕಾರಿನ ಮೇಲೆ ಕುಳಿತ ಕಾಗೆಗೆ ಮಾಧ್ಯಮಗಳ ರೆಕ್ಕೆ ಪುಕ್ಕ!]

ನಂತರ ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ಪ್ರಶ್ನೆ ಮಾಡಿದಾಗ "ನಾನು ಕೊಳ್ಳೇಗಾಲದವನು ಸ್ವಾಮಿ, ಏನಾದ್ರೂ ಸಹಾಯ ಮಾಡಿ ಎನ್ನುತ್ತಾ ಮುಂದಕ್ಕೆ ಬರಲು ತಯಾರಿ ಮಾಡಿದ್ದಾರೆ. ಇದೇ ಸಮಯಕ್ಕೆ ಸರಿಯಾಗಿ ಸಿಎಂ ಕಾರು ಏರಿದ್ದಾರೆ. ಈ ವೇಳೆ ಕುಪಿತಗೊಂಡ ವ್ಯಕ್ತಿ ಸಿಎಂ ಕಾರಿನ ಚಾಲಕನ ಕಿಟಕಿ ಬಳಿ ತೆರಳಿ "ಹಾಳಾಗಿ ಹೋಗ್ತೀಯಾ" ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ.[ಸಾಡೇಸಾತಿ ಎಂದರೇನು, ಏನಿದರ ಮರ್ಮ?]

ಇದು ಕಾಕತಾಳೀಯವೋ ಅಥವಾ ಬೇಕಂತಲೇ ಮಾಡಿದ್ದೋ ಗೊತ್ತಿಲ್ಲ. ಆದರೆ ಕೊಳ್ಳೆಗಾಲ ಎನ್ನುವುದಕ್ಕೂ ಸಿಎಂ ದೂರ ಸರಿಯುವುದಕ್ಕೂ ಸರಿಯಾಗಿದ್ದು ಮಂಗಳವಾರ ಬೆಳಗ್ಗೆಯ ಬ್ರೇಕಿಂಗ್ ನ್ಯೂಸ್ ಆಯ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysuru: After crow incident now CM Siddaramaiah faced one more incident related to superstitious aspect. When CM Siddaramaiah in Janatha Darshan at Mysuru on 28 June morning incident happened.
Please Wait while comments are loading...