ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾರಿಗೆ ಸಾಲುತ್ತೆ ಸಂಬಳ? : ಸಂಸದ ಪ್ರತಾಪ್ ಪ್ರಶ್ನೆ

By Mahesh
|
Google Oneindia Kannada News

ಬೆಂಗಳೂರು, ಅ.04: ಮೈಸೂರು -ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಸ್ಕೈ ಡೈವಿಂಗ್ ಸಾಹಸದ ನಂತರ ಸಂಸದರ ಸಂಬಳ ಏರಿಕೆ ಬಗ್ಗೆ ಬರೆದ ಸಾಲುಗಳು ಭಾರಿ ಚರ್ಚೆಗೊಳಪಡುತ್ತಿವೆ. ಸಂಸದರಿಗೆ ಕನಿಷ್ಠ 3 ಲಕ್ಷ ವೆತನ ಇರಲಿ ಎಂದು ಫೇಸ್ ಬುಕ್ ನಲ್ಲಿ ಹಾಕಿರುವ ಪೇಪರ್ ಕಟ್ಟಿಂಗ್ ಸದ್ದು ಮಾಡುತ್ತಿದೆ.

ಸಂಸದರಿಗೆ 50 ಸಾವಿರ ರು ವೇತನ ಸಿಗುತ್ತಿದೆ. ಇದು ಯಾರಿಗೂ ಸಾಲುವುದಿಲ್ಲ. ಕನಿಷ್ಠ 3 ಲಕ್ಷ ರು.ಗೇರಿಸಿ, ಮೈಸೂರಿನಲ್ಲಿರುವ ಮನೆ ಬಾಡೀಗೆ 22 ಸಾವಿರ ರು , ವಿದ್ಯುತ್, ನೀರಿನ ಬಿಲ್ 3 ಸಾವಿರ, ಮಗಳ ಶಾಲೆಯ ವಾರ್ಷಿಕ ಶುಲ್ಕ 90 ಸಾವಿರ ರು, ಕುಟುಂಬ ನಿರ್ವಹಣೆ ಮಾಡಲು 50 ರು ಸಾಲುತ್ತಿಲ್ಲ ಎಂದು ಸಂಪಾದಕರಿಗೆ ಬರೆದ ಪತ್ರ ಈಗ ಮತ್ತೊಮ್ಮೆ ಸುದ್ದಿಯಾಗುತ್ತಿದೆ.[ಶಾಸಕರ ಸಂಬಳ ಎಷ್ಟು ಗೊತ್ತಾ?]

ಮನೆಗೆ ಬಂದ ಅತಿಥಿಗಳಿಗೆ ಕಾಫಿ ಟೀ ಪೂರೈಸುವುದಕ್ಕೆ ತಿಂಗಳಿಗೆ 2,500 ರು ಬೇಕಾಗುತ್ತದೆ. ಸ್ಟೇಷನರಿ ಕಾರ್ಯ ನಿರ್ವಹಣೆಗೆ 15ಸಾವಿರ ರು ಬೇಕು. [ಸರ್ಕಾರಿ ನೌಕರರ ಟೇಕ್ ಹೋಮ್ ಸ್ಯಾಲರಿ]

 ಸಂಸದರ ಸಂಬಳ ಏರಿಕೆ ಪರ ಪ್ರತಾಪ್

ಸಂಸದರ ಸಂಬಳ ಏರಿಕೆ ಪರ ಪ್ರತಾಪ್

ಮೈಸೂರು -ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಸಂಸದರ ಸಂಬಳ ಏರಿಕೆ ಪರ ಮಾತನಾಡಿದ್ದು ಈಗ ಭಾರಿ ಚರ್ಚೆಗೀಡಾಗುತ್ತಿದೆ.

ಪತ್ನಿಯ ಕಾಲು ಚಿಕಿತ್ಸೆ, ಕೃತಕ ಕಾಲು ವೆಚ್ಚ

ಪತ್ನಿಯ ಕಾಲು ಚಿಕಿತ್ಸೆ, ಕೃತಕ ಕಾಲು ವೆಚ್ಚ

ನನ್ನ ಪತ್ನಿಯ ಕೃತಕ ಕಾಲು ಬದಲಾಯಿಸಲು ಸಂಸತ್ತಿನ ಕಚೇರಿಯಿಂದ 10 ಸಾವಿರ ರು ಸಿಗುತ್ತದೆ. ಇದರಿಂದ ಜೈಪುರದ ಕಾಲು ಹಾಕಲು ಸಾಧ್ಯವಿಲ್ಲ ಎಂದು ಪ್ರತಾಪ್ ಹೇಳಿಕೊಂಡಿದ್ದಾರೆ.

ಪತ್ರಕರ್ತನಾಗಿದ್ದಾಗ ಪ್ರತಾಪ್ ವೇತನ ಎಷ್ಟಿತ್ತು?

ಪತ್ರಕರ್ತನಾಗಿದ್ದಾಗ ಪ್ರತಾಪ್ ವೇತನ ಎಷ್ಟಿತ್ತು?

ಪತ್ರಕರ್ತನಾಗಿದ್ದಾಗ ನನ್ನ ವೇತನ 1.33 ಲಕ್ಷ ರು ನಷ್ಟಿತ್ತು. ಪುಸ್ತಕಗಳ ರಾಯಲ್ಟಿ 6 ಲಕ್ಷ ರು ಬರುತ್ತಿತ್ತು. ತಿಂಗಳಿಗೆ 1.83 ಲಕ್ಷ ರು ದುಡಿಯುತ್ತಿದ್ದೆ. ಈಗ 50 ಸಾವಿರ ರು ವೆಚ್ಚದಲ್ಲಿ ಸಂಸಾರ ನಿಭಾಯಿಸುವುದು ಕಷ್ಟವಾಗಿದೆ.

ನಾನು ವೇತನ ಹೆಚ್ಚಳ ಪರ ಇದ್ದೇನೆ

ನಾನು ವೇತನ ಹೆಚ್ಚಳ ಪರ ಇದ್ದೇನೆ

ಸಂಸದರಿಗೆ ಶೇ 100ರಷ್ಟು ವೇತನ ಏರಿಕೆಯಾದರೂ 1 ಲಕ್ಷ ರು ದಾಟುವುದಿಲ್ಲ. ಪ್ರಮಾಣಿಕ ಸಂಸದರಿಗೆ ಹೆಚ್ಚಿನ ಸಂಬಳ ನೀಡುವುದರಲ್ಲಿ ತಪ್ಪೇನಿದೆ. ವಿದೇಶಗಳಲ್ಲಿ ಶೇ 99ರಷ್ಟು ಜನಪ್ರತಿನಿಧಿಗಳು ಪ್ರಮಾಣಿಕರಿರುತ್ತಾರೆ. ಅವರಿಗೆ ಕೈ ತುಂಬಾ ಸಂಬಳ ಸಿಗುವಾಗ ಬೇರೆಯವರ ಬಳಿ ಕೈ ಒಡ್ಡುವುದಿಲ್ಲ. ನಾನು ವೇತನ ಹೆಚ್ಚಳ ಪರ ಇದ್ದೇನೆ ಎಂದು ಬರೆದಿದ್ದಾರೆ

ಈ ಹಿಂದೆ ಕೂಡಾ ಈ ಬಗ್ಗೆ ಚರ್ಚೆ ಆಗಿತ್ತು

ಈ ಹಿಂದೆ ಸಂಸದರ ಸಂಬಳ ಏರಿಕೆ ಬಗ್ಗೆ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಚರ್ಚೆ ಆಗಿತ್ತು. ಪ್ರತಾಪ್ ಅವರ ಹಳೆ ಟ್ವೀಟ್ ಹೀಗಿತ್ತು

English summary
'Am struggling coz of paltry 50k per month' claims Mysuru-Kodagu MP Pratap Simha. His facebook post has become viral and talk of the town whether MPs should get more Salary and perks or not?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X