ಅವತ್ತು ಮೈಸೂರು ಅರಮನೆಯಲ್ಲಿ ಏನಾಗಿತ್ತು ಗೊತ್ತಾ?

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜೂನ್ 25 : ವಿಶ್ವದ ಗಮನಸೆಳೆದಿರುವ ಮೈಸೂರು ಅರಮನೆಗೆ ಶತಮಾನದ ಇತಿಹಾಸವಿದೆ. ಆದರೆ, ಇದಕ್ಕೂ ಹಿಂದೆ ಇಲ್ಲಿದ್ದ ಹಳೆಯ ಅರಮನೆಯ ಬಗ್ಗೆ ಮತ್ತು ಅದು ಹೇಗೆ ನಾಶವಾಯಿತು? ಎಂಬುವುದರ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.

ಹಳೆಯ ಅರಮನೆಯನ್ನು 1800 ರಿಂದ 1804ರ ಅವಧಿಯಲ್ಲ್ಲಿ ಕಟ್ಟಲಾಗಿತ್ತು. ಈ ಅರಮನೆಯು ಕಟ್ಟಿಗೆ ಹಾಗೂ ಇಟ್ಟಿಗೆಗಳಿಂದ ನಿರ್ಮಾಣವಾಗಿದ್ದರಿಂದ ಆಕರ್ಷಕವಾಗಿದ್ದರೂ ಸುರಕ್ಷಿತವಾಗಿರಲಿಲ್ಲ. ಹೀಗಾಗಿ ಅದು ಬೆಂಕಿಗೆ ಆಹುತಿಯಾಯಿತು. ಆದರೆ, ಬೆಂಕಿಗೆ ಹೇಗೆ ಆಹುತಿಯಾಯಿತು? ಎಂಬುದು ತಿಳಿದರೆ ಅಚ್ಚರಿಯಾಗಬಹುದು. [ಯದುವೀರ್, ಒಂದು ಪರಿಚಯ]

mysuru palace

1897 ಫೆಬ್ರವರಿ 28ರಂದು ಚಾಮರಾಜೇಂದ್ರ ಒಡೆಯರ್ ಮತ್ತು ವಾಣಿವಿಲಾಸ ಸನ್ನಿಧಾನದವರ ಹಿರಿಯ ಪುತ್ರಿ ಜಯಲಕ್ಷ್ಮಮ್ಮಣ್ಣಿಯವರ ವಿವಾಹ ಸರ್ದಾರ್ ಕಾಂತರಾಜೇ ಅರಸ್ ಅವರೊಂದಿಗೆ ಜರುಗಿದಾಗ ಜಯಲಕ್ಷ್ಮಮ್ಮಣ್ಣಿಯವರ ಕೂದಲಿಗೆ ಸಾಂಬ್ರಾಣಿ ಹೊಗೆ ಕೊಡುವ ಸಂದರ್ಭ ಕೆಂಡವೊಂದು ಕೆಳಗೆ ಬಿದ್ದು ತೇಗದ ಮರಕ್ಕೆ ಬೆಂಕಿ ಹತ್ತಿಕೊಂಡು ಉರಿಯತೊಡಗಿತ್ತು. [40 ವರ್ಷ ಬಳಿಕ ಅರಮನೆಯಲ್ಲಿ ವಿವಾಹ ಸಂಭ್ರಮ!]

ಈ ಬೆಂಕಿಯನ್ನು ಸುಮಾರು 8000 ಮಂದಿ ಸೇರಿ ನಂದಿಸಲು ಪ್ರಯತ್ನಿಸಿದರಾದರೂ ಸಂಪೂರ್ಣವಾಗಿ ನಂದಿಸಲು ಸಾಧ್ಯವಾಗಲಿಲ್ಲ. ಆದರೆ, ಅರಮನೆಯಲ್ಲಿದ್ದ ರಾಜವಂಶಸ್ಥರನ್ನು ಯಾವುದೇ ಪ್ರಾಣಾಪಾಯವಾಗದಂತೆ ಕಾಪಾಡಲಾಗಿತ್ತು. ಬಳಿಕ ರಾಜವಂಶಸ್ಥರು ಸಮೀಪದ ಜಗನ್ಮೋಹನ ಅರಮನೆಯಲ್ಲಿ ವಾಸ್ತವ್ಯ ಹೂಡಿದ್ದರು.[ಯದುವೀರ್ - ತ್ರಿಷಿಕಾ ಮದುವೆ ಚಿತ್ರಗಳು]

mysuru

ಬೆಂಕಿ ಅನಾಹುತದಿಂದ ಅರಮನೆ ನಾಶವಾದ ಬಳಿಕ ಹೊಸ ಅರಮನೆಯನ್ನು ಬೆಂಕಿ ಆಕಸ್ಮಿಕ ಸಂಭವಿಸಿದರೂ ಏನೂ ಆಗದ ರೀತಿಯಲ್ಲಿ ಹೊಸ ಮಾದರಿಯಲ್ಲಿ ನಿರ್ಮಿಸಲು ತೀರ್ಮಾನಿಸಲಾಯಿತು. ಆಗ ನಿರ್ಮಾಣವಾದ ಅರಮನೆಯೇ ಈಗಿನ ಜಗಮಗಿಸುವ ಭವ್ಯ ಅರಮನೆ.[ಅರಮನೆಯಲ್ಲಿ ಯದುವೀರ್ ವಿವಾಹ ಸಂಭ್ರಮ ಆರಂಭ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysuru palace located in the heart of the city. The original palace built of wood, got burnt down in 1897, during the wedding of Jayalakshammanni.
Please Wait while comments are loading...