ಕೆಂಪಯ್ಯ ವಿರುದ್ಧ ಈಗ ಸುಳ್ಳು ಜಾತಿ ಪ್ರಮಾಣ ಪತ್ರ ಆರೋಪ

Posted By:
Subscribe to Oneindia Kannada

ಮೈಸೂರು, ಮೇ 06 : ಗೃಹ ಸಚಿವರ ಸಲಗೆಹಾರ ಕೆಂಪಯ್ಯ ಮತ್ತೆ ಸುದ್ದಿ ಮಾಡಿದ್ದಾರೆ. ಸರ್ಕಾರಿ ನೌಕರಿ ಪಡೆಯಲು ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಅವರು ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪ ಮಾಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಮೈಸೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಪಕ್ಷದ ಪರಿಶಿಷ್ಟ ಪಂಗಡ ವಿಭಾಗದ ಮಾಜಿ ಉಪಾಧ್ಯಕ್ಷ ಎಸ್.ಎಚ್.ಸುಭಾಷ್ ಅವರು, ಕೆಂಪಯ್ಯ ವಿರುದ್ಧ ಆರೋಪಗಳನ್ನು ಮಾಡಿದರು. 'ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಅವರು ಸರ್ಕಾರಿ ನೌಕರಿಗೆ ಸೇರಿದ್ದರು' ಎಂದು ದೂರಿದರು. [ಐಟಿ ಅಧಿಕಾರಿಗಳಿಂದ ಕೆಂಪಯ್ಯ ವಿಚಾರಣೆ]

kempaiah

'ಕೆಂಪಯ್ಯ ಅವರು ಕುರುಬ ಜಾತಿಗೆ ಸೇರಿದವರು. ಆದರೆ, ಅವರು ಸರ್ಕಾರಿ ಕೆಲಸಕ್ಕೆ ಸೇರುವಾಗ ಜೇನು ಕುರುಬ ಎಂದು ಪ್ರಮಾಣ ಪತ್ರ ಮಾಡಿಸಿಕೊಂಡು ಪರಿಶಿಷ್ಟ ಪಂಗಡದ ಮೀಸಲಾತಿ ಅಡಿ ಕೆಲಸ ಪಡೆದಿದ್ದಾರೆ. ಕೆಂಪಯ್ಯ ಅವರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ' ಎಂದು ಹೇಳಿದರು. [ಬೆಂಗಳೂರಿಗರು ಜಾತ್ಯತೀತರಾಗುವುದು ಇನ್ನೂ ಬಹುದೂರ!]

'ಹಿಂದೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಸಿ.ದಿನಕರ್ ಅವರು ಕೆಂಪಯ್ಯ ಅವರ ಸುಳ್ಳು ಜಾತಿ ಪ್ರಮಾಣ ಪತ್ರದ ಬಗ್ಗೆ 2008ರಲ್ಲಿ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ವರದಿ ನೀಡಿದ್ದರು. ಆದರೆ, ಆ ವರದಿ ಬಗ್ಗೆ ಯಾವ ಕ್ರಮಗಳನ್ನು ಕೈಗೊಂಡಿಲ್ಲ' ಎಂದು ಸುಭಾಷ್ ತಿಳಿಸಿದರು. [ಕರ್ನಾಟಕ ಜಾತಿಗಣತಿ ವರದಿ: ಮುಸ್ಲಿಮರು ನಂ. 2?]

ಎಸಿಬಿಗೂ ದೂರು : ಕೆಂಪಯ್ಯ ಅವರು ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಭ್ರಷ್ಟಾಚಾರ ನಿಗ್ರಹದಳಕ್ಕೂ ದೂರು ಸಲ್ಲಿಸಲಾಗಿದೆ. ದಿನೇಶ್ ಕಲ್ಲಹಳ್ಳಿ ಅವರು ಈ ಕುರಿತು ಕಳೆದ ವಾರ ದೂರು ನೀಡಿದ್ದಾರೆ. ಕೆಂಪಯ್ಯ ಅವರು ಕುರುಬ ಸಮುದಾಯಕ್ಕೆ ಸೇರಿದವರು. ಆದರೆ, ತಮ್ಮದು ಕಾಡು ಕುರುಬ ಎಂದು ಸುಳ್ಳು ದಾಖಲೆ ನೀಡಿ ನೌಕರಿ ಪಡೆದಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕನಕಪುರ ಪ್ರೌಢಶಾಲೆಯ ದಾಖಲೆ ಪುಸ್ತಕದಲ್ಲಿ ಕೆಂಪಯ್ಯ ಅವರು 1965-66ರಲ್ಲಿ ಕುರುಬ ಜಾತಿ ಎಂದು ನಮೂದಿಸಿದ್ದರು. ನಂತರ ಕಾಡು ಕುರುಬ ಜಾತಿ ಎಂದು ಹೇಳಿಕೊಂಡರು ಎಂದು ದಿನೇಶ್ ಕಲ್ಲಹಳ್ಳಿ ಆರೋಪಿಸಿದ್ದಾರೆ. ಈಗ ಸುಭಾಷ್ ಅವರು ಕೆಂಪಯ್ಯ ಅವರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress leader S.H.Subash alleged that Karnataka home minister adviser and retired IPS officer Kempaiah submitted fake cast certificate to get govt job.
Please Wait while comments are loading...