ಹೆಚ್ ಡಿ ಕೋಟೆ ಜೆಡಿಎಸ್ ಶಾಸಕ ಚಿಕ್ಕಮಾದು ಆರೋಗ್ಯ ಸ್ಥಿತಿ ಗಂಭೀರ

Posted By:
Subscribe to Oneindia Kannada

ಮೈಸೂರು, ಅಕ್ಟೋಬರ್ 30: ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಹೆಚ್.ಡಿ.ಕೋಟೆ ಜೆಡಿಎಸ್ ಶಾಸಕ ಚಿಕ್ಕಮಾದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ವಾಟ್ಸಪ್ ಮೂಲಕವೂ ಜನರನ್ನು ತಲುಪಲಿದ್ದಾರೆ ಎಚ್.ಡಿ.ಕುಮಾರಸ್ವಾಮಿ

ಬಹು ಅಂಗಾಂಗದಿಂದ ಬಳಲುತ್ತಿರುವ ಶಾಸಕ ಚಿಕಮಾದು, ಇತ್ತೀಚೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

KD Kote JDS MLA Chikkamadu in critical condition

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಶಾಸಕ ಚಿಕ್ಕಮಾದು, ವರ್ಷದ ಹಿಂದಷ್ಟೇ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಪರೇಷನ್ ಆದ ಮೇಲೆ ವಿಶ್ರಾಂತಿ ಪಡೆಯದೇ ಓಡಾಟ ಮಾಡಿದ್ದರಿಂದ ಲಿವರ್ ಇನ್ ಪೆಕ್ಷನ್ ಆಗಿತ್ತು.

ಇದಾದ ಬಳಿಕ ಕೆಲವು ತಿಂಗಳ ಹಿಂದೆ ಅಷ್ಟೇ ಅಮೇರಿಕಾದ ಯುಸ್ಟನ್ ಸ್ಟೇಟ್ ನ ಎಂ ಡಿ ಆಂಡರ್ ಸನ್ ರೀಸರ್ಚ್ ಸೆಂಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮತ್ತೆ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದರಿಂದ ಇತ್ತೀಚೆಗೆ ಮೈಸೂರಿನ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
KD Kote JDS MLA JD(S) Chikkamadu in critical condition. He is admitted to Mysuru private hospital.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ