ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಮಪತ್ರ ಸಲ್ಲಿಕೆಗೂ ಮುನ್ನ ಕುಂಕುಮವಿಟ್ಟು ಸಿದ್ದರಾಮಯ್ಯ ಸಂವಾದ!

By ಮೈಸೂರು ಪ್ರತಿನಿಧಿ
|
Google Oneindia Kannada News

Recommended Video

ಸಿದ್ದರಾಮಯ್ಯ ನಾಮಪತ್ರಿಕೆ ಸಲ್ಲಿಸುವ ಮುಂಚೆ ಕುಂಕುಮವನ್ನಿಟ್ಟು ಪತ್ರಕರ್ತರೊಂದಿಗೆ ಸಂವಾದ | Oneindia Kannada

ಮೈಸೂರು, ಏಪ್ರಿಲ್ 20: ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರಿನ ಪತ್ರಕರ್ತರ ಭವನದಲ್ಲಿ ಮಾಧ್ಯಮ ಸಂವಾದ ನಡೆಸಿದರು.

ಇಂದು 12 ಗಂಟೆಗೆ ಸಿದ್ದರಾಮಯ್ಯ, ಜಿಟಿ ದೇವೇಗೌಡ ನಾಮಪತ್ರ ಸಲ್ಲಿಕೆ ಇಂದು 12 ಗಂಟೆಗೆ ಸಿದ್ದರಾಮಯ್ಯ, ಜಿಟಿ ದೇವೇಗೌಡ ನಾಮಪತ್ರ ಸಲ್ಲಿಕೆ

ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಹಣೆಯಲ್ಲಿ ಕುಂಕಮವನ್ನಿಟ್ಟುಕೊಂಡು ಬಂದಿದ್ದು ಅಚ್ಚರಿಯ ಸಂಗತಿ ಎನ್ನಿಸಿತ್ತು!

ನಾಮಪತ್ರ ಸಲ್ಲಿಕೆ ವೇಳೆ ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಲಿರುವ ಸಚಿವರು ನಾಮಪತ್ರ ಸಲ್ಲಿಕೆ ವೇಳೆ ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಲಿರುವ ಸಚಿವರು

ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಸಿದ್ದರಾಮಯ್ಯ, ''ಅಮಿತ್ ಶಾ ನನ್ನನ್ನ ಅಹಿಂದು ಅಂತಾರೆ. ಆದರೆ ಅವರೇ ಹಿಂದುವಲ್ಲ, ಜೈನ್ ಎಂಬುದನ್ನು ಮರೆತಿದ್ದಾರೆ ಅನ್ನಿಸುತ್ತೆ. ಅವರ ರೆಕಾರ್ಡ್ ತರಸಿ ನೋಡಿ, ಅವರೊಬ್ಬ ಜೈನ್ ಎಂಬುದು ಗೊತ್ತಾಗುತ್ತದೆ" ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷರ ವಿರುದ್ಧ ಹರಿಹಾಯ್ದರು.

ಬಿಎಸ್ ವೈ, ಎಚ್ಡಿಕೆಗೆ ಸಿದ್ದು ತರಾಟೆ

ಬಿಎಸ್ ವೈ, ಎಚ್ಡಿಕೆಗೆ ಸಿದ್ದು ತರಾಟೆ

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವಅರನ್ನು ಅವರು ತರಾಟೆಗೆ ತೆಗೆದುಕೊಂಡರು. " ಅಧಿಕಾರದಲ್ಲಿದ್ದಾಗ ಯಡಿಯೂರಪ್ಪನವರು ರೈತರಿಗೆ ಏನು ಮಾಡಿದರು? ಕುಮಾರಸ್ವಾಮಿ 20 ತಿಂಗಳ ಆಡಳಿತದಲ್ಲಿ ಏನು ಮಾಡಿದರು ಅಂತ ಹೇಳಲಿ. ದಲಿತರ ಮನೆಗೆ ಈಗ ಊಟಕ್ಕೆ‌ ಹೋಗೋ ಯಡಿಯೂರಪ್ಪ, ಆಗ ಎಷ್ಟು ದಿನ ಊಟಕ್ಕೆ ಹೋಗಿದ್ದರು?" ಎಂದು ಅವರು ಪ್ರಶ್ನಿಸಿದರು.

ಬಾದಾಮಿ ಕ್ಷೇತ್ರದಲ್ಲಿ ಏ.23 ಕ್ಕೆ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ?!ಬಾದಾಮಿ ಕ್ಷೇತ್ರದಲ್ಲಿ ಏ.23 ಕ್ಕೆ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ?!

ಅಭಿವೃದ್ಧಿ ಅಜೆಂಡಾ ಇಲ್ಲ!

"ಬಿಜೆಪಿ ಜೆಡಿಎಸ್ ಗೆ ಯಾವುದೇ ಅಭಿವೃದ್ಧಿ ಅಜೆಂಡಾ ಇಲ್ಲಾ, ಹಾಗಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ" ಎಂದು ಟೀಕಿಸಿದರು. "ನಾವು ರಾಜ್ಯದಲ್ಲಿ ಆಗಿರೋ ಅಭಿವೃದ್ಧಿ ಸಾಧನೆ ಮುಂದಿಟ್ಟು ಚುನಾವಣೆ ನಡೆಸುತ್ತಿದ್ದೇವೆ. ಮೋದಿ ಸಿದ್ದರಾಮಯ್ಯ ಸರ್ಕಾರ 10% ಸರ್ಕಾರ ಅಂತಾರೆ. ಆದ್ರೆ ಅವರ ಬಳಿ ಯಾವುದೇ ದಾಖಲೆ ಇಲ್ಲ. ಬೇಜವಬ್ದಾರಿ ಹೇಳಿಕೆಗಳನ್ನು ಮೋದಿ ನೀಡಿದ್ದಾರೆ. ನಾನು ಬಿಜೆಪಿ ಮೇಲೆ ಅನಗತ್ಯ ಹೇಳಿಕೆ ನೀಡಲ್ಲ" ಎಂದರು.

Array

ಬಿಜೆಪಿ ಸರ್ಕಾರ ಇದ್ದಾಗಲೇ ಕ್ರೈಂ ರೇಟ್ ಹೆಚ್ಚಿತ್ತು

"ಅನಂತಕುಮಾರ ಹೆಗಡೆ ಕಾರು ಅಪಘಾತ ವಾದರೆ ಸರ್ಕಾರದ ಕೈವಾಡ ಅಂತಾರೆ. ನಮ್ಮ ಸರ್ಕಾರದಲ್ಲಿ ಯಾವ ಭ್ರಷ್ಟಾಚಾರ ಇದೆ? ಆಡಳಿತ ಯಂತ್ರ ಹಾಳಾಗಿದೆ ಅಂತ ಪದೇ ಪದೇ ಹೇಳುತ್ತಾರೆ. ಸತ್ತವರೆಲ್ಲ ಬಿಜೆಪಿ ಕಾರ್ಯಕರ್ತರು ಅಂತ ಹೇಳುತ್ತಾರೆ. ಸತ್ತವರೆಲ್ಲರೂ ಬಿಜೆಪಿಯವರಲ್ಲ. ಬೇಕಾದರೆ ಅಂಕಿ ಅಂಶ ನೋಡಿ, ಕಳೆದ 5 ವರ್ಷಗಳ ಕ್ರೈಂ ರೆಟ್, ನಮ್ಮ ಸರ್ಕಾರದ ಕ್ರೈಂ ರೆಟ್ ಜೊತೆ ಹೋಲಿಸಿದ್ರೆ ಬಿಜೆಪಿ ಇದ್ದಾಗಲೇ ಹೆಚ್ಚು" ಎಂದು ಅವರು ಗುಡುಗಿದರು.

ಯಾರೊಂದಿಗೂ ಮೈತ್ರಿಯಿಲ್ಲ

"ನಮ್ಮದು ಜಾತ್ಯತೀತ ಪಕ್ಷ. ನಾವು ಯಾರೊಂದಿಗೂ ಮೈತ್ರಿಮಾಡಿಕೊಳ್ಳುವುದಿಲ್ಲ. ನನ್ನ ಬಾದಾಮಿ ಸ್ಪರ್ಧೆಯ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ಈ ಬಗ್ಗೆ ನಾನು ಏನೂ ಹೇಳಲು ಇಚ್ಛಿಸುವುದಿಲ್ಲ. ನಾನು ಕುಟುಂಬ ರಾಜಕಾರಣ ಮಾಡಿಲ್ಲ. ನಾನು ಕೊನೆಯ ಚುನಾವಣೆಯಲ್ಲೇ ನಿಲ್ಲೋಲ್ಲ ಎಂದು ನನ್ನ ಮಗ ರಾಕೇಶನಿಗೆ ನಿಲ್ಲುವುದಕ್ಕೆ ಹೇಳಿದ್ದೆ. ಆದರೆ ಅವನ ಅಕಾಲಿಕ ಮರಣದಿಂದ ಡಾ.ಯತೀಂದ್ರ ರಾಜಕೀಯಕ್ಕೆ ಬಂದರು. ಹೀಗಾಗಿ ಅವರು ಈ ಬಾರಿ ಸ್ಪರ್ಧಿಸುತ್ತಿದ್ದಾರೆ. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಬಿಎಸ್ ವೈ, ಎಚ್ಡಿಕೆ ಮತ್ತು ದೇವೇಗೌಡರಿಗಿಲ್ಲ" ಎಂದು ಅವರು ಹೇಳಿದರು.

English summary
Karnataka assembly elections 2018: Before filing his nomination in Chamundeshwari constituency in Mysuru, CM Siddaramaiah holds an interaction with journalist in Mysuru. He blames BJP's BS Yeddyurappa and JDS's HD Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X