ಮೈಸೂರು: ದಲಿತನಿಂದ ಚರಂಡಿ ಸ್ವಚ್ಛತೆ, ಭುಗಿಲೆದ್ದ ಜನರ ಕೋಪ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು,ಮಾರ್ಚ್,22: ಯಂತ್ರಗಳನ್ನು ಬಳಸದೆ, ಕೈಚೀಲಗಳನ್ನು ನೀಡದೆ ಬರಿಗೈಲಿ ದಲಿತ ವ್ಯಕ್ತಿಯಿಂದ ಚರಂಡಿ ಸ್ವಚ್ಛತಾ ಕಾರ್ಯ ಮಾಡಿಸಿರುವುದು ದಲಿತರ ಆಕ್ರೋಶಕ್ಕೆ ಕಾರಣವಾಗಿದ್ದು, ಸಿದ್ದಾಪುರ ಗ್ರಾಮ ಪಂಚಾಯಿತಿ ವಿರುದ್ಧ ಕರ್ನಾಟಕ ರಾಜ್ಯ ದಲಿತ ಹಿತರಕ್ಷಣಾ ಸಮಿತಿ ಪ್ರತಿಭಟನೆ ಕೈಗೊಂಡಿದ್ದಾರೆ.

ಕಂಚುಗಾರಕೊಪ್ಪಲು ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ತಿಮ್ಮಯ್ಯ ಅವರಿಂದ ಚರಂಡಿ, ಇನ್ನಿತರೆ ತ್ಯಾಜ್ಯ ವಸ್ತುಗಳನ್ನು ಬರಿಗೈನಲ್ಲಿ ತೆಗೆಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೆ.ಆರ್.ನಗರ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ಈ ಘಟನೆ ನಡೆದಿದೆ.[ದೇವೇಗೌಡರ ಹುಟ್ಟೂರು ಪಕ್ಕದಲ್ಲೇ ದಲಿತರಿಗೆ ಅಪಮಾನ!]

Karnataka State Dalits Federation take protest in Mysuru

ಕಳೆದ ಏಳೆಂಟು ತಿಂಗಳ ಹಿಂದೆ ತಾಲೂಕಿನ ಚಂದಗಾಲು ಪಂಚಾಯಿತಿಯಲ್ಲಿ ಪಿಡಿಒ ಅವರು ಪಂಚಾಯಿತಿ ಶೌಚಾಲಯದಲ್ಲಿ ಮಲ ತೆಗೆಸುತ್ತಿದ್ದರೆಂಬ ವಿಷಯ ದೊಡ್ಡ ಸುದ್ದಿಯಾಗಿತ್ತು.

ಅದು ಜನರ ಮನಪಟಲದಿಂದ ಮರೆ ಮಾಚುವ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಗೆ ಬರುವ ಚರಂಡಿಗಳನ್ನು ಬರಿಗೈಲಿ ಸ್ವಚ್ಛಗೊಳಿಸುವ ಕಾರ್ಯವನ್ನು ನಡೆಸುವುದು ಎಷ್ಟು ಸರಿ ಎಂಬುದು ಸಂಘಟನೆ ಕಾರ್ಯಕರ್ತರ ಪ್ರಶ್ನೆಯಾಗಿದೆ.[ಸದ್ಯದಲ್ಲೇ ಖಾಸಗಿ ಕಂಪೆನಿಗಳಲ್ಲೂ ರಿಸರ್ವೇಷನ್ ಕೋಟಾ?]

Karnataka State Dalits Federation take protest in Mysuru

ತಿಮ್ಮಯ್ಯ ಅವರು ಪಂಚಾಯಿತಿ ನೌಕರನಲ್ಲ, ದಿನಗೂಲಿ ನೌಕರನೂ ಅಲ್ಲ. ಹೀಗಿರುವಾಗ ಗ್ರಾಪಂ ಪಿಡಿಒ ಅವರು ದಲಿತ ಸಮುದಾಯದ ವ್ಯಕ್ತಿಯಿಂದ ಬರಿ ಕೈಯಲ್ಲಿ ಈ ರೀತಿಯ ಕೆಲಸ ಮಾಡುವ ಔಚಿತ್ಯವೇನು? ಎಂದು ಪ್ರಶ್ನಿಸಿದ್ದಾರೆ. ಈ ಸಂಬಂಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.[ಬೈಲುಕುಪ್ಪೆ ಸಮೀಪದ ಕೊಪ್ಪದಲ್ಲಿ ಸ್ವಚ್ಛತೆಗಿಲ್ಲ ಕಿಮ್ಮತ್ತು]

ಈ ಸಂಬಂಧ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪರಿಶೀಲಿಸಿ ಸಂಬಂಧಪಟ್ಟ ಪಿಡಿಒ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka State Dalits Federation take protest against Siddapur Grama panchayath in Mysuru, on Tuesday, March 22nd
Please Wait while comments are loading...