ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೈಸೂರಿಗೆ ಕೀರ್ತಿ ತಂದ ಸುದೀಪ್

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಮೇ 13: ನಿನ್ನೆ ಹೊರಬಿದ್ದ ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆಯ ವಿದ್ಯಾರ್ಥಿ ಸುದೀಪ್ 625ಕ್ಕೆ 623 (99.68) ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನಗಳಿಸಿ ರಾಜ್ಯಕ್ಕೆ 15ನೇ ಸ್ಥಾನ ಪಡೆದಿದ್ದಾನೆ.

ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಕಳಪೆ ಪ್ರದರ್ಶನ ತೋರಿದ್ದ ಸಾಂಸ್ಕೃತಿಕ ನಗರಿ ಮೈಸೂರಿಗೆ ಸುದೀಪ್ ಸಾಧನೆ ಕೊಂಚ ಸಮಾಧಾನ ನೀಡಿದೆ. ಸುದೀಪ್ ಸಾಧನೆ ಹೆತ್ತವರಲ್ಲಿ ಆನಂದ ಭಾಷ್ಪ ಹರಿಸಿದೆ.[ಕರ್ನಾಟಕ ಪಿಯುಸಿ ಫಲಿತಾಂಶ: ಮೈಸೂರಿಗೆ ಸ್ವಲ್ಪ ಸಿಹಿ - ಸ್ವಲ್ಪ ಕಹಿ]

Karnataka SSLC results: Mysusru student Sudeep's achievement

ಡಾಕ್ಟರ್ ಆಗುವಾಸೆ :
ಮೈಸೂರಿಗೆ ರಾಜ್ಯಮಟ್ಟದಲ್ಲೇ 15ನೇ ರ್ಯಾಂಕ್ ತಂದುಕೊಟ್ಟ ಸುದೀಪ್, 'ಒನ್ ಇಂಡಿಯಾ'ದೊಂದಿಗೆ ತನ್ನ ಸಂತಸವನ್ನು ಹಂಚಿಕೊಂಡಿದ್ದಾನೆ. ನಾನು 625ಕ್ಕೆ 625 ಬರುತ್ತದೆಂದು ಅಂದುಕೊಂಡಿದ್ದೆ. ಆದರೆ 2 ಅಂಕಗಳೆಲ್ಲೋ ಮಿಸ್ ಆಗಿದೆ. ನನ್ನ ಏಳಿಗೆಗೆ ನಮ್ಮ ಪೋಷಕರಾದ ಮಹೇಶ್, ಮಹದೇವಮ್ಮ ಹಾಗೂ ಶಾಲಾ ಆಡಳಿತ ವರ್ಗ ಪ್ರಮುಖ ಕಾರಣ. ನಾನು ಮುಂದೆ ವಿಜ್ಞಾನ ವಿಭಾಗ ತೆಗೆದುಕೊಂಡು ವೈದ್ಯನಾಗುತ್ತೆನೆ ಎನ್ನುತ್ತಾನೆ ಸುದೀಪ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka SSLC results: Mysusru Marimallappa high school student Sudeep got 15th rank for state, secured 623/625 marks.
Please Wait while comments are loading...