ನಾಲ್ವಡಿ ಕೃಷ್ಣರಾಜರ ಹೆಸರನ್ನು ಮೈಸೂರು ವಿವಿಗೆ ಇಡಲು ಒತ್ತಾಯ

Posted By:
Subscribe to Oneindia Kannada

ಮೈಸೂರು, ಜೂನ್ 20: ಮೈಸೂರು ವಿಶ್ವವಿದ್ಯಾನಿಲಯಕ್ಕೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಬೇಕೆಂದು ಒತ್ತಾಯಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ಜಿಲ್ಲೆಗೆ ಅನುಕೂಲವಾಗುವಂತಹ ಹಲವಾರು ಅಭಿವೃದ್ಧಿಕಾರ್ಯಗಳನ್ನು ನಡೆಸಿದ್ದಾರೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.

 Karnataka Senaapade staged a protest in front of the DC office on Tuesday

ಪ್ರಾಥಮಿಕ ಮಾಧ್ಯಮಿಕ ಶಿಕ್ಷಣವನ್ನು ಉಚಿತವಾಗಿ ಎಲ್ಲಾ ವರ್ಗದವರಿಗೂ ಕಡ್ಡಾಯವಾಗಿ ನೀಡಿದವರು. ಈಗಾಗಲೇ ರಾಜ್ಯ ಸರ್ಕಾರ ಹಲವಾರು ವಿವಿಗಳಿಗೆ ರಾಷ್ಟ್ರನಾಯಕರ ಹೆಸರನ್ನು ಇಡುತ್ತಿರುವುದು ಉತ್ತಮ ಬೆಳವಣಿಗೆ. ಅದರಂತೆ ನಾಲ್ವಡಿ ಕೃಷ್ಣರಾಜರ ಹೆಸರನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಇರಿಸಬೇಕು ಎಂದು ಒತ್ತಾಯಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Senaapade staged a protest in front of the DC office on Tuesday, urging the government to rename the University of Mysore after the famous Mysuru king of yesteryear, Nalvadi Krishnaraja Wadiyar.
Please Wait while comments are loading...