ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರವೇ ಜಿಲ್ಲಾಧ್ಯಕ್ಷ ಗಡಿಪಾರು ಖಂಡಿಸಿ, ಸಿಎಂಗೆ ಆನ್ ಲೈನ್ ಅರ್ಜಿ

By Mahesh
|
Google Oneindia Kannada News

ಮೈಸೂರು, ಡಿ. 22: ಕರ್ನಾಟಕ ರಕ್ಷಣಾ ವೇದಿಕೆಯ ಮೈಸೂರು ಜಿಲ್ಲೆಯ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಅವರನ್ನು ಗಡಿಪಾತು ಮಾಡಿರುವ ಮೈಸೂರು ಪೊಲೀಸ್ ಉಪ ಆಯುಕ್ತ ಡಾ.ಎಚ್.ಟಿ.ಶೇಖರ್ ಅವರ ಕ್ರಮವನ್ನು ಖಂಡಿಸಿ ಕರವೇ ಐಟಿ ಘಟಕ ಆನ್ ಲೈನ್ ಪಿಟೀಷನ್ ಹಾಕಿದೆ.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್, ಗಾಂಧಿನಗರದ ಕಿರಣ್, ರಾಜೇಂದ್ರನಗರದ ಅಹಮದ್ ಮುದಾಸಿರ್ ಅವರಿಗೆ ಇತ್ತೀಚೆಗೆ ಗಡಿಪಾರು ಶಿಕ್ಷೆ ವಿಧಿಸಲಾಗಿತ್ತು. ಮೈಸೂರು ಉಪ-ಪೊಲೀಸ್ ಆಯುಕ್ತರಿಂದ ಕನ್ನಡ ಪರ ಹೋರಾಟಗಾರರ ಹೋರಾಟವನ್ನು ಗಡೀಪಾರು ಆದೇಶದಿಂದ ಹತ್ತಿಕ್ಕುವ ಹುನ್ನಾರವನ್ನು ಖಂಡಿಸಿ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಆನ್ ಲೈನ್ ಅರ್ಜಿ ಹಾಕಲಾಗಿದೆ.

ಈ ಬಗ್ಗೆ ಕರವೇ ಸ್ಪಷ್ಟನೆ ನೀಡಿ ಅರ್ಜಿಯಲ್ಲಿ ನೀಡಿರುವ ವಿವರಣೆ ಇಂತಿದೆ:
ಪ್ರವೀಣ್ ಎಂಬ ವ್ಯಕ್ತಿಯು ಕರ್ನಾಟಕ ರಕ್ಷಣಾ ವೇದಿಕೆಯ ನಂಜನಗೂಡು ತಾಲೋಕು ಅಧ್ಯಕ್ಷ ಮತ್ತು ಮೈಸೂರು ಜಿಲ್ಲಾಧ್ಯಕ್ಷರಾಗಿ ಅನೇಕ ಕನ್ನಡ ಪರ ಹೋರಾಟವನ್ನು ಮಾಡುತ್ತ ಬಂದಿರುತ್ತಾರೆ.[ಮೈಸೂರು: ಕರವೇ ಜಿಲ್ಲಾಧ್ಯಕ್ಷ ಸೇರಿ ಮೂವರು ಗಡಿಪಾರು]

ಕನ್ನಡಕ್ಕೆ ಕುಂದು ಬಂದಾಗ ಅದನ್ನು ಉಗ್ರವಾಗಿ ಕಂಡಿಸಿದ್ದಾರೆ, ಅವರ ಕೆಲವು ಹೋರಾಟಗಳು ಕ್ರಾಂತಿಯಿಂದಲೂ ಸಹ ನಡೆದಿರುತ್ತವೆ. ಅಂತಹ ಕೆಲವು ಕನ್ನಡಪರ ಉಗ್ರ ಹೋರಾಟಗಳು ನೆಪವಾಗಿ ಅವರ ಮೇಲೆ ಹೋರಾಟದ ವಿಷಯಕ್ಕೆ ಸಂಬಂದಿಸಿದಂತೆ ನಾಲ್ಕು ಮೊಕದ್ದಮೆಗಳು ಇರುತ್ತದೆ ಅದರಲ್ಲಿ.

1) ಕಾವೇರಿ ನೀರಿನ ವಿಚಾರದಲ್ಲಿ ರೈಲ್ವೇ ಕಛೇರಿಯಲ್ಲಿ ನಡೆದ ಹೋರಾಟ.

2) ಕನ್ನಡಿಗ ನೌಕರರ ವಿರೋಧಿ ನಿಲುವು ತಳೆದಿದ್ದ ಸಿ.ಎಫ್.ಟಿ.ಆರ್.ಐ ನಿರ್ದೇಶಕರಾದ ಪ್ರೊ.ರಾಮರಾಜಶೇಖರನ್ ರವರಿಗೆ ಕಪ್ಪು ಮಸಿ ಬಳಿದ ಪ್ರಕರಣ

3) ಸಿ.ಎಫ್.ಟಿ.ಆರ್.ಐ ಕಛೇರಿಗೆ ಮುತ್ತಿಗೆ ಹಾಕಿದ ಪ್ರಕರಣ

4)ಕನ್ನಡಿಗರಾದ ನಾವು ಗೌರವಿಸಿ ಪೂಜಿಸುವ ಕನ್ನಡದ ಧ್ವಜದ ಮೇಲೆ ಬಾಟಾ ಕಂಪನಿಯ ವ್ಯವಸ್ಥಾಪಕರು ಚಪ್ಪಲಿ ಮತ್ತು ಶೂಗಳನ್ನು ಇಟ್ಟು ಪ್ರದರ್ಶನ ಮತ್ತು ಮಾರಾಟ ಮಾಡುತ್ತಿದ್ದ ಕ್ರಮವನ್ನು ಖಂಡಿಸಿ ನಡೆಸಿದ ಹೋರಾಟದ ಪ್ರಕರಣ.

Mysuru Karave President Row

ಈ ಮೇಲ್ಕಂಡ ನಾಲ್ಕು ಪ್ರಕರಣದ ಮೊಕದ್ದಮೆಗಳು ಪ್ರವಿಣ್ ಅವರ ಮೇಲಿದೆ ಈ ಹೋರಾಟದ ಪ್ರಕರಣ ಹೊರತು ಪಡಿಸಿ ವಯುಕ್ತಿಕವಾಗಿ ಯಾವುದೇ ಮೊಕದ್ದಮೆ ಅವರ ಮೇಲಿರುವುದಿಲ್ಲ. ಉಪ-ಪೊಲೀಸ್ ಆಯುಕ್ತರು ಹೋರಾಟಗಾರರನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ.

ಡಕಾಯಿತಿ ಪ್ರಕರಣ ದಾಖಲು ಏಕೆ?: ಅವರ ಮೇಲೆ ದಾಖಲಾದ ಬಾಟಾ ಕಂಪನಿಯ ಪ್ರಕರಣ, ಕಂಪನಿಯ ವ್ಯವಸ್ಥಾಪಕ ಅವರ ಮೇಲೆ ನೀಡಿರುವ ದೂರು ಏನೆಂದರೆ "ನಮ್ಮ ಮಳಿಗೆಯ ಕುರ್ಚಿ, ಟೇಬಲ್ ಮತ್ತು ಗಣಕಯಂತ್ರ ಧ್ವಂಸಗೊಳಿಸಿದ್ದಾರೆ" ಮತ್ತು ಎಲ್ಲಿಯೂ ಕೂಡ ನಗದು, ಗಣಕಯಂತ್ರ ಅಥವಾ ಇನ್ನಿತರ ಕಳೆದುಹೋಗಿದೆ ಎಂದು ನಮೂದಿಸಿರುವುದಿಲ್ಲ. ಆದರೂ ಕೂಡ ಈ ಅಧಿಕಾರಿಗಳು ಪ್ರವೀಣ್ ಅವರ ಮೇಲೆ ಡಕಾಯಿತಿ ಪ್ರಕರಣ ದಾಖಲಿಸಿರುವುದು ಎಷ್ಟರ ಮಟ್ಟಿಗೆ ಸರಿಯಿದೆ?

ಪ್ರವೀಣ್ ಅವರಿಗೆ ನೀಡಿರುವ ಆದೇಶಪತ್ರದಲ್ಲಿ 12/12/2015ಕ್ಕೆ ವಿಶೇಷ ಕಾರ್ಯನಿರ್ವಾಹಕ ಮತ್ತು ಉಪ-ಪೊಲೀಸ್ ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ, ಮೈಸೂರು ನಗರದ ನ್ಯಾಯಾಲಯಕ್ಕೆ 11.00ಕ್ಕೆ ಹಾಜರಾಗಲು ಆದೇಶಿಸಿದ್ದರು. ಸದರಿ ದಿನ ಪ್ರವೀಣ್ ಅವರು ಉಪ-ಪೊಲೀಸ್ ರವರ ಕಛೇರಿಗೆ ನಗರದ ಪ್ರತಿಷ್ಠಿತ ಹಿರಿಯ ವಕೀಲರೊಂದಿಗೆ 10-45 ಕ್ಕೆ ಆಗಮಿಸಿದ್ದರು, ಆದರೆ ಅಂದು ಉಪ-ಪೊಲೀಸ್ ಆಯುಕ್ತರು ಮಾನ್ಯ ಮುಖ್ಯಮಂತ್ರಿಗಳ ಬಂದೂಬಸ್ತ್ ಗೆ ತೆರಳಿರುತ್ತಾರೆ.

ಇದಕ್ಕೆ ಸಂಬಂಧಸಿದಾಗೆ ಅವರ ಆಪ್ತಸಹಾಯಕರಿಗೆ ಪ್ರವೀಣ್ ಅವರ ವಕೀಲರು ದೂರವಾಣಿ ಮುಖೇನ ಸಂಪರ್ಕಿಸಿದಾಗ ನಮ್ಮ ಉಪ-ಪೊಲೀಸ್ ಆಯುಕ್ತರು ಇಲ್ಲದ ಕಾರಣ ನಿಮಗೆ ಮತ್ತೊಮ್ಮೆ ನೋಟಿಸ್ ಬಂದ ನಂತರ ಬನ್ನಿ ಎಂದು ಉತ್ತರಿಸಿರುತ್ತಾರೆ.

ಅವರ ಆ ಉತ್ತರದಿಂದ ಮತ್ತೊಮ್ಮೆ ಬರಲಿರುವ ನೋಟಿಸ್ ಗಾಗಿ ಕಾಯುತ್ತಿರುವಾಗಲೆ ಒಂದು ಆದೇಶವನ್ನು ಹೊರಡಿಸಿರಿತ್ತಾರೆ, ಆ ಆದೇಶ ಯಾವ ರೀತಿಯಿದೆಯೆಂದರೆ ನೀವು ನಮ್ಮ ಕಛೇರಿಗೆ ಗೈರುಹಾಜರಾಗಿರುವುದರಿಂದ ನಿಮ್ಮನ್ನು ಮೈಸೂರು ನಗರಕ್ಕೆ ಆಗಮಿಸದಂತೆ ಗಡೀಪಾರು ಆದೇಶ ನೀಡಿದ್ದೀರಿ ಮತ್ತು ಅದರ ಪ್ರತಿಯನ್ನು ಪ್ರವೀಣ್ ಅವರ ಮನೆಯ ಗೋಡೆಗೆ ಅಂಟಿಸಿರುತ್ತಾರೆ.

ಕನ್ನಡ, ಕರ್ನಾಟಕ ಮತ್ತು ಕನ್ನಡಿಗರಿಗೆ ಕುಂದು ಬಂದಾಗ ಹೋರಾಡಿದ್ದು ತಪ್ಪೇ? ಇಂತಹ ಕನ್ನಡಿಗರಿಗೆ ಈತೆರನಾದ ಶಿಕ್ಷೆ ಕೊಡುತ್ತ ಹೋದರೆ ಕನ್ನಡಿಗರಿಗೆ ಉಳಿವೆಲ್ಲಿ ? ದಯವಿಟ್ಟು ಇದನ್ನು ಮತ್ತೊಮ್ಮೆ ಪರೀಕ್ಷಿಸಿ ಆ ಕನ್ನಡಿಗನಿಗೆ ನ್ಯಾಯ ಕೊಡಬೇಕೆಂದು ವಿನಂತಿಸಿಕೊಳ್ಳುತ್ತೇವೆ

ಉಪ-ಪೊಲೀಸ್ ಆಯುಕ್ತರು ನೀಡಿರುವ ಈ ಆದೇಶ ಖಂಡನೀಯವಾದದ್ದು ಈ ಕೂಡಲೆ ಮೈಸೂರು ನಗರಕ್ಕೆ ಪ್ರವೇಶದಂತೆ ನಿರ್ಬಂಧಿಸಿ ಗಡೀಪಾರು ಮಾಡಿರುವುದನ್ನು ಹಿಂಪಡೆಯಬೇಕು ಎಂದು ಕೋರಿಕೊಳ್ಳುತ್ತಿದ್ದೇವೆ.
ಇಂತಿ ನಿಮ್ಮಯ
ಕನ್ನಡಿಗರು.
ಐಟಿ ಬಳಗ.

English summary
Karnataka Rakshana Vedike IT Unit has put online petition and urged CM of Karnataka Siddaramaiah to revoke the order given by Police city deputy commissioner HT Shekar regarding expelling Karave district President Praveen Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X