ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ವರ್ಷಪೂರ್ತಿ ಪ್ರವೇಶ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ. 20 : ಸಾಂಸ್ಕೃತಿಕ ನಗರಿ ಮೈಸೂರನ್ನು ಇನ್ನಷ್ಟು ಪ್ರವಾಸಿ ಸ್ನೇಹಿಯನ್ನಾಗಿ ಮಾಡಲು ಸಕಲ ಸಿದ್ಧತೆಗಳು ನಡೆಯುತ್ತಿವೆ. ದಸರಾ ವಸ್ತುಪ್ರದರ್ಶನಕ್ಕೆ ಮತ್ತಷ್ಟು ಮೆರಗು ನೀಡಿ ಪ್ರವಾಸಿ ತಾಣವನ್ನಾಗಿಸುವ ಮತ್ತು ಪ್ರವಾಸಿಗರಿಗಾಗಿ ವರ್ಷಪೂರ್ತಿ ತೆರೆದಿಡುವ ಚಿಂತನೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ.

ಮೊದಲೆಲ್ಲ ದಸರಾ ಸಂದರ್ಭ ಆರಂಭವಾಗಿ ಒಂದೋ ಎರಡೋ ತಿಂಗಳ ಕಾಲ ನಡೆಯುತ್ತಿದ್ದ ವಸ್ತುಪ್ರದರ್ಶನ ಇತ್ತೀಚೆಗೆ ಮೂರು ತಿಂಗಳ ಕಾಲದವರೆಗೆ ವಿಸ್ತರಿಸಲಾಗುತ್ತಿದೆ.

ವರ್ಷದಿಂದ ವರ್ಷಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿರುವ ಕಾರಣದಿಂದ ಮತ್ತು ಮೈಸೂರಿನ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಉದ್ದೇಶದಿಂದ ಮೈಸೂರು ದಸರಾ ವಸ್ತು ಪ್ರದರ್ಶನಕ್ಕೆ ಇನ್ನಷ್ಟು ಹೊಸತನ ನೀಡಿ ವರ್ಷಪೂರ್ತಿ ತೆರೆಯುವ ಚಿಂತನೆ ನಡೆಸಲಾಗುತ್ತಿದೆ.

Karnataka Government plans to hold Mysuru Dasara Exhibition all year round

ಈ ಬಗ್ಗೆ ಸ್ವತಃ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು ಹಾಗೂ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಎನ್.ಎಂ.ಶಶಿಕುಮಾರ್ ಅವರು ಮಾಹಿತಿ ನೀಡಿದ್ದು, ವರ್ಷದಿಂದ ವರ್ಷಕ್ಕೆ ನಗರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.

ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ವಸ್ತುಪ್ರದರ್ಶನವನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ನಿರ್ಮಾಣ ಮಾಡುವುದಕ್ಕೆ ನಿರ್ಧರಿಸಿದ್ದು, ಇದಕ್ಕಾಗಿ 80 ಎಕರೆ ಪ್ರದೇಶದಲ್ಲಿ ಸುಮಾರು 120 ಕೋಟಿ ರೂ.ವೆಚ್ಚದ ಯೋಜನೆ ತಯಾರಿಸಿದ್ದಾಗಿ ತಿಳಿಸಿದ್ದಾರೆ.

ಈ ಯೋಜನೆಯಂತೆ ಸದ್ಯ ಇಲ್ಲಿನ ಮಳಿಗೆಗಳ ಮೇಲ್ಛಾವಣಿ ಕಬ್ಬಿಣದ ಶೀಟ್‍ ಗಳಿಂದ ನಿರ್ಮಿಸಲಾಗಿದ್ದು, ಮುಂದೆ ಶಾಶ್ವತ ಆರ್‍ಸಿಸಿ ಮೇಲ್ಛಾವಣಿ ನಿರ್ಮಿಸಲಾಗುತ್ತದೆ.

ಜತೆಗೆ ಶಾಶ್ವತ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣ, ಮಕ್ಕಳಿಗೆ ಪ್ರತ್ಯೇಕ ಕಿಡ್ಸ್ ಪಾರ್ಕ್, ಆಹಾರ ಮಳಿಗೆಗಳ ಫುಡ್ ಜೋನ್, ಸ್ನೋ ವರ್ಡ್ ನಿರ್ಮಿಸುವ ಚಿಂತನೆಯೂ ನಡೆದಿದೆಯಂತೆ.

ಇದರೊಂದಿಗೆ ಸಭೆ-ಸಮಾರಂಭಗಳನ್ನು ನಡೆಸುವುದಕ್ಕೆ ಮೀಟಿಂಗ್ ಹಾಲ್, ಕನ್ವೆನ್ ಷನ್ ಸೆಂಟೆರ್, ಸೆಮಿನಾರ್ ಹಾಲ್, ವಾಹನ ನಿಲುಗಡೆಗಾಗಿ ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆ, ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಲಾಗುತ್ತದೆ.

ಈ ಕುರಿತು ಪ್ರವಾಸೋಧ್ಯಮ ಸಚಿವ ಪ್ರಿಯಾಂಕ ಖರ್ಗೆಯೊಂದಿಗೆ ಸಭೆ ನಡೆಸಿರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಸದ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.

ಇನ್ನು ದಸರಾ ಸಂದರ್ಭ ವಸ್ತುಪ್ರದರ್ಶನಕ್ಕೆ ಭೇಟಿ ನೀಡುವ ಪ್ರವಾಸಿಗರು ಮತ್ತು ಸಾರ್ವಜನಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಕಳೆದ ಬಾರಿಗಿಂತ ಈ ವರ್ಷ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಿದ್ದು, 8.1 ಕೋಟಿ ಆದಾಯ ಗಳಿಸಿದೆ.

100 ದಿನಗಳ ಕಾಲ ಸಾರ್ವಜನಿಕರಿಗಾಗಿ ತೆರೆದಿದ್ದರಿಂದ 11 ಲಕ್ಷ ಮಂದಿ ಬೇಟಿ ನೀಡಿದ್ದಾರಂತೆ.

English summary
The 80-acre Mysuru Dasara Exhibition grounds at Doddakere, which remains lifeless for eight months in a year except during the Dasara, will in future host activities round-the-year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X