ಸಾಂಪ್ರದಾಯಿಕ ದಸರಾಕ್ಕೆ ಸಿದ್ಧವಾಯ್ತು ಸಾಂಸ್ಕೃತಿಕ ನಗರಿ

Posted By:
Subscribe to Oneindia Kannada

ಮೈಸೂರು, ಜುಲೈ 26 : ಈ ಬಾರಿಯ ಮೈಸೂರು ದಸರೆಯನ್ನು ಸಾಂಪ್ರದಾಯಿಕವಾಗಿ ಆಚರಿಸಲು ರಾಜ್ಯ ಸರಕಾರ ಸರ್ವ ಸನ್ನದ್ಧವಾಗಿದೆ. ಮುಂದಿನ ವರುಷ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮತ್ತೆ ಸಿಎಂ ಆಗಿಯೇ ಮುಂದುವರಿದರೆ ದಸರಾ ಮಹೋತ್ಸವದ ಇತಿಹಾಸದ ಪುಟದಲ್ಲಿ ದಾಖಲಾಗಿದೆ.

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಸತತ 5 ಬಾರಿ ಉದ್ಘಾಟನೆಯಲ್ಲಿ ಪಾಲ್ಗೊಂಡ ಕೀರ್ತಿ ಇದೆ. ವರ್ಷದಿಂದ ವರ್ಷಕ್ಕೆ ದಸರೆ ಆಚರಣೆಗೆ ಹೊಸ -ಹೊಸ ಕಾರ್ಯಕ್ರಮಗಳ ಮೂಲಕ ಮೆರುಗು ಹೆಚ್ಚಿಸಿಕೊಳ್ಳುತ್ತಿದೆ. ಎಸ್. ಎಂ ಕೃಷ್ಣ ಉಸ್ತುವಾರಿ ಸಚಿವರಾಗಿದ್ದ ಎಚ್. ವಿಶ್ವನಾಥ್ ಗಜಪಯಣ ಆರಂಭಿಸಿದ್ದರು.

ಸೆಪ್ಟೆಂಬರ್ 30ರಂದು ದಸರಾ ಜಂಬೂ ಸವಾರಿ - ಸಿದ್ದರಾಮಯ್ಯ

ನಂತರ , ಬಿಜೆಪಿ ಸರಕಾರ ಅಧಿಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಗ್ರಾಮೀಣ ಸೊಗಡಿನ ಕಾರ್ಯಕ್ರಮ ಸೇರಿಸಿದರು. 2008 ರಿಂದ 2013ರವರೆಗೆ 2 ಬಾರಿ ಯಡಿಯೂರಪ್ಪ, ಒಂದು ಬಾರಿ ಡಿ.ವಿ ಸದಾನಂದಗೌಡ, ಮತ್ತೊಂದು ಬಾರಿ ಜಗದೀಶ್ ಶೆಟ್ಟರ್ ದಸರಾ ಉದ್ಘಾಟನೆಯಲ್ಲಿ ಭಾಗಿಯಾಗಿದ್ದರು.

ಸಿಎಂಗೆ ಇದು 5ನೇ ದಸರಾ

ಸಿಎಂಗೆ ಇದು 5ನೇ ದಸರಾ

ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿ ನಡೆಯುತ್ತಿರುವ ಐದನೇ ದಸರಾ ಇದಾಗಿದೆ. 2013 ರಿಂದ 2017ರವರೆಗೆ ನಿರಂತರವಾಗಿ ಐದು ವರುಷ ಉದ್ಘಾಟನೆ ಹಾಗೂ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಕೀರ್ತಿಗೆ ಭಾಜನರಾಗಲಿದ್ದಾರೆ. ಮೊದಲ ಎರಡು ವರುಷ ಅದ್ಧೂರಿಯಾಗಿದ್ದರೂ, ಮೂರನೇ ವರುಷ ಬರದಿಂದ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಿಸಲಾಯಿತು. ಹಿಂದಿನ ವರುಷ ಜನಾಕರ್ಷಣೆ ಮತ್ತು ಸಾಂಪ್ರದಾಯಿಕ ಆಚರಣೆಯ ರೂಪ ಕೊಟ್ಟರು. ಸೆಪ್ಟೆಂಬರ್ ನಲ್ಲಿ ನಡೆಯಲಿರುವ ದಸರಾ ಸಾಂಪ್ರದಾಯಿಕವಾಗಿ ಆಚರಿಸಲು ತೀರ್ಮಾನಿಸಲಾಗಿದೆ.

ಈ ಬಾರಿ ಅತೀ ಹೆಚ್ಚು ಅನುದಾನ

ಈ ಬಾರಿ ಅತೀ ಹೆಚ್ಚು ಅನುದಾನ

ಹಿಂದಿ ವರುಷ ಬರವಿದ್ದರೂ 12 ಕೋಟಿ ರೂ. ನೀಡಲಾಗಿತ್ತು. ಆದರೆ ಈ ಬಾರಿ 15 ಕೋಟಿ ರೂ ನೀಡಲು ಸಮ್ಮತಿಸಿದ್ದಾರೆ. ತಮ್ಮ ಆಡಳಿತದಲ್ಲೇ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ದಸರೆ ಜನಾಕರ್ಷಣೆಯಾಗಿಸಲು ಕಾರ್ಯಕ್ರಮ ರೂಪಿಸಲು ಸೂಚಿಸಿದ್ದಾರೆ. ರಾಜ್ಯದಲ್ಲಿ

ಮುಂಗಾರು

ಮಳೆ ಕೈ ಕೊಟ್ಟಿರುವ ಜತೆಗೆ, ಜಲಾಶಯ ಭರ್ತಿಯಾಗದ ವಿಚಾರವಿದ್ದರೂ ಸಾಂಪ್ರದಾಯಿಕ ದಸರವನ್ನು ಆಚರಿಸೋಣ ಎಂದಿರುವುದು ಜಿಲ್ಲಾಡಳಿತಕ್ಕೆ ಖುಷಿ ತಂದಿದೆ. ಈ ಬಾರಿಯೂ ತಮ್ಮದೇ ನೇತೃತ್ವದಲ್ಲೇ ನಡೆಯುತ್ತಿರುವ ಕಾರಣ ಅನುದಾನ ಕೊರತೆಯಾಗದು.

ಸೈ ಎಂದಿದ್ದಾರೆ ಸಿಎಂ

ಸೈ ಎಂದಿದ್ದಾರೆ ಸಿಎಂ

ಬಹಳ ವರುಷದ ನಂತರ ಸಿಎಂ ಆಪ್ತ ಮಹದೇವಪ್ಪ ಉಸ್ತುವಾರಿ ಸಚಿವರಾಗಿರುವುದರಿಂದ ಅವರಿಟ್ಟ ಎಲ್ಲಾ ಪ್ರಸ್ತಾವನೆಗೂ ಸಿಎಂ ಸೈ ಎಂದಿದ್ದಾರೆ. ಆದ್ದರಿಂದ 15 ಕೋಟಿ ರೂ. ಅಂದಾಜುಪಟ್ಟಿಗೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿದೆ.

Siddaramaiah Says, Mysuru Dasara Jamboo Savari Will Be Held On Sep 30th | Oneindia Kananda
ಜಂಬೂ ಸವಾರಿಗೆ ಫಿಕ್ಸ್

ಜಂಬೂ ಸವಾರಿಗೆ ಫಿಕ್ಸ್

ಸೆಪ್ಟಂಬರ್ 21 ರಿಂದ 30ರವರಗೆ ನಡೆಯುವ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ - 2017ದ ಜಂಬೂ ಸವಾರಿಗೆ 15 ಆನೆಗಳು ಫಿಕ್ಸ್ ಆಗಿವೆ.

ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳ ಅಂತಿಮ ಪಟ್ಟಿಗೆ ಪಿಸಿಸಿಎಫ್ ನಿಂದ ಸಮ್ಮತಿ ಸಿಕ್ಕಿದ್ದು, ಅರ್ಜುನ, ಬಲರಾಮ, ಅಭಿಮನ್ಯು, ಗೋಪಾಲಸ್ವಾಮಿ, ವರಲಕ್ಷ್ಮಿ, ದ್ರೋಣಾ, ಕೃಷ್ಣ, ಭೀಮಾ, ಕಾವೇರಿ, ವಿಜಯ, ವಿಕ್ರಮ, ಗೋಪಿ ಹರ್ಷ, ಪ್ರಶಾಂತ, ಗಜೇಂದ್ರ ಆನೆಗಳು ಅಂತಿಮ ಪಟ್ಟಿಯಲ್ಲಿವೆ. ಜತೆಗೆ ಈ ಬಾರಿ ಹೆಚ್ಚುವರಿಯಾಗಿ ಕೃಷ್ಣ, ದ್ರೋಣಾ, ಭೀಮಾ ಎಂಬ ಮೂರು ಆನೆಗಳನ್ನ ಸೇರ್ಪಡೆ ಮಾಡಲಾಗಿದೆ. ವಯಸ್ಸಾದ ಹಿನ್ನೆಲೆ ಈ ಬಾರಿ ಸರಳಾ ಆನೆಗೆ ಕೊಕ್ ನೀಡಲಾಗಿದೆ. ಸರಳ ಆನೆ ಅರ್ಜುನನಿಗೆ ಕುಂಕಿ ಆನೆಯಾಗಿತ್ತು. ಇದಕ್ಕೆ 76 ವರ್ಷವಾಗಿದ್ದು ಈ ಹಿನ್ನೆಲೆ ಸರಳ ಆನೆಗೆ ಕೊಕ್ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The state government is ready to celebrate Mysuru Dasara traditionally. Karnataka chief minister Siddaramaiah has agreed to Give 15 crore rupees for Dasara celebration from state government.
Please Wait while comments are loading...