ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆ ಒಂದು ಕರೆಯಿಂದಾಗಿ ಬಿಎಸ್‌ವೈ ಪುತ್ರ ವಿಜಯೇಂದ್ರಗೆ ಕೈ ತಪ್ಪಿತು ಟಿಕೆಟ್‌!

By ಯಶಸ್ವಿನಿ ಎಂ.ಕೆ
|
Google Oneindia Kannada News

Recommended Video

ಬಿ ಎಸ್ ವೈ ಮಗ ಬಿ ವೈ ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿದ್ದು ಒಂದು ಕರೆಯಿಂದ | Oneindia Kannada

ಮೈಸೂರು, ಏಪ್ರಿಲ್ 23 : ಬೆಳಿಗ್ಗೆಯಿಂದಲೂ ಕಾರ್ಯಕರ್ತರಿಗೆ ಉತ್ಸಾಹವಿತ್ತು. ನಮ್ಮ ನಾಯಕ ವಿಜಯೇಂದ್ರ ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ಸಂತೋಷದಲ್ಲಿದ್ದರು. ಇದರೊಟ್ಟಿಗೆ ರಾಜ್ಯದ ಪ್ರಮುಖ ನಾಯಕರು ಯಡಿಯೂರಪ್ಪ, ಶ್ರೀರಾಮುಲು ಸೇರಿ ನಾಯಕರ ದಂಡೇ ನಂಜನಗೂಡಿನಲ್ಲಿ ಝಂಡಾ ಊರಿತ್ತು. ವಿಜಯೇಂದ್ರ ನಾಮಪತ್ರ ಸಲ್ಲಿಕೆಗೆ ಸಕಲ ವೇದಿಕೆ ತಯಾರಿತ್ತು ಆದರೆ ಆದದ್ದು ಮಾತ್ರ ಬೇರೆ.

ಏಕಾಏಕಿ ಯಡಿಯೂರಪ್ಪ ಅವರು ವಿಜಯೇಂದ್ರ ನಾಮಪತ್ರ ಸಲ್ಲಿಸಿವುದು ಬೇಡ. ಸಾಮಾನ್ಯ ವ್ಯಕ್ತಿ ಸ್ಫರ್ಧಿಸಲಿದ್ದಾರೆ ಎಂದು ನಂಜನಗೂಡಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಹೇಳಿಬಿಟ್ಟರು. ಇದು ಎಲ್ಲರ ಆಕ್ರೋಶಕ್ಕೆ ಕಾರಣವಾಯ್ತು.

ವಿಜಯೇಂದ್ರಗೆ ವರುಣಾ ಸೀಟು ನಿರಾಕರಣೆ, ಕಾರ್ಯಕರ್ತರ ದಾಂಧಲೆವಿಜಯೇಂದ್ರಗೆ ವರುಣಾ ಸೀಟು ನಿರಾಕರಣೆ, ಕಾರ್ಯಕರ್ತರ ದಾಂಧಲೆ

ವಿಜಯೇಂದ್ರಗೆ ಟಿಕೆಟ್ ಕೈತಪ್ಪಿದ್ದಕ್ಕೆ ಆಕ್ರೋಶಗೊಂಡಿರುವ ಕಾರ್ಯಕರ್ತರು ಮೇಜು ಕುರ್ಚಿಗಳನ್ನು ಒಡೆದು ಹಾಕಿದರು. ವಿಜಯೇಂದ್ರ ಕಾರಿಗೆ ಮುತ್ತಿಗೆ ಹಾಕಿ ಅವರೇ ಚುನಾವಣೆಗೆ ನಿಲ್ಲಬೇಕೆಂದು ಒತ್ತಾಯ ಮಾಡಿದರು. ಕೊನೆಗೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ವಿಜಯೇಂದ್ರ ಅವರು ವರುಣಾದಲ್ಲಿ ಮನೆ ಕೊಂಡುಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ವರುಣಾದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಉತ್ತಮ ಪೈಪೋಟಿ ನೀಡುವ ಭರವಸೆ ಹುಟ್ಟುಹಾಕಿದ್ದರು. ಆದರೆ ಧಿಡೀರ್‌ ಎಂದು ವಿಜಯೇಂದ್ರ ಅವರ ಟಿಕೆಟ್ ಕೈ ತಪ್ಪದೆ. ಇದಕ್ಕೆ ಕಾರಣವೇನು?

ಕರೆಯಿಂದ ಬದಲಾಯ್ತಾ ನಿಲುವು ?

ಕರೆಯಿಂದ ಬದಲಾಯ್ತಾ ನಿಲುವು ?

ತಮ್ಮ ಮಗನಿಗೆ ಬಿ ಫಾರಂ ನೀಡಲು ಉತ್ಸುಕತೆಯಿಂದ ಬಂದಿದ್ದ ಯಡಿಯೂರಪ್ಪ ಅವರ ಹೆಲಿಕಾಫ್ಟರ್ ಮೈಸೂರಿಗೆ ಲ್ಯಾಂಡ್ ಆಯಿತು. ಇದಕ್ಕಿದ್ದ ಹಾಗೆ ಅವರಿಗೊಂದು ಕರೆ ಬಂತು. ಆ ಕರೆಯೇ ವಿಜಯೇಂದ್ರೆಗೆ ಕೈ ತಪ್ಪಲು ಪ್ರಮುಖ ಕಾರಣ. ಹೌದು, ಆ ಕರೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್‌ ಅವರದ್ದು. ಹೈಕಮಾಂಡ್ ಒಪ್ಪಿಗೆ ಇಲ್ಲದೇ ವಿಜಯೇಂದ್ರ ನಾಮಪತ್ರವನ್ನು ಸಲ್ಲಿಸುವಂತಿಲ್ಲ ಎಂದು ಅವರು ತಾಕೀತು ಮಾಡಿದರು.

ಆರ್‌ಎಸ್‌ಎಸ್‌ ಒತ್ತಡಕ್ಕೆ ಮಣಿದ ಹೈಕಮಾಂಡ್‌

ಆರ್‌ಎಸ್‌ಎಸ್‌ ಒತ್ತಡಕ್ಕೆ ಮಣಿದ ಹೈಕಮಾಂಡ್‌

ನಾವು ಹೇಳಿದ ಹಾಗೆ ನಡೆಯುತ್ತಿಲ್ಲವೆಂಬ ಮರ್ಮವನ್ನರಿತ ಆರ್‍ಎಸ್‍ಎಸ್ ನಾಯಕರು ಬಿ.ಎಸ್.ಯಡಿಯೂರಪ್ಪ ಅವರನ್ನು ಕಟ್ಟಿಹಾಕಲು ಈ ತಂತ್ರ ರೂಪಿಸಿದ್ದಾರೆ. ಇಲ್ಲವಾದರೆ ಕೇಂದ್ರ ಸಚಿವ ಅನಂತಕುಮಾರ್ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಸಂತೋಷ್ ನಡೆಸಿದ ಷಡ್ಯಂತ್ರಕ್ಕೆ ವಿಜಯೇಂದ್ರ ನಾಮಪತ್ರ ಕೈ ತಪ್ಪಿದೆಯಾ ಮಾತುಗಳು ಕೇಳಿಬರುತ್ತಿದೆ.

ಅಮಿತ್ ಶಾ ಗೂ ಗೊತ್ತಿಲ್ಲ ಈ ವಿಷಯ

ಅಮಿತ್ ಶಾ ಗೂ ಗೊತ್ತಿಲ್ಲ ಈ ವಿಷಯ

ಕರೆ ಮಾಡಿ ನಾವು ಪಟ್ಟಿ ಫೈನಲ್ ಮಾಡುವವರೆಗೂ ವಿಜಯೇಂದ್ರ ನಾಮಪತ್ರವನ್ನು ಸಲ್ಲಿಸುವಂತಿಲ್ಲ. ಒಂದು ವೇಳೆ ನೀವು ಬಿ ಫಾರಂ ಕೊಟ್ಟರೂ, ನಾವು ಸಿ ಫಾರಂ ಕೊಡುತ್ತೇವೆಂದು ಲೆಫ್ಟ್ ರೈಟ್ ತೆಗೆದುಕೊಂಡಿದ್ದಾರೆ. ಇದರೊಟ್ಟಿಗೆ ರಾಮ್‍ಲಾಲ್ ಕರೆ ಮಾಡಿರುವ ವಿಚಾರ ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಹ ತಿಳಿದಿಲ್ಲ ಎಂಬ ಮಾಹಿತಿಗಳು ಲಭ್ಯವಾಗಿದೆ. ನಂಜನಗೂಡಿನಲ್ಲಿ ಉಂಟಾದ ಕ್ಷಿಪ್ರ ಬೆಳವಣಿಗೆಗೆ ಅಮಿತ್ ಶಾ ವರದಿ ಕೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಂತೋಶ್ ಜೀ, ಅನಂತಕುಮಾರ್ ಕೈವಾಡ ಶಂಕೆ

ಸಂತೋಶ್ ಜೀ, ಅನಂತಕುಮಾರ್ ಕೈವಾಡ ಶಂಕೆ

ಬಿ.ಎಸ್.ಯಡಿಯೂರಪ್ಪ ಅವರನ್ನು ಕಟ್ಟಿಹಾಕಲು ಆರ್‍ಎಸ್‍ಎಸ್ ನಾಯಕರು ಹೈಕಮಾಂಡ್ ಮೂಲಕ ನಾಮಪತ್ರ ಸಲ್ಲಿಸಬಾರದೆಂದು ಹೇಳಿಸಿತಾ ಅಥವಾ ಕೇಂದ್ರ ಸಚಿವ ಅನಂತಕುಮಾರ್ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಸಂತೋಷ್ ನಡೆಸಿದ ಷಡ್ಯಂತ್ರಕ್ಕೆ ವಿಜಯೇಂದ್ರ ಬಲಿಯಾದ್ರಾ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಈಗ ಹರಿದಾಡುತ್ತಿವೆ.

English summary
National BJP secoratory Ramalal blocked the Vijayendra ticket. Said to be that RSS leader and State BJP Organizing Secretary Santhosh and central minister Ananthkumar were intentionaly blocked Vijayendra's ticket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X