ಬಂಡಾಯ ಎದ್ದವರ ಓಲೈಕೆಗೆ ಮುಂದಾದ ಸಿದ್ದರಾಮಯ್ಯ

Posted By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಏಪ್ರಿಲ್ 17 : ಕಾಂಗ್ರೆಸ್ ಟಿಕೇಟ್ ಕೈ ತಪ್ಪಿ ಅಸಮಾಧಾನಗೊಂಡಿರುವವರನ್ನು, ಬಂಡಾಯವೆದ್ದವರೊಂದಿಗೆ ಮಾತನಾಡಿ ಸಮಾಧಾನಪಡಿಸಲಾಗುವುದು ಎಂದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

2ನೇ ದಿನವೂ ಚಾಮುಂಡೇಶ್ವರಿಯಲ್ಲಿ ಎಚ್ಡಿಕೆ ಭರ್ಜರಿ ರೋಡ್ ಶೋ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಉಪಾಧ್ಯಕ್ಷ ಸುದರ್ಶನ್ ಪಕ್ಷ ಬಿಡುವುದಿಲ್ಲ. ಅವರು ನಮ್ಮ ಪಕ್ಷದಲ್ಲಿಯೇ ಇರುತ್ತಾರೆ. ಮೊಳಕಾಲ್ಮೂರು ಬಿಜೆಪಿ ಶಾಸಕ ತಿಪ್ಪೇಸ್ವಾಮಿ ಗೆ ಕಾಂಗ್ರೆಸ್ ಟಿಕೆಟ್ ಕೇಳಿದ್ದಾರೆ. ಆದರೆ ಸಮಯ ಮೀರಿ‌ ಹೋಗಿದೆ. ಈ ಸಂದರ್ಭ ಟಿಕೆಟ್ ಕೊಡಿಸುವುದು ಕಷ್ಟವಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಮೊಳಕಾಲ್ಮೂರಿನಲ್ಲಿ ಬಿಜೆಪಿಯಿಂದ ಸಂಸದ ಶ್ರೀರಾಮುಲುಗೆ ಟಿಕೆಟ್ ನೀಡಿದ ಹಿನ್ನೆಲೆ ಬಂಡಾಯವೆದ್ದಿರುವ ಹಾಲಿ ಬಿಜೆಪಿ ಶಾಸಕ ತಿಪ್ಪೇಸ್ವಾಮಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚಿಸಲು ಇಂದು ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದರು.

Karnataka elections: Siddaramaiah trying to convice disappointed Congress leaders

ತಿಪ್ಪೇಸ್ವಾಮಿ ಭೇಟಿ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೊಳಕಾಲ್ಮೂರಿನಲ್ಲಿ ನಾಯಕರೇ ಜಾಸ್ತಿ ಇದ್ದಾರೆ. ಅವರಿಗೆ ನಾವು ಟಿಕೆಟ್ ಕೊಟ್ಟಿದ್ದೇವೆ. ಅವರೇ ಗೆಲ್ಲುತ್ತಾರೆ ಅನ್ನುವ ವಿಶ್ವಾಸವಿದೆ ಎಂದರು.

ಚಾಮುಂಡೇಶ್ವರಿ ಕ್ಷೇತ್ರದ ಜೊತೆ ಸಂಬಂಧ ಕಡಿದುಕೊಂಡು ಸಿಎಂಗೆ 15 ವರ್ಷವಾಗಿದೆ ಎಂದ ಹೆಚ್.ಡಿ.ಕೆ ಹೇಳಿದ್ದಕ್ಕೆ ಲೇವಡಿ ಮಾಡಿದ ಸಿಎಂ ಸಿದ್ದರಾಮಯ್ಯ, ಏನ್ರೀ ಅವರೇನು ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರಾ? ಮುಖ್ಯಮಂತ್ರಿಯಾಗಿ‌ ಇಳಿದ ಮೇಲೆ ಚಾಮುಂಡೇಶ್ವರಿ ಕಡೆ ತಲೆ ಹಾಕಿದ್ದಾರೆಯಾ? ಎಂದು ಕಿಡಿಕಾರಿದರು. ಸಿಎಂ ನನ್ನ ವಿರುದ್ದವೇ ಬಂದು ಸ್ಪರ್ಧೆ ಮಾಡಲಿ ಎಂಬ ಎಚ್.ಡಿ.ಕೆ‌ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಾನು ಅವರ ಮಟ್ಟಕ್ಕೆ‌ ಇಳಿದು ಮಾತನಾಡಲ್ಲ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka assembly elections 2018: KPCC Vice president Sudarshan will not quit congress chief minister Siddaramaiah told. He is trying to convince all rebels and disappointed members of Congress who did not get tickets for assembly elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ