ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನ ವೋಟ್ ಕುಮಾರಸ್ವಾಮಿ ಜೇಬಿನಲ್ಲಿಲ್ಲ: ಸಿದ್ದರಾಮಯ್ಯ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಏಪ್ರಿಲ್ 16 : ಸಿಎಂ ಸಿದ್ದರಾಮಯ್ಯ ಬಂದ್ರೂ ನಮ್ಮನ್ನು ಸೋಲಿಸಲಾಗುವುದಿಲ್ಲ ಎಂಬ ಹೇಳಿಕೆ ನೀಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಏಟಿಗೆ ಸಿಎಂ ಸಿದ್ದು ತಿರುಗೇಟು ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಆ ರೀತಿ ಹೇಳಿಕೆ ನೀಡಬಾರದು. ಮತಗಳೇನು ಕುಮಾರಸ್ವಾಮಿ ಜೇಬಿನಲ್ಲಿಲ್ಲ. ಮೊಯ್ಲಿ ವಿರುದ್ಧ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಸೋತಾಗ ಇವರೆಲ್ಲಿ ಹೋಗಿದ್ರು ಎಂದು ವಾಗ್ದಾಳಿ ನಡೆಸಿದರು.

ಯಾರ್ ಹೇಳಿದ್ದು ಬಾದಾಮಿಯಿಂದ ಸ್ಪರ್ಧಿಸ್ತೇನಂತ? ಸಿದ್ದು ಗುದ್ದುಯಾರ್ ಹೇಳಿದ್ದು ಬಾದಾಮಿಯಿಂದ ಸ್ಪರ್ಧಿಸ್ತೇನಂತ? ಸಿದ್ದು ಗುದ್ದು

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಪ್ರಜಾಪ್ರಭುತ್ವದಲ್ಲಿ ಯಾರು ಗೆಲ್ಲಬೇಕು ಸೋಲಬೇಕು ಎನ್ನುವುದು ಜನ ತೀರ್ಮಾನ ಮಾಡುತ್ತಾರೆ. ಬಾದಾಮಿಯಲ್ಲಿ ಸ್ಪರ್ಧೆ ಮಾಡ್ತೀನಿ ಅಂತಾ ಎಲ್ಲಿಯೂ ಹೇಳಿಲ್ಲ. ಇಷ್ಟು ಬಾರಿ ಸ್ಪರ್ಧೆ ಮಾಡಿದ್ರೂ, ಯಾವಾಗಲು 2 ಕಡೆ ಸ್ಪರ್ಧೆ ಮಾಡಿಲ್ಲ. ನಾನು ಚಾಮುಂಡೇಶ್ವರಿ ಒಂದರಲ್ಲೇ ಸ್ಪರ್ಧೆ ಮಾಡುವುದು ಎಂದು ಸ್ಪಷ್ಟಪಡಿಸಿದರು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಚಾಮುಂಡೇಶ್ಚರಿ ಕ್ಷೇತ್ರದಲ್ಲಿ ಕುಮಾರಸ್ವಾಮಿ ಪ್ರಚಾರ ಮಾಡುತ್ತಿರುವ ಬಗ್ಗೆ ಲೇವಡಿ ಮಾಡಿದ ಸಿಎಂ, ಉಪ ಚುನಾವಣೆಯಲ್ಲೂ ಕುಮಾರಸ್ವಾಮಿ ಚಾಮುಂಡೇಶ್ಚರಿ ಯಲ್ಲಿ ಪ್ರಚಾರ ಮಾಡಿದ್ದರು. ಆದ್ರೆ ಗೆದ್ದಿದ್ದು ಮಾತ್ರ ನಾನೇ, ಈಗಲೂ ಆದೇ ಮರುಕಳಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Karnataka Elections: My votes are not in HD Kumaraswamys pocket: Siddaramaiah

ಚಾಮುಂಡೇಶ್ವರಿ ಕ್ಷೇತ್ರ ಒಂದರಲ್ಲಿಯೇ ಮಾತ್ರ ಸ್ಪರ್ಧೆ ಮಾಡುತ್ತೇನೆ. ಇದೇ ತಿಂಗಳ 20 ಕ್ಕೆ ನಾಮಪತ್ರ ಸಲ್ಲಿಸುವೆ. ಚಾಮುಂಡೇಶ್ವರಿಯಲ್ಲಿ ನನ್ನ ಹವಾ ಹೇಗಿದೆ ನೀವೇ ಹೇಳಿ ಎಂದ ಮಾಧ್ಯಮದವರನ್ನೇ ಸಿಎಂ ಪ್ರಶ್ನಿಸಿದರು. ಚಾಮುಂಡೇಶ್ವರಿಯಲ್ಲಿ ತಮಗೆ ಮೋಕ್ಷ ಎಂಬ ಕುಮಾರಸ್ವಾಮಿ ಹೇಳಿಕೆಗೆ ಉತ್ತರಿಸಿದ ಅವರು, ಈ ರೀತಿ ಹೇಳಿಕೆ ನೀಡಬಾರದು ಎಂದು ಎಚ್‍ಡಿಕೆಗೆ ಕಿವಿಮಾತು ಹೇಳಿದರು.

English summary
"My votes are not in HD Kumaraswamy's pocket" Karnataka chief minsiter Siddaramaiah told in Mysuru. He is busy in campaign for Karnataka assembly elections 2018 from his Chamundeshwari constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X