ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಪಿರಿಯಾಪಟ್ಟಣದಲ್ಲಿ ಸಮಸ್ಯೆಗಳದ್ದೇ ಕಾರುಬಾರು!

By Yashaswini
|
Google Oneindia Kannada News

ಮೈಸೂರು, ಏಪ್ರಿಲ್ 18 : ಊರು ಎಂದ ಮೇಲೆ ಸಮಸ್ಯೆ ಸಾಮಾನ್ಯ. ಆ ಸಮಸ್ಯೆಗೆ ಉತ್ತರ ಹುಡುಕಲೆಂದೇ ಜನತಂತ್ರ ವ್ಯವಸ್ಥೆ. ಆದರೆ ನಾವು ಆಯ್ಕೆ ಮಾಡಿ ಕಳುಹಿಸಿದ ನಾಯಕರೇ ಸಮಸ್ಯೆ ಪರಿಹಾರದ ಹಾದಿಗಿರಲೀ, ಒಮ್ಮೆ ಗೆದ್ದ ಮೇಲಾದರೂ ನಮ್ಮ ನಡುವೆ ಬರಬೇಡವೇ ಎಂಬುದು ನಮ್ಮೆಲ್ಲರ ಹಂಬಲ.

ಈ ಮಾತು ಕೇವಲ ಒಬ್ಬರದಲ್ಲ, ಪ್ರತಿಯೊಬ್ಬರದು. ಮೈಸೂರಿನ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಎದುರಾಗಿರುವುದು ಇದೇ ಸಮಸ್ಯೆ. ಈ ಹಿಂದೆ ಆಯ್ಕೆಯಾದ ಶಾಸಕ ಕೆ. ವೆಂಕಟೇಶ್ ಗೆ ಎದುರಾಗಿದ್ದು ಹಾಗೂ ಈಗಲೂ ಬಗೆಹರಿಯಲಾಗದ ಸಮಸ್ಯೆ ಕುಡಿಯುವ ಹಾಗೂ ರೈತನ ಉಳುಮೆಯ ಜೀವಜಲ.

ಮೈಸೂರು: ಹೆಚ್. ಡಿ ಕೋಟೆ ಜನರ ಬವಣೆ ಕೇಳುವವರಿಲ್ಲ!ಮೈಸೂರು: ಹೆಚ್. ಡಿ ಕೋಟೆ ಜನರ ಬವಣೆ ಕೇಳುವವರಿಲ್ಲ!

ಈ ಕ್ಷೇತ್ರದ ಅಭಿವೃದ್ಧಿಗೆ ಕಳೆದ ಐದು ವರ್ಷಗಳಲ್ಲಿ 1500 ಕೋಟಿಗೂ ಹೆಚ್ಚು ಅನುದಾನ ಬಂದಿದೆ. ಹಲವು ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೊನಿಗಳಲ್ಲಿ ಶೇ 80ರಷ್ಟು ಕಾಂಕ್ರೀಟ್‌ ರಸ್ತೆ ಮತ್ತು ಚರಂಡಿ ನಿರ್ಮಿಸಲಾಗಿದೆ. ಇದರಿಂದ ದಲಿತರ ಕಾಲೊನಿಗಳಲ್ಲಿ ಇದ್ದ ಬಹುತೇಕ ಸಮಸ್ಯೆಗಳು ನೀಗಿವೆ. ಆದರೆ, ಇತರ ವರ್ಗದವರು ನೆಲೆಸಿರುವ ಕಡೆಗಳಲ್ಲಿ ರಸ್ತೆಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ.

ಪಿರಿಯಾಪಟ್ಟಣ : ಕಾಂಗ್ರೆಸ್- ಜೆಡಿಎಸ್ ಕುತೂಹಲದ ಹಣಾಹಣಿಪಿರಿಯಾಪಟ್ಟಣ : ಕಾಂಗ್ರೆಸ್- ಜೆಡಿಎಸ್ ಕುತೂಹಲದ ಹಣಾಹಣಿ

ಗ್ರಾಮೀಣ ಪ್ರದೇಶಗಳಿಗೆ ಸಾಗಿದಂತೆ ಹದಗೆಟ್ಟ ರಸ್ತೆಗಳು ಕಣ್ಣಿಗೆ ಬೀಳುತ್ತವೆ. ಹಳ್ಳಿಗಳಲ್ಲಿ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡದೆ ಇರುವುದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅರಣ್ಯದೊಳಗೆ ವಾಸಿಸುತ್ತಿರುವ ಗಿರಿಜನರ ಹಾಡಿಗಳಲ್ಲಿ ನಿರೀಕ್ಷಿತ ಅಭಿವೃದ್ಧಿ ಕೆಲಸ ನಡೆದಿಲ್ಲ. ಅರಣ್ಯ ಇಲಾಖೆಯ ಅಸಹಕಾರದ ನೆಪವನ್ನು ನೀಡಲಾಗುತ್ತಿದೆ. ಹಲವು ವರ್ಷಗಳಿಂದ ಕಷ್ಟದ ಬದುಕು ಸಾಗಿಸುತ್ತಿರುವ ಹಾಡಿಯ ಜನರ ಬವಣೆ ಮುಂದುವರಿದಿದೆ.

ಸಮರ್ಪಕವಾಗಿ ಜಾರಿಯಾಗದ ಯೋಜನೆಗಳು

ಸಮರ್ಪಕವಾಗಿ ಜಾರಿಯಾಗದ ಯೋಜನೆಗಳು

ಗಿರಿಜನರಿಗೆ ಸಾಕಷ್ಟು ಯೋಜನೆಗಳಿದ್ದರೂ ಸಮರ್ಪಕವಾಗಿ ಜಾರಿಯಾಗಿಲ್ಲ. ಹಾಡಿಗಳಲ್ಲಿ ರಸ್ತೆ, ಚರಂಡಿ ವ್ಯವಸ್ಥೆಯಿಲ್ಲ. ಇದರಿಂದ ಶುಚಿತ್ವ ಕಾಪಾಡಲು ಸಾಧ್ಯವಾಗುತ್ತಿಲ್ಲ. ಸಣ್ಣ ಗುಡಿಸಲುಗಳಲ್ಲಿ ವಾಸಿಸುವ ಗಿರಿಜನರು ಸುಲಭದಲ್ಲಿ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಮಳೆಗಾಲದಲ್ಲಿ ಜೀವನ ಸಾಗಿಸುವುದೇ ದುಸ್ತರ ಎನಿಸಿದೆ. ಶಿಕ್ಷಣ ಕ್ಷೇತ್ರದ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಸುವ ವಿಚಾರದಲ್ಲಿ ಪಿರಿಯಾಪಟ್ಟಣ ಹಿಂದೆ ಉಳಿದುಕೊಂಡಿದೆ ಎಂಬುದು ಜನಾಭಿಪ್ರಾಯ. ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭಿಸಲು ಮಂಜೂರಾತಿ ದೊರೆತಿದ್ದರೂ ಕಟ್ಟಡ ನಿರ್ಮಾಣ ಕೆಲಸ ನಿರೀಕ್ಷಿತ ವೇಗದಲ್ಲಿ ನಡೆದಿಲ್ಲ. ಇದರಿಂದ ಪ್ರಸಕ್ತ ವರ್ಷದಿಂದ ಕಾಲೇಜು ಆರಂಭಿಸಲು ಸಾಧ್ಯವಾಗಿಲ್ಲ. ಯುವಜನರಿಗೆ ಉದ್ಯೋಗ ಸೃಷ್ಟಿಸುವ ದೃಷ್ಟಿಯಿಂದ ನರ್ಸಿಂಗ್ ಕಾಲೇಜು, ಕೈಗಾರಿಕಾ ವಲಯ ಸ್ಥಾಪಿಸುವ ಅಗತ್ಯವಿತ್ತು.

ಕಾವೇರಿ ವಿವಾದದ ಪ್ರಭಾವ

ಕಾವೇರಿ ವಿವಾದದ ಪ್ರಭಾವ

150 ಕೆರೆಗಳಿಗೆ ಕಾವೇರಿ ನದಿಯಿಂದ ನೀರು ತುಂಬಿಸುವ ಯೋಜನೆ ಪೂರ್ಣಗೊಂಡಿಲ್ಲ. ಕಾವೇರಿ ವಿವಾದದಿಂದಾಗಿ ಈ ಯೋಜನೆ ತಡವಾಗಿದೆ. ಯೋಜನೆಯ ಲಾಭ ಜನರಿಗೆ ತಲುಪಲು ಇನ್ನೂ ಹಲವು ತಿಂಗಳುಗಳು ಬೇಕು. ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಹಲವು ಗ್ರಾಮಗಳಿಗೆ ಕಾವೇರಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಆದರೂ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತತ್ವಾರ ಇದೆ. ಅಂತರ್ಜಲಮಟ್ಟ ಕುಸಿದಿರುವ ಕಾರಣ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೃಷ್ಣರಾಜ ಕ್ಷೇತ್ರದ ಭವಿಷ್ಯ ನಿರ್ಧರಿಸಲಿದೆ ಕಸದ ವಾಸನೆ!ಕೃಷ್ಣರಾಜ ಕ್ಷೇತ್ರದ ಭವಿಷ್ಯ ನಿರ್ಧರಿಸಲಿದೆ ಕಸದ ವಾಸನೆ!

ಕೃಷಿಕರ ಸಮಸ್ಯೆ ಕೇಳುವವರಿಲ್ಲ

ಕೃಷಿಕರ ಸಮಸ್ಯೆ ಕೇಳುವವರಿಲ್ಲ

ತಂಬಾಕು ಬೆಳೆಗಾರರ ಸಮಸ್ಯೆಗೆ ಶಾಸಕರು ಸರಿಯಾಗಿ ಸ್ಪಂದಿಸಿಲ್ಲ ಎಂಬ ದೂರುಗಳು ಇವೆ. ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಸಂಕಷ್ಟದಲ್ಲಿರುವ ತಂಬಾಕು ಬೆಳೆಗಾರರಿಗಾಗಿ ವಿಶೇಷ ಪ್ಯಾಕೇಜ್ ತಂದು ನೆರವು ನೀಡುವ ಪ್ರಯತ್ನವನ್ನು ಶಾಸಕರು ಮಾಡಿಲ್ಲ. ಕುಡಿಯುವ ನೀರಿನ ಅಭಾವಕ್ಕೆ ಶಾಶ್ವತ ಪರಿಹಾರ ಲಭಿಸಿಲ್ಲ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುವುದನ್ನು ಇದುವರೆಗೂ ತಪ್ಪಿಸಲು ಯಾರಿಂದಲೂ ಸಾಧ್ಯವಾಗಿಲ್ಲ ಎನ್ನುತ್ತಾರೆ ನಾಗರೀಕರು.
ಇನ್ನು ಈ ಕುರಿತಾಗಿ ಮಾಹಿತಿ ನೀಡಿದ ಶಾಸಕ ವೆಂಕಟೇಶ್, ನನ್ನ ರಾಜಕೀಯ ಜೀವನದಲ್ಲಿ ಇಷ್ಟು ಮೊತ್ತದ ಹಣ ತಂದು ಅಭಿವೃದ್ಧಿ ಕಾರ್ಯ ಮಾಡಿಲ್ಲ. ದ್ದರಿಂದ ಐದು ವರುಷಗಳ ಅವಧಿಯನ್ನುಎಂದಿಗೂ ಮರೆಯಲು ಸಾಧ್ಯವಿಲ್ಲ. 100ಕ್ಕೂ ಹೆಚ್ಚು ಗ್ರಾಮಗಳಲ್ಲಿ ಎಲ್ಲಾ ಜಾತಿ ಜನಾಂಗದವರಿಗೆ ಸಮುದಾಯ ಭವನದ ನಿರ್ಮಾಣಕ್ಕಾಗಿ ಅನುದಾನ ನೀಡಿದ್ದೇನೆ. ಮುಂದಿನ ಮಳೆಗಾಲದಲ್ಲಿ ಖಂಡಿತವಾಗಿಯೂ ಕೆರೆಗಳಿಗೆ ನೀರು ಹರಿಯಲಿದೆ ಎಂದರು.

ಸುಸಜ್ಜಿತ ಆಸ್ಪತ್ರೆಯಿಲ್ಲ

ಸುಸಜ್ಜಿತ ಆಸ್ಪತ್ರೆಯಿಲ್ಲ

ಜೆಡಿಎಸ್ ಅಭ್ಯರ್ಥಿ ಕೆ. ಮಹದೇವ್ ಮಾತನಾಡಿ, ತಾಲೂಕಿನಲ್ಲಿ1600 ಕೋಟಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ ಎಂದು ಬೀಗುವ ಶಾಸಕರು ಕಮೀಷನ್ ದಂಧೆಗಾಗಿ ಹಣ ತಂದಿದ್ದಾರೆಯೇ ಹೊರತು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿಲ್ಲ ಎನ್ನುತ್ತಾರೆ. ಈ ಕುರಿತಾಗಿ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ. ಎಸ್ ಇ ಜೆಡ್ ವಲಯವನ್ನು ತಾಲೂಕಿಗೆ ತರಲು ಯತ್ನಿಸುವ ಗೋಜಿಗೆ ಶಾಸಕರು ಹೋಗಿಲ್ಲ. ತಂಬಾಕು ನಿಷೇಧದ ನಂತರ ರೈತರನ್ನು ಪರ್ಯಾಯ ಬೆಳೆಗೆ ಸಿದ್ಧಪಡಿಸುವ ಕೆಲಸವನ್ನೂ ಮಾಡದೇ ಶಾಸಕರು ವಿಫಲರಾಗಿದ್ದಾರೆ ಎಂದರು. ಚುನಾವಣೆ ಹತ್ತಿರ ಬಂದಿದೆ. ಇನ್ನಾದರೂ ಗೆಲ್ಲುವ ನಮ್ಮ ಜನನಾಯಕರು ಜನರ ಸಮಸ್ಯೆಗಳತ್ತ ಗಮನ ಹರಿಸಲಿ ಎಂಬುದು ನಮ್ಮ ಆಶಯ.

ಹುಣಸೂರು: ಜನ ಮತ ಬಹಿಷ್ಕಾರ ಮಾಡುತ್ತೇವೆ ಎನ್ನಲು ಕಾರಣ ಹಲವುಹುಣಸೂರು: ಜನ ಮತ ಬಹಿಷ್ಕಾರ ಮಾಡುತ್ತೇವೆ ಎನ್ನಲು ಕಾರಣ ಹಲವು

English summary
Karnataka assembly elections 2018: Piriyapatna, which is one of the major assembly constituencies of Mysuru has many problems. Here is the list of major problems and issues of Piriyapatna constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X