ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಾಸು ಜೊತೆ ಮಾತುಕತೆ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಮೇ 09: ಮೈಸೂರಿನಲ್ಲಿ ಅತೀ ಬುದ್ಧಿವಂತರ ಕ್ಷೇತ್ರವೆಂದೇ ಹೆಸರಾಗಿರುವ ಚಾಮರಾಜ. ಇಲ್ಲಿ ನಿಂತಿರುವ ಪ್ರತಿಯೊಬ್ಬ ಅಭ್ಯರ್ಥಿಯೂ ಬೇರೆಲ್ಲಾ ಕ್ಷೇತ್ರಗಳಿಗಿಂತ ಹೆಚ್ಚು ವಿದ್ಯಾವಂತರು. ಇಂತಹ ಕ್ಷೇತ್ರದಲ್ಲಿ ಮತದಾರ ಪ್ರಭು ಯಾರನ್ನು ಗೆಲುವಿನ ಗಾದಿಯಲ್ಲಿ ಕೂರಿಸಲಿದ್ದಾನೆ ಎಂಬುದು ಮಾತ್ರ ಸಂಶಯಾಸ್ಪದ. ಚಾಮರಾಜ ಕ್ಷೇತ್ರದಲ್ಲಿ ತಾವು ಗೆದ್ದರೆ ಯಾವೆಲ್ಲಾ ಕೆಲಸ ಮಾಡುತ್ತೇವೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಾಸು ತಿಳಿಸಿದ್ದಾರೆ. ಇಲ್ಲಿದೆ ಅವರ ಸಂದರ್ಶನದ ಸಾರ.

ಪ್ರ: ನೀವು ಶಾಸಕರಾದ ಬಳಿಕ ನಿಮ್ಮ ಆದ್ಯತೆಗಳೇನು?
ಉ: ಚುನಾವಣೆಯಲ್ಲಿ ಆಯ್ಕೆಯಾದ ಬಳಿಕ ಬಹಳಷ್ಟು ಕೆಲಸಗಳನ್ನು ಪೂರ್ಣ ಗೊಳಿಸಬೇಕಿದೆ. ಮುಖ್ಯವಾಗಿ ದೇವರಾಜ ಮಾರುಕಟ್ಟೆ, ಲ್ಯಾನ್ಸ್ ಡೌನ್ ಕಟ್ಟಡ ಪುನರ್ ನಿರ್ಮಾಣ ಆಗಬೇಕಿದೆ. ಇವುಗಳಿಗೆ ಮಂಜೂರಾತಿ ದೊರೆತಿದ್ದು, ಕೆಲಸ ಆರಂಭವಾಗಬೇಕು. ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಆಶ್ರಯ ಯೋಜನೆಯಡಿ ಮನೆಗಳು ಮಂಜೂರಾಗಿಲ್ಲ. ಈ ವಿಷಯ ನ್ಯಾಯಾಲಯದಲ್ಲಿದ್ದು ಇತ್ಯರ್ಥವಾಗಬೇಕಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಪಾರ್ಕ್ ಸ್ಥಾಪಿಸಲಾಗುವುದು. ಒಳಚರಂಡಿ ಕೆಲಸಗಳಿಗೆ ಆದ್ಯತೆ ಕೊಡಲಾಗುವುದು.

ಕಷ್ಟವೆಂಬ ರೋಗ ಗುಣಪಡಿಸಲು ರಾಜಕಾರಣಕ್ಕೆ ಬಂದೆ: ಯತೀಂದ್ರ ಸಂದರ್ಶನಕಷ್ಟವೆಂಬ ರೋಗ ಗುಣಪಡಿಸಲು ರಾಜಕಾರಣಕ್ಕೆ ಬಂದೆ: ಯತೀಂದ್ರ ಸಂದರ್ಶನ

ಪ್ರ: ನಿಮಗೇಕೇ ಮತ ಹಾಕಬೇಕು ?
ಉ: ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಮತ ಕೇಳುತ್ತಿದ್ದೇನೆ. ಜಾತಿ, ಧರ್ಮದ ವಿಚಾರ ಇಟ್ಟುಕೊಂಡು ಮತ ಕೇಳಲು ಹೋಗುವುದಿಲ್ಲ. ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವುದಷ್ಟೇ ನನ್ನ ಆದ್ಯತೆ. ಆದ್ದರಿಂದ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಮತ ಕೇಳುತ್ತೇನೆ.

Karnataka Elections: Chamaraja Congress candidate Vasu interview

ನಿಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ ಎಂಬ ಆರೋಪ ವಿಪಕ್ಷಗಳಿವೆಯಲ್ಲಾ ? ಅವರಿಗೆ ಟೀಕಿ ಸಲು ಬೇರೆ ವಿಚಾರಗಳು ಇಲ್ಲದಿ ದ್ದಾಗ ಇದನ್ನು ಪ್ರಸ್ತಾಪಿಸುತ್ತಿದ್ದಾರೆ. ಅವರ ದೃಷ್ಟಿಕೋನದ ಬಗ್ಗೆಯೇ ನನಗೆ ಅನುಮಾನವಿದೆ. ಅಭಿವೃದ್ಧಿ ಎಂದರೆ ಏನು ಎಂಬುದು ಅವ ರಿಗೆ ಗೊತ್ತಿದ್ದರೆ ಇಂತಹ ಪ್ರಶ್ನೆ ಕೇಳುತ್ತಿರಲಿಲ್ಲ. 5 ವರ್ಷಗಳಲ್ಲಿ ಮ್ಯಾಜಿಕ್ ಮಾಡಲು ಸಾಧ್ಯ ವಿಲ್ಲ. ಹಲವು ಕೆಲಸಗಳು ಬಾಕಿ ಉಳಿದಿದ್ದು, ಅವುಗಳನ್ನು ಮುಂದಿನ ಅವಧಿಯಲ್ಲಿ ಮಾಡುತ್ತೇನೆ.

ಪ್ರ: ನಿಮ್ಮ ಪಕ್ಷದವರೇ ನಿಮ್ಮ ಕಾಲೆಳೆಯುತ್ತಿದ್ದಾರೆ ಎಂಬ ವದಂತಿ ಇದೆಯಲ್ಲಾ ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ಉ: ಯಾವ ಪಕ್ಷದಲ್ಲಿ ಇಂತಹ ಕೆಲಸ ನಡೆಯುವುದಿಲ್ಲ ಹೇಳಿ? ಆದರೆ ನಾನು ಅವುಗಳನ್ನೆಲ್ಲಾ ನಕಾರಾತ್ಮಕವಾಗಿ ತೆಗೆದುಕೊಳ್ಳುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಇದೊಂದು ಸಹಜ ಪಕ್ರಿಯೆ. ಒಂದು ಕ್ಷೇತ್ರಕ್ಕೆ ಹಲವು ಟಿಕೆಟ್ ಆಕಾಂಕ್ಷಿಗಳಿರುತ್ತಾರೆ. ಅವರನ್ನು ಮನವೊಲಿಸಿ ಮುಂದಿನ ಹೆಜ್ಜೆ ಇಡಲಾಗುವುದು. ನನಗೆ ಇದರಿಂದ ಏನೂ ತೊಂದರೆಯಾಗಿಲ್ಲ.

English summary
Karnataka assembly elections 2018: Here is a political interview of Congress leader Vasu, who is a Congress candidate from Chamaraja constituency of Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X