ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರುಣಾದಲ್ಲಿ ಗೆಲ್ಲುವವರು ಯಾರು? ಇಲ್ಲಿದೆ ಗ್ರೌಂಡ್ ರಿಪೋರ್ಟ್

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಏಪ್ರಿಲ್ 25 : ರಾಜಕೀಯ ಮೇಲಾಟಕ್ಕೆ ಈ ಬಾರಿ ಸ್ಟಾರ್ ಕ್ಷೇತ್ರವೆಂದೇ ಹೆಸರಾಗಿದ್ದು ವರುಣಾ ಕ್ಷೇತ್ರ. ಎಲ್ಲವೂ ಸಾಂಗೋಪಾಂಗವಾಗಿ ಸಾಗುತ್ತಿತ್ತು ಎನ್ನುವಷ್ಟವರಲ್ಲಿ ಏಕಾಏಕಿ ಅಲೆಯೊಂದು ಎಬ್ಬಿತ್ತು. ಅದಕ್ಕೆ ಇಲ್ಲಿನ ಜನರು ಸಹ ಸ್ವಲ್ಪ ಗೊಂದಲವಾಗಿದ್ದರು. ಕಾರಣ ಇಲ್ಲಿನ ಬಿಜೆಪಿ ಅಭ್ಯರ್ಥಿಯ ದಿಢೀರ್ ಬದಲಾವಣೆ.

ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಹಾಲಿ, ಮಾಜಿ ಸಿಎಂಗಳ ಪುತ್ರರು ಸ್ಪರ್ಧಿಸುತ್ತಾರೆ ಎಂಬ ಕಾರಣಕ್ಕೆ ಇಡೀ ರಾಜ್ಯಾದ್ಯಂತ ವರುಣಾ ಕ್ಷೇತ್ರವು ಹೈ ವೋಲ್ಟೇಜ್ ಕ್ಷೇತ್ರವೆಂದೇ ಬಿಂಬಿತವಾಗಿತ್ತು. ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಅವರು ಕಳೆದ ಹಲವು ದಿನದಿಂದ ಬಿರುಸಿನ ಪ್ರಚಾರ ನಡೆಸಿದ್ದರು. ಅವರೇ ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎಂದೇ ಭಾವಿಸಲಾಗಿತ್ತು. ಯತೀಂದ್ರ ಅವರೂ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಜನತೆ ಈ ಬಾರಿ 'ಕೈ' ಮೇಲಾಗುವುದೇ? ಕಮಲ ಅರಳುವುದೇ? ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದರು.

ವರುಣಾದಲ್ಲಿ ವಿಜಯೇಂದ್ರಗೆ ಟಿಕೆಟ್ ಕೈತಪ್ಪಿದ ಬಳಿಕ ಏನೇನಾಯ್ತು?ವರುಣಾದಲ್ಲಿ ವಿಜಯೇಂದ್ರಗೆ ಟಿಕೆಟ್ ಕೈತಪ್ಪಿದ ಬಳಿಕ ಏನೇನಾಯ್ತು?

ಡಾ.ಯತೀಂದ್ರ ಕಳೆದ ಒಂದೂವರೆ ವರ್ಷದಿಂದ ಕ್ಷೇತ್ರದಲ್ಲಿಯೇ ಬೀಡು ಬಿಟ್ಟಿದ್ದು ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ತಂದೆಯ ಆಡಳಿತದ ಜತೆಗೆ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಕ್ಷೇತ್ರದ ಜನರಿಗೆ ಪರಿಚಿತರಾಗಿದ್ದಾರೆ. ಬಿಜೆಪಿ, ಜೆಡಿಎಸ್ನ ಇತ್ತೀಚಿನ ಬೆಳವಣಿಗೆಗಳು ಕಾಂಗ್ರೆಸ್ ಮೇಲುಗೈ ಸಾಧಿಸಲು ಪೂರಕವಾಗಿವೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಕ್ಷೇತ್ರಕ್ಕೆ ನೀಡಿದ ಹೆಚ್ಚಿನ ಅನುದಾನ, ಕ್ಷೇತ್ರದಲ್ಲಿ ಕೈಗೊಂಡ ಒಂದಷ್ಟು ಅಭಿವೃದ್ಧಿ ಕಾರ್ಯಗಳು ಯತೀಂದ್ರ ಅವರ ಗೆಲುವಿಗೆ ಪೂರಕವಾಗಲಿದೆ ಎನ್ನಲಾಗುತ್ತಿದೆ.

ವರುಣಾದಲ್ಲಿ 3 ನೇ ಬಾರಿಯ ಬಿಜೆಪಿ ದೊಂಬರಾಟ

ವರುಣಾದಲ್ಲಿ 3 ನೇ ಬಾರಿಯ ಬಿಜೆಪಿ ದೊಂಬರಾಟ

ವ ರುಣ ಕ್ಷೇತ್ರದ ವಿಷಯದಲ್ಲಿ ಬಿಜೆಪಿ ಮೂರನೇ ಬಾರಿಗೆ ಎಡವಿದೆ. ಇದು ಮುಂದಿನ ದಿನಗಳಲ್ಲಿ ಪಕ್ಷದ ನಾಯಕತ್ವಕ್ಕೇ ಕೊಡಲಿ ಪೆಟ್ಟು ನೀಡಲಿದ್ದು, ಬೆಂಬಲಿಗರಿಗೆ ದೊಡ್ಡ ಆಘಾತ ತಂದಿದೆ. ಈ ಬೆಳವಣಿಗೆ ಮೈಸೂರು ಭಾಗದಲ್ಲಿ ವೀರಶೈವ- ಲಿಂಗಾಯತ ನಾಯಕತ್ವಕ್ಕೆ ಇದ್ದ ಅವಕಾಶವೂ ತಪ್ಪಿಹೋದಂತಾಗಿದೆ. 2008ರ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸಿದ್ದರಾಮಯ್ಯ, ಬಿಜೆಪಿಯಿಂದ ನಿವೃತ್ತ ಪೊಲೀಸ್ ಅಧಿಕಾರಿ ರೇವಣ ಸಿದ್ದಯ್ಯ ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ 71,908 ಮತ ಪಡೆದರೆ, ಬಿಜೆಪಿ 53,071 ಮತ ಗಳಿಸಿತ್ತು. ಜಾ.ದಳ 4133 ಹಾಗೂ ಬಿಎಸ್​ಪಿ 5426 ಮತ ಪಡೆದಿತ್ತು. ಈ ಚುನಾವಣೆ ನಂತರ ರೇವಣ ಸಿದ್ದಯ್ಯ ಕಾಂಗ್ರೆಸ್ ಸೇರ್ಪಡೆಗೊಂಡರೆ, 53 ಸಾವಿರ ಮತ ನೀಡಿದ್ದ ಜನರ ಕಷ್ಟ ವಿಚಾರಿಸಲು ಬಿಜೆಪಿಯಿಂದ ಮುಖಂಡರೇ ಇಲ್ಲದಂತಾಯಿತು.

2013ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಇಬ್ಭಾಗವಾಗಿ ಕೆಜೆಪಿ ಉದಯವಾಗಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ, ಕೆಜೆಪಿಯ ಕಾ.ಪು.ಸಿದ್ದಲಿಂಗಸ್ವಾಮಿ ವಿರುದ್ಧ ಗೆಲುವು ಸಾಧಿಸಿದರು. ಈ ಚುನಾವಣೆಯಲ್ಲಿ ಬಿಜೆಪಿ ಪಡೆದ ಮತ 1070 ಎಂಬುದು ಗಮನಾರ್ಹ. ಇದು ಜಾ.ದಳ ಹಾಗೂ ಬಿಎಸ್​ಪಿ ಮತಗಳ ಅರ್ಧಕ್ಕಿಂತ ಕಡಿಮೆ ಇತ್ತು.
ನಂತರ ಕೆಜೆಪಿ ಹಾಗೂ ಬಿಜೆಪಿ ಒಗ್ಗೂಡಿದರೂ ವರುಣ ಕ್ಷೇತ್ರದಲ್ಲಿ ಕೆಲಸ ಮಾಡಲು ಯಾವ ಮುಖಂಡನನ್ನೂ ಪಕ್ಷ ಸಿದ್ಧಪಡಿಸಲೇ ಇಲ್ಲ. ಇದರಿಂದಾಗಿ ಪಕ್ಷದ ಶಕ್ತಿ ದಿನದಿಂದ ದಿನಕ್ಕೆ ಕುಸಿಯಿತು.

ವರುಣಾದಲ್ಲಿ ಸಿಎಂ ಪುತ್ರನಿಗೆ ವರದಾನವಾದ ಬಿಜೆಪಿ ಹೈಡ್ರಾಮಾ!ವರುಣಾದಲ್ಲಿ ಸಿಎಂ ಪುತ್ರನಿಗೆ ವರದಾನವಾದ ಬಿಜೆಪಿ ಹೈಡ್ರಾಮಾ!

15 ದಿನದಲ್ಲಿ ಮಿಂಚಿನಂತೆ ಸಂಚರಿಸಿದ್ದ ವಿಜಯೇಂದ್ರ

15 ದಿನದಲ್ಲಿ ಮಿಂಚಿನಂತೆ ಸಂಚರಿಸಿದ್ದ ವಿಜಯೇಂದ್ರ

ವರುಣದಲ್ಲಿ ನಾಯಕತ್ವಕ್ಕೆ ಅವಕಾಶ ಇದೆ ಎಂಬುದನ್ನು ಬಿ.ವೈ.ವಿಜಯೇಂದ್ರ ಕೇವಲ ಹದಿನೈದು ದಿನಗಳಲ್ಲಿ ತೋರಿಸಿಕೊಟ್ಟಿದ್ದರು. ಪಕ್ಕಾ ಚುನಾವಣಾ ತಂತ್ರಗಾರಿಕೆ ಮೂಲಕ ಕ್ಷೇತ್ರದಲ್ಲಿ ಒಂದು ಅಲೆ ಸೃಷ್ಟಿ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆ ಮೂಲಕ ಮುಂದಿನ ದಿನಗಳಲ್ಲಿ ಸಮುದಾಯದ ನಾಯಕತ್ವ ಬೆಳೆಯಲು ಪೂರಕ ವಾತಾವರಣ ಸೃಷ್ಟಿಸಿಕೊಳ್ಳುವ ಸಾಧ್ಯತೆಯೂ ಇತ್ತು. ಆದರೆ, ಬಿಜೆಪಿ ಒಳಜಗಳದಿಂದ ತೆಗೆದುಕೊಂಡ ಕೊನೇ ಘಳಿಗೆಯ ನಿರ್ಧಾರ ಕ್ಷೇತ್ರಕ್ಕೆ ಮಾತ್ರವಲ್ಲ, ಇಡೀ ಜಿಲ್ಲೆಯಲ್ಲೇ ವೀರಶೈವ ಲಿಂಗಾಯತ ನಾಯಕತ್ವಕ್ಕೆ ಪೆಟ್ಟು ಕೊಟ್ಟಿದೆ.

ಅಭ್ಯರ್ಥಿ ಬಗ್ಗೆ ಮಾಹಿತಿ ಇಲ್ಲ

ಅಭ್ಯರ್ಥಿ ಬಗ್ಗೆ ಮಾಹಿತಿ ಇಲ್ಲ

ಈ ಹಿನ್ನೆಲೆ ವಿಜಯೇಂದ್ರ ಬದಲಾಗಿ ತೋಟದಪ್ಪ ಬಸವರಾಜು ಅವರನ್ನು ಹುರಿಯಾಳುವಾಗಿ ಕಣಕ್ಕೆ ಇಳಿಸಿತು. ಆದರೆ, ಬಸವರಾಜು ಅವರ ಬಗ್ಗೆ ಕ್ಷೇತ್ರದ ಜನರಿಗೆ ಹೆಚ್ಚೇನೂ ತಿಳಿದಿಲ್ಲ. ಕಡೇ ಕ್ಷಣದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಿರುವುದು ಸ್ಥಳೀಯ ಬಿಜೆಪಿ ಕಾರ್ಯಕರ್ತರು, ಮುಖಂಡರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು. ಪಕ್ಷ ಸೂಚಿರುವ ಹೊಸ ಅಭ್ಯರ್ಥಿಯು ತಮ್ಮನ್ನು ಕ್ಷೇತ್ರಕ್ಕೆ ಪರಿಚಯಿಸಿಕೊಂಡು ಗೆಲುವು ಸಾಧಿಸಲು ಸಾಧ್ಯವೆ? ಎಂದು ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದರು.

ಈ ಕ್ಷೇತ್ರದಲ್ಲಿ ಅಭಿಷೇಕ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಬಹಳದಿನಗಳ ಹಿಂದೆಯೇ ಘೋಷಣೆ ಮಾಡಿದೆ. ಆದರೆ ಅವರು ಪ್ರಚಾರ ಕಣದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಬಿಜೆಪಿ ಬೆಳವಣಿಗೆ, ಜೆಡಿಎಸ್ ನ ಹಿನ್ನಡೆಯಿಂದಾಗಿ ಬಿಜೆಪಿ ಹಾಗೂ ಜೆಡಿಎಸ್ ನ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಾರೆ.

ಯಾರೀ ತೋಟದಪ್ಪ ಬಸವರಾಜ್ ?

ಯಾರೀ ತೋಟದಪ್ಪ ಬಸವರಾಜ್ ?

ಡಾ.ರಾಜ್ ಕುಮಾರ್ ಅಭಿನಯದ ಬಂಗಾರದ ಮನುಷ್ಯ ರಿಲೀಸ್ ಆದಾಗ 2-3 ದಿನ ಜನ ಬರಲಿಲ್ಲ. ಆಮೇಲೆ ಜನ ಬಂದ್ರು ನೋಡಿ... ಅದು ಪಿಕಪ್ ತಗೊಂಡು ಎರಡು ವರ್ಷ ಓಡ್ತು. ಹಾಗೆಯೇ ಈ ಎಲೆಕ್ಷನ್ ನಲ್ಲಿ ನಾನಿದ್ದೇನೆ. ಮೊದಲದಿನ ಜನ ಬರುವುದಿಲ್ಲ. ಆಮೇಲೆ ನೋಡಿ ನಮ್ಮ ಜನರ ರಿಯಾಕ್ಷನ್ ಹೇಗಿರುತ್ತದೆ ಎನ್ನುತ್ತಾರೆ ಚಪಾತಿ ಬಸವರಾಜ್.

ವರುಣಾ ಕ್ಷೇತ್ರದ ರಾಜಕೀಯ ದೊಂಬರಾಟದಲ್ಲಿ ಏಕಾಏಕಿ ಗುರುತಿಸಿಕೊಂಡ ತೋಟದಪ್ಪ ಬಸವರಾಜು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದು ಹೀಗೆ. . 56 ವರ್ಷದ ತೋಟದಪ್ಪ ಬಸವರಾಜು ವೃತ್ತಿಯಲ್ಲಿ ಹೋಟೆಲ್ ಉದ್ಯಮಿ. ತಿ.ನರಸೀಪುರದಲ್ಲಿ ಹೋಟೆಲ್ ಇದೆ. ಇವರ ಹೋಟೆಲ್ ನಲ್ಲಿ ಚಪಾತಿ ಫೇಮಸ್. ಹೀಗಾಗಿ, ಚಪಾತಿ ಬಸವರಾಜಪ್ಪ' ಎಂದೇ ಸ್ಥಳೀಯರಿಗೆ ಪರಿಚಿತ. ಪತ್ನಿ ಟಿ.ಎನ್ ನಾಗರತ್ನಮ್ಮ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿ. ಪುತ್ರಿ ಬಿ.ಸಿಂಧೂ ಬೆಂಗಳೂರಿನಲ್ಲಿ ಸಾಫ್ಟವೇರ್ ಎಂಜಿನಿಯರ್ ಪುತ್ರ ಬಿ.ಶರತ್ , ಚಂದ್ರಕಾಂತ ಎಂಜಿನಿಯರಿಂಗ್ ವಿದ್ಯಾರ್ಥಿ.

ವೀರಶೈವ-ಲಿಂಗಾಯತ ಸಮಾಜದ ಬಸವರಾಜ್

ವೀರಶೈವ-ಲಿಂಗಾಯತ ಸಮಾಜದ ಬಸವರಾಜ್

ವೀರಶೈವ-ಲಿಂಗಾಯತ ಸಮಾಜದ ಬಸವರಾಜ್ ವರುಣಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ, ಮೈಸೂರು ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಬಿಕಾಂ ಪದವೀಧರರು. ಚುನಾವಣಾ ರಾಜಕಾರಣವೂ ಅವರಿಗೆ ಹೊಸದಲ್ಲ. ತಿ.ನರಸೀಪುರಲ್ಲಿ 1995ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್;ಗಾಗಿ ಆಗ್ರಹಿಸಿ ವರುಣಾ ಕೆರೆ ದಡದಲ್ಲಿ 28 ಗಂಟೆ ಉಪವಾಸ ಕುಳಿತಿದ್ದನ್ನು ಈಗಲೂ ಅವರು ಮೆಲುಕು ಹಾಕುತ್ತಾರೆ.

ಒಟ್ಟಾರೆ ವಿಜಯೇಂದ್ರಗೆ ವರುಣ ಕ್ಷೇತ್ರದಲ್ಲಿ ಟಿಕೆಟ್ ಕೈ ತಪ್ಪುತ್ತಿದ್ದಂತೆಯೇ ಸಿದ್ದರಾಮಯ್ಯ ಕೊಂಚ ನೆಮ್ಮದಿಯಾಗಿದ್ದಾರೆ. ವಿಜಯೇಂದ್ರ ಸ್ಪರ್ಧೆಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಪ್ರಸ್ತುತ ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಪ್ರಬಲ ಎದುರಾಳಿ ಇಲ್ಲದಂತಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ಇನ್ಮುಂದೆ ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರಕ್ಕೆ ಹೆಚ್ಚಿನ ಗಮನ ಕೇಂದ್ರೀಕರಿಸಲು ಪೂರಕ ವಾತಾವರಣವನ್ನು ಎದುರಾಳಿಗಳೇ ಸೃಷ್ಟಿಸಿಕೊಟ್ಟಿದ್ದಾರೆ. ಸಿಎಂ ಪುತ್ರ ಯತೀಂದ್ರಗೂ ಪ್ರಬಲ ಎದುರಾಳಿಗಳಿಲ್ಲದೆ ಗೆಲುವಿನ ಹಾದಿ ಸುಗಮವಾಗಿದೆ.

English summary
Karnataka assembly elections 2018: Who will win in Varuna constituency in Mysuru? Here is the ground report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X