ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2018ರ ಚುನಾವಣೆಗೆ ಸ್ಪರ್ಧೆ : ಪ್ರೇಮಕುಮಾರಿ ಸಂದರ್ಶನ

By Yashaswini
|
Google Oneindia Kannada News

ಮೈಸೂರು, ಡಿಸೆಂಬರ್ 15 : ಬಿಜೆಪಿ ನಾಯಕ, ಮಾಜಿ ಸಚಿವ ಎಸ್.ಎ.ರಾಮದಾಸ್ ಅವರೊಂದಿಗೆ ಕಳೆದ ಐದು ವರುಷಗಳ ಹಿಂದೆ ರಾತ್ರೋ ರಾತ್ರಿ ಕೇಳಿಬಂದ ಹೆಸರು ಪ್ರೇಮ ಕುಮಾರಿ.

'ನನ್ನನ್ನು ಅವರು ಪ್ರೀತಿಸಿ ವಂಚಿಸಿದ್ದಾರೆ' ಎಂದು ಹಿಂದೆ ಆರೋಪ ಮಾಡಿದ್ದ ಪ್ರೇಮ ಕುಮಾರಿ ಅವರು ಈಗ ಹೊಸ ಬಾಂಬ್ ಸಿಡಿಸಿದ್ದಾರೆ. 2018ರ ವಿಧಾನಸಭಾ ಚುನಾವಣೆಗೆ ರಾಮದಾಸ್ ವಿರುದ್ಧ ಸ್ಪರ್ಧಿಸುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.

ರಾಮದಾಸ್ ಮೇಲೆ ಆರೋಪ ಮಾಡಿದ್ದ ಪ್ರೇಮಕುಮಾರಿ ಚುನಾವಣೆಗೆರಾಮದಾಸ್ ಮೇಲೆ ಆರೋಪ ಮಾಡಿದ್ದ ಪ್ರೇಮಕುಮಾರಿ ಚುನಾವಣೆಗೆ

ಒನ್ ಇಂಡಿಯಾ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಪ್ರೇಮ ಕುಮಾರಿ ಅವರು ಮುಂದಿನ ಆಲೋಚನೆಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ವಿವರಗಳು ಇಲ್ಲಿವೆ...

ಪ್ರೇಮಕುಮಾರಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಸಿಐಡಿಪ್ರೇಮಕುಮಾರಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಸಿಐಡಿ

ramadas

ಯಾವ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವಿರಿ?

ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ. ನನಗೆ ಎಲ್ಲಾ ಪಕ್ಷದ ನಾಯಕರು ಸಹ ಚುನಾವಣೆಗೆ ಸ್ಪರ್ಧಿಸುವ ಕುರಿತಾಗಿ ಸಂಪರ್ಕಿಸಿದ್ದಾರೆ. ಆದರೆ, ಯಾವ ಪಕ್ಷ? ಎಂದು ಸಮಯಾವಕಾಶ ನೋಡಿ ಉತ್ತರ ನೀಡುತ್ತೇನೆ.

ಯಾರ ಒತ್ತಡಕ್ಕೆ ಮಣಿದು ರಾಜಕೀಯಕ್ಕೆ ಬರುತ್ತಿದ್ದೀರಿ?

ಒತ್ತಡ ಯಾರದ್ದು ಇಲ್ಲ. ನನಗಾಗಿರುವ ನೋವಿಗೆ ಹಾಗೂ ನಾನು ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಸಮಾಜಮುಖಿಯಾಗಿ ಗುರುತಿಸಿಕೊಳ್ಳಬೇಕೆಂಬ ಹಂಬಲದಿಂದ ರಾಜಕೀಯಕ್ಕೆ ಬರುತ್ತಿದ್ದೇನೆ.

ರಾಮದಾಸ್ ಅವರೇ ನನ್ನ ಗಂಡ ಎಂದ ಪ್ರೇಮಕುಮಾರಿ!ರಾಮದಾಸ್ ಅವರೇ ನನ್ನ ಗಂಡ ಎಂದ ಪ್ರೇಮಕುಮಾರಿ!

ರಾಮದಾಸ್ ಅವರಿಗೆ ಟಿಕೆಟ್ ವಂಚಿಸಲು ರಾಜೀವ್ ಅವರು ಪ್ಲಾನ್ ಮಾಡುತ್ತಿದ್ದಾರೆ. ಅದಕ್ಕೆ ನೀವು ಟ್ರಂಪ್ ಕಾರ್ಡ್ ಅನ್ನುತ್ತಿದ್ದಾರೆ?

ಖಂಡಿತಾ ಇಲ್ಲ. ರಾಜೀವ್ ಅವರು ನನ್ನನ್ನು ಸಂಪರ್ಕಿಸಿಲ್ಲ. ಈಗಾಗಲೇ ಬಿಜೆಪಿಯವರು ರಾಮದಾಸ್ ಅವರನ್ನು ಸಂಪರ್ಕಿಸಿ ನನ್ನೊಂದಿಗಿನ ಕೇಸುಗಳನ್ನು ಬಗೆಹರಿಸಿಕೊಂಡಲ್ಲಿ ಟಿಕೆಟ್ ನೀಡುವುದಾಗಿ ತಿಳಿಸಿದ್ದಾರೆ. ಅದರ ಜವಾಬ್ದಾರಿ ರಾಮ ದಾಸ್ ಅವರಿಗೆ ಇರಬೇಕು. ಟಿಕೆಟ್ ಬೇಕಾದರೆ ಕಾರ್ಯತಂತ್ರ ರೂಪಿಸಬೇಕು.

ಕೃಷ್ಣರಾಜ ಕ್ಷೇತ್ರದಲ್ಲಿ ಕಣಕ್ಕಿಳಿದರೆ ರಾಮದಾಸ್ ಅವರಿಗೆ ಲಾಸ್ ಆಗುವುದಿಲ್ಲವೇ ?

ಇದು ಡ್ಯಾಮೇಜ್ ಪ್ರಶ್ನೆಯೇ ಅಲ್ಲ. ಸಮಸ್ಯೆ ಅವರಿಂದ ಉದ್ಭವವಾಗಿದೆ. ಎಲ್ಲರಿಗೂ ಅವರದ್ದೇ ಆದ ಸ್ವಾತಂತ್ರ್ಯವಿದೆ. ಚುನಾವಣೆ ಬರುತ್ತಿದೆ ಹಾಗಾಗಿ ಯಾರು ಬೇಕಾದರೂ ಸ್ಪರ್ಧಿಸಬಹುದು. ಹಾಗೆಯೇ ನಾನೂ ಕೂಡ, ಜನರು ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡುವೆ.

ನೀವು ರಾಮದಾಸ್ ಹಿಂದೆ ಬಿದ್ದರು ಹಣಕ್ಕಾಗಿಯೇ ?

ನನಗೆ ಹಣ ಮಾಡಲು ರಾಮದಾಸ್ ಎಂಬ ವ್ಯಕ್ತಿ ಬೇಕಿರಲಿಲ್ಲ. ಅವರಿಗಿಂತ ಹಣವಿರುವವರು ನನಗೆ ಸಿಗುತ್ತಿದ್ದರು. ಅದಕ್ಕಾಗಿ ಈ ಮಾರ್ಗ ಹಿಡಿದು ನಾನು ಹೆಸರಿಗೆ ಮಸಿಬಳಿದುಕೊಳ್ಳಬೇಕಾದ ಅನಿವಾರ್ಯತೆ ಇರಲಿಲ್ಲ.

ಟಿಕೆಟ್‌ಗಾಗಿ ರಾಮದಾಸ್-ರಾಜೀವ್‌ ನಡುವೆ ಜಟಾಪಟಿ ಇದೆ. ನಿಮ್ಮ ಬೆಂಬಲ ಯಾರಿಗೆ?

ಯೋಗ್ಯತೆ, ಸಾರ್ಮಥ್ಯದ ಬಗ್ಗೆ ಮಾತನಾಡುವುದಿಲ್ಲ. ನನಗೆ ರಾಜಕೀಯ ಗುರುಗಳು, ವೆಲ್ ವಿಷರ್ ನನ್ನ ಗಂಡ ರಾಮದಾಸ್ ಅವರು. ಅವರ ವಿರುದ್ಧ ಸ್ಪರ್ಧೆ ಮಾಡಲು ಸಿದ್ಧನಾಗಿದ್ದೇನೆ.

ರಾಮದಾಸ್ ಅವರು ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದರೆ ನಿಮ್ಮ ನಡೆ ಏನು?

ಕುಟುಂಬವೇ ಬೇರೆ, ರಾಜಕೀಯವೇ ಬೇರೆ. ನನ್ನನ್ನು ರಾಜಕೀಯಕ್ಕೆ ಕರೆತಂದಿದ್ದು ರಾಮದಾಸ್ ಅವರೇ. ನಾನು ಬಿಜೆಪಿಯಲ್ಲಿ ಕೆಲಸ ಮಾಡಬೇಕು ಎಂಬ ಹಂಬಲವಿತ್ತು. ಎಂಪಿ ಸೀಟು ಕೊಡಿಸಿ ಎಂದೂ ಕೇಳಿದ್ದೆ. ಅವರು ಮುಂದೆ ನಿರ್ಧಾರ ಮಾಡುತ್ತೇನೆ ಎಂದಿದ್ದರು. ನಾನು ಇದ್ದದ್ದು ಸಾರ್ವಜನಿಕ ಕ್ಷೇತ್ರದಲ್ಲಿ ಅವರಿಂದ ನನಗೆ ಅನ್ಯಾಯವಾಗಿದೆ. ನನಗಿದು ಅನಿವಾರ್ಯ. ಯಾರಿಗೂ ಜಗ್ಗುವುದಿಲ್ಲ.

English summary
Interview of Prema Kumari : Prema Kumari announced that she will contest for Karnataka assembly elections 2018. In 2014 Prema Kumari in news and she claimed that, former Minister, BJP leader S.A. Ramdas cheated her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X