ಕನ್ನಡದ ಹಿರಿಯ ನಟ ಚೇತನ್ ರಾಮರಾವ್ ಇನ್ನಿಲ್ಲ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಡಿಸೆಂಬರ್. 24 : ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟ ಚೇತನ್ ರಾಮರಾವ್ ವಿಧಿವಶರಾಗಿದ್ದಾರೆ. 76 ವರ್ಷದ ಚೇತನ್ ರಾಮರಾವ್ ಅವರು ಶುಕ್ರವಾರ ರಾತ್ರಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೃತರು ಪತ್ನಿ, ಮೂವರು ಪುತ್ರಿಯರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ವಯೋಸಹಜ ಸಮಸ್ಯೆಗಳು ಅವರನ್ನು ಹಾಸಿಗೆ ಹಿಡಿಯುವಂತೆ ಮಾಡಿತ್ತು. ಮಂಡಿ, ಸೊಂಟ ಮತ್ತು ಪಕ್ಕೆನೋವಿನಿಂದ ರಾಮರಾವ್ ಬಳಲುತ್ತಿದ್ದರು.

ಟಿ.ಕೆ ಲೇಔಟ್ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು. ಚಾಮುಂಡಿ ಬೆಟ್ಟ ತಪ್ಪಲಿನ ರುಧ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

Kannada senior Actor Chetan Rama Rao Passes away

ವರನಟ ಡಾ. ರಾಜ್ ಕುಮಾರ್, ವಿಷ್ಣುವರ್ಧನ್ ಸೇರಿ ಸ್ಯಾಂಡಲ್​ವುಡ್​ನ ಅನೇಕ ದಿಗ್ಗಜ ನಟರ ಜತೆ ಅಭಿನಯಿಸಿದ್ದಾರೆ. 1968ರಲ್ಲಿ ಡಾ. ರಾಜಕುಮಾರ್ ಅವರ ಜತೆ 'ಮಾರ್ಗದರ್ಶಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ಆಪರೇಷನ್ ಡೈಮಂಡ್ ರಾಕೆಟ್, ಬಾಳು ಬೆಳಗಿತು, ಹುಲಿಯ ಹಾಲಿನ ಮೇವು, ಲಗ್ನಪ್ರತಿಕೆ, ರಾಜ ನನ್ನ ರಾಜ ಸೇರಿದಂತೆ ಸುಮಾರು 350 ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿಕಲಾದ್ರೋಣ, ಕಲಾಭೀಷ್ಮ,ನಟಚತುರ, ಕಲಾರತ್ನ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದರು.

ಸುಮಾರು 350 ಚಿತ್ರಗಳಲ್ಲಿ ನಟಿಸಿರುವ ಚೇತನ್ ಅಗಲಿಕೆಗೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada films veteran artist Chetan Rama Rao (76) passed away on December 23 night at the Mysuru private hospital, he had suffered arthritis last two years.
Please Wait while comments are loading...