ಕಾಲು ಕಳೆದುಕೊಂಡ ಅಭಿಮಾನಿಯ ಮನೆಗೆ ಶಿವ ರಾಜಕುಮಾರ್ ಭೇಟಿ

Posted By:
Subscribe to Oneindia Kannada

ಮೈಸೂರು, ಜನವರಿ 13 : ಕಳೆದ ವರ್ಷದ ಅಕ್ಟೋಬರ್ 24ರಂದು ಬಸ್‌ನಿಂದ ಆಕಸ್ಮಿಕವಾಗಿ ಬಿದ್ದು ಕಾಲು ಕಳೆದುಕೊಂಡಿದ್ದ ಅಭಿಮಾನಿಯನ್ನು ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ ಭೇಟಿ ಮಾಡಿ, ಉಭಯ ಕುಶಲೋಪರಿ ವಿಚಾರಿಸಿದರು.

ನನಗೂ ರಾಜಕೀಯಕ್ಕೂ ಆಗಿ ಬರುವುದಿಲ್ಲː ಸೆಂಚುರಿ ಸ್ಟಾರ್ ಶಿವಣ್ಣ

ಮೈಸೂರಿನ ಸರಸ್ವತಿಪುರಂನಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ನೆಚ್ಚಿನ ಅಭಿಮಾನಿ ಉಲ್ಲೇಖ್ ಪುಟ್ಟಸ್ವಾಮಿಯನ್ನು ಭೇಟಿಯಾದರು. ಬಸ್‌ ನಿರ್ವಾಹಕನ ನಿರ್ಲಕ್ಷ್ಯದಿಂದಾಗಿ ಯುವಕ ಉಲ್ಲೇಖ್ ಬಸ್‌ ನಿಂದ ಬಿದ್ದು ಕಾಲು ಕಳೆದುಕೊಂಡಿದ್ದರು. ಉಲ್ಲೇಖ್ ಆಸ್ಪತ್ರೆಯಲ್ಲಿದ್ದಾಗಲೇ ನೆಚ್ಚಿನ ನಟ ಶಿವರಾಜ್ ಕುಮಾರ್‌ ರನ್ನು ನೋಡಬೇಕು ಎಂದಿದ್ದರು.

Kannada film actor Shiva Rajakumar meets his fan who lost his leg in an accident

ಹೀಗಾಗಿ, ಶಿವಣ್ಣ ಗಾಯಾಳು ಉಲ್ಲೇಖ್ ನನ್ನು ಭೇಟಿ ಮಾಡಿ, ಧೈರ್ಯ ತುಂಬಿದರು. ಜೀವನದಲ್ಲಿ ಒಮ್ಮೆ ಅನಿರೀಕ್ಷಿತ ಕ್ಷಣ ಬರುತ್ತದೆ. ಆದರೆ ಧೈರ್ಯವಾಗಿ ಮುನ್ನುಗ್ಗಬೇಕು ಎಂದು ಶಿವಣ್ಣ ತಮ್ಮ ಅಭಿಮಾನಿಗೆ ಸಲಹೆ ನೀಡಿದರು. ನೆಚ್ಚಿನ ನಟ ಶಿವರಾಜ್ ಕುಮಾರ್ ಅವರನ್ನು ಕಂಡು ಉಲ್ಲೇಖ್ ಸಂತಸ ವ್ಯಕ್ತಪಡಿಸಿದರು.

Kannada film actor Shiva Rajakumar meets his fan who lost his leg in an accident

ತಮ್ಮ ಅಭಿಮಾನಿಯ ಆಸೆಯನ್ನು ಈಡೇರಿಸುವ ಹಾಗೂ ಧೈರ್ಯ ತುಂಬುವ ಮೂಲಕ ಶಿವ ರಾಜಕುಮಾರ್ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada film actor Shiva Rajakumar meets his fan in Mysuru. Ullekh Puttaswami fan of Shiva Rajakumar, who lost his leg in an accident, wish to meet Shiva Rajakumar. Actor fulfill his fan wish.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ