ನಾಪತ್ತೆಯಾಗಿದ್ದ ಶಿವರಾಜ ತಂಗಡಗಿ ಸಹೋದರ ಚಾಮುಂಡಿ ಬೆಟ್ಟದಲ್ಲಿ ಪತ್ತೆ

Posted By:
Subscribe to Oneindia Kannada

ಮೈಸೂರು, ಜುಲೈ 31: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕನಕಗಿರಿ ಶಾಸಕ ಶಿವರಾಜ ತಂಗಡಗಿ ಸಹೋದರ ನಾಗರಾಜ ತಂಗಡಗಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪತ್ತೆಯಾಗಿದ್ದಾರೆ.

ಕನಕಗಿರಿ ಶಾಸಕ ಶಿವರಾಜ ತಂಗಡಗಿ ಸಹೋದರ ನಾಪತ್ತೆ.!

ನಾಗರಾಜ್ ತಂಗಡಗಿ ಜುಲೈ 24 ರಂದು ನಾಪತ್ತೆಯಾಗಿದ್ದರು. ಈ ಕುರಿತು ಜುಲೈ 26 ರಂದು ಶಿವರಾಜ್ ತಂಗಡಗಿ ಮತ್ತೊಬ್ಬ ಸಹೋದರ ರವಿ ತಂಗಡಗಿ ಕಾರಟಗಿ ಪೊಲೀಸ್ ಠಾಣೆಯಲ್ಲಿ ನಾಗರಾಜ ತಂಗಡಗಿ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು. ಇದೀಗ ಜುಲೈ 29ರಂದು ರಾತ್ರಿ ನಾಗರಾಜ ತಂಗಡಗಿ
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮೆಟ್ಟಿಲು ಇಳಿಯುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

Kanakigiri MLA Shivaraj Tangadagi’s brother found in Mysuru Chamundi hill
Mysuru Jail :4 Prisoners Shifted From Bengaluru Parappa Jail | Oneindia Kannada

ಸಿಪಿಐ ದೀಪಕ್ ಬೂಸರೆಡ್ಡಿ ನೇತೃತ್ವದ ಪೊಲೀಸ್ ತಂಡದ ಕೈಗೆ ನಾಗರಾಜ ತಂಗಡಗಿ ಪತ್ತೆಯಾಗಿದ್ದಾರೆ. ನಾಪತ್ತೆಯಾಗಿದ್ದಕ್ಕೆ ಕಾರಣ ತಿಳಿದು ಬಂದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Kanakigiri MLA and former minister Shivaraj Tangadagi’s second brother Nagaraj Tangadagi found in Chamundi hills, Mysuru district, who disappeared on July 24th.
Please Wait while comments are loading...