ಕಬಿನಿಯಲ್ಲಿ ಮುಳುಗಿದ ದೇಗುಲಗಳ ಬಗ್ಗೆ ಗೊತ್ತಾ?

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಎಲ್ಲರಿಗೂ ಪರಿಚಿತ. ಅಷ್ಟೇ ಅಲ್ಲ ರೈತರ ಜೀವನಾಡಿಯೂ ಹೌದು.

ಕೇರಳದ ವೈನಾಡಿನಲ್ಲಿ ಮಳೆ ಸುರಿದರೆ ಈ ಜಲಾಶಯ ತುಂಬಿ ಬಿಡುತ್ತದೆ. ಸಾಮಾನ್ಯವಾಗಿ ಪ್ರತಿವರ್ಷವೂ ಈ ಜಲಾಶಯ ಬಹುಬೇಗ ತುಂಬಿ ಬಿಡುತ್ತದೆ. ಆದರೆ ಪ್ರಸಕ್ತ ವರ್ಷ ಇನ್ನೂ ಭರ್ತಿಯಾಗಿಲ್ಲ. [ಕಬಿನಿ ಡ್ಯಾಂ ಬಳಿ 50 ಎಕರೆಯಲ್ಲಿ ಉದ್ಯಾನವನ]

ಕಬಿನಿ ಜಲಾಶಯ ಭರ್ತಿಯಾಗಿ ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ಹರಿಯುವ ನೀರನ್ನು ನೋಡಲು ಪ್ರವಾಸಿಗರು ಮುಗಿ ಬೀಳುತ್ತಾರೆ. ಇನ್ನು ಹಿನ್ನೀರು ಪ್ರದೇಶವೂ ದಟ್ಟ ಅರಣ್ಯಗಳನ್ನು ಹೊಂದಿರುವುದರಿಂದ ಪ್ರಾಕೃತಿಕ ಸೌಂದರ್ಯವನ್ನೂ ಉಣಬಡಿಸುತ್ತದೆ.

ಹಲವು ಹಳ್ಳಿ, ದೇವಾಲಯಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟಿರುವ ವಿಚಾರ ಬಹಳಷ್ಟು ಜನಕ್ಕೆ ಗೊತ್ತೇ ಇಲ್ಲ. ಎಲ್ಲ ಜಲಾಶಯಗಳು ನಿರ್ಮಾಣವಾದಾಗಲೂ ಹತ್ತಾರು, ಹಳ್ಳಿ, ದೇಗುಲಗಳು ಮುಳುಗಿವೆ. ಅವು ಕೆಲವೊಮ್ಮೆ ನೀರು ತೀರಾ ಖಾಲಿಯಾದಾಗ ಗೋಚರಿಸುತ್ತದೆ. [ಜುಲೈ 25ರಿಂದ ಕಬಿನಿ ನಾಲೆಗಳಿಗೆ ನೀರು ಬಿಡಲು ನಿರ್ಧಾರ]

ಹಾಗೆಯೇ ಕಬಿನಿ ಜಲಾಶಯದಲ್ಲೂ ಹಳ್ಳಿ, ದೇಗುಲಗಳು ಮುಳುಗಿವೆ. ವರುಣ ಅಭಯ ತೋರಿದಾಗ ಅವು ಗೋಚರಿಸುವುದಿಲ್ಲ. ಆತ ಮುನಿಸಿಕೊಂಡಾಗ ಮಾತ್ರ ಕಬಿನಿ ಒಡಲಿನ ಮತ್ತೊಂದು ಮುಖ ಕಾಣಸಿಗುತ್ತದೆ.

ಕಬಿನಿ ಜಲಾಶಯದಲ್ಲೂ ಹಳ್ಳಿ, ದೇಗುಲಗಳು ಮುಳುಗಿವೆ

ಕಬಿನಿ ಜಲಾಶಯದಲ್ಲೂ ಹಳ್ಳಿ, ದೇಗುಲಗಳು ಮುಳುಗಿವೆ

ಕಬಿನಿ ಜಲಾಶಯದಲ್ಲೂ ಹಳ್ಳಿ, ದೇಗುಲಗಳು ಮುಳುಗಿವೆ. ವರುಣ ಅಭಯ ತೋರಿದಾಗ ಅವು ಗೋಚರಿಸುವುದಿಲ್ಲ. ಆತ ಮುನಿಸಿಕೊಂಡಾಗ ಮಾತ್ರ ಕಬಿನಿ ಒಡಲಿನ ಮತ್ತೊಂದು ಮುಖ ಕಾಣಸಿಗುತ್ತದೆ.

ಮಾಂಕಾಳಮ್ಮ ದೇವಿ ದರ್ಶನ

ಮಾಂಕಾಳಮ್ಮ ದೇವಿ ದರ್ಶನ

ಈ ದೇವಾಲಯಗಳ ಬಗ್ಗೆ ತಿಳಿಯುತ್ತಾ ಹೋದಾಗ ಒಂದಷ್ಟು ಮಾಹಿತಿ ಲಭ್ಯವಾಗಿತ್ತು. ಮಾಂಕಾಳಮ್ಮ ದೇವಿಯು ವೈಷ್ಣವ ದೇವತೆಯಾಗಿದ್ದು, ಕೇರಳದಿಂದ ಬಂದು ಕಿತ್ತೂರಿನಲ್ಲಿ ನೆಲೆಸಿದಳು.

ಸಪ್ತಮಾತ್ರಿಕೆಯರಾದ ಅಕ್ಕ ತಂಗಿಯರ ದೇವಾಲಯ

ಸಪ್ತಮಾತ್ರಿಕೆಯರಾದ ಅಕ್ಕ ತಂಗಿಯರ ದೇವಾಲಯ

ಇದು ಸಪ್ತಮಾತ್ರಿಕೆಯರಾದ ಅಕ್ಕ ತಂಗಿಯರ ದೇವಾಲಯ. ಈ ದೇವಾಲಯದಲ್ಲಿ ಗಣಪತಿ, ಭೈರವ ದೇವರಿದ್ದು ಈ ದೇವಾಲಯದ ಏಳು ಗದ್ದುಗೆಗಳನ್ನು ಏಳು ಹೆಡೆಯ ಸರ್ಪಾಕೃತಿಯಲ್ಲಿ ನಿರ್ಮಿಸಲಾಗಿತ್ತು.

ಪರಿವಾರ ನಾಯಕರ ಆರಾಧ್ಯ ದೇವತೆ

ಪರಿವಾರ ನಾಯಕರ ಆರಾಧ್ಯ ದೇವತೆ

ಈ ದೇವಿ ಪರಿವಾರ ನಾಯಕರ ಆರಾಧ್ಯ ದೇವತೆ. ಈ ದೇವಾಲಯ ಪುನರ್ ನಿರ್ಮಾಣ ಅಣೆಕಟ್ಟೆಯ ಹತ್ತಿರದಲ್ಲಿರುವ ಬಸಾಪುರದಲ್ಲಿ ಮಾಡಲಾಗಿದೆ.

ವಾನಿ ಶಂಕರ ದೇವಾಲಯ

ವಾನಿ ಶಂಕರ ದೇವಾಲಯ

ಇನ್ನು ಮಾಂಕಾಳಮ್ಮ ದೇವಸ್ಥಾನದಿಂದ ಸ್ವಲ್ಪ ಮುಂದೆ ಸಾಗಿದರೆ ಅಲ್ಲಿರುವುದೇ ಭವಾನಿ ಶಂಕರ ದೇವಾಲಯ.ದೇವಾಲಯ ಇರುವ ಸ್ಥಳ ಮೊದಲು ಕೀರ್ತಿಪುರ ಎಂದು ಹೆಸರುವಾಸಿಯಾಗಿತ್ತು.

ರಾಜರ ಆಳ್ವಿಕೆಯಲ್ಲಿ ದೇವಾಲಯ ನಿರ್ಮಿಸಲಾಯಿತು

ರಾಜರ ಆಳ್ವಿಕೆಯಲ್ಲಿ ದೇವಾಲಯ ನಿರ್ಮಿಸಲಾಯಿತು

ನಂತರ ರಾಜರ ಆಳ್ವಿಕೆಯಲ್ಲಿ ದೇವಾಲಯ ನಿರ್ಮಿಸಲಾಯಿತು. ಈ ದೇವಾಲಯದಲ್ಲಿ ಈಶ್ವರಲಿಂಗ, ಬಸವ, ಶೃಂಗಿ ನಾಗದೇವತೆಗಳ ಪಳೆಯುಳಿಕೆ ಕಾಣಿಸಿತ್ತು.

ದೇವಸ್ಥಾನವನ್ನು ಅಣೆಕಟ್ಟೆಯಿಂದ ತೆರವುಗೊಳಿಸಿಲ್ಲ?

ದೇವಸ್ಥಾನವನ್ನು ಅಣೆಕಟ್ಟೆಯಿಂದ ತೆರವುಗೊಳಿಸಿಲ್ಲ?

ಈ ದೇವಸ್ಥಾನದಲ್ಲಿರುವ ಮೂರ್ತಿಗಳು ಭಿನ್ನವಾಗಿರುವುದರಿಂದ ಪೂಜೆಗೆ ಅರ್ಹವಲ್ಲ. ಆದ್ದರಿಂದ ಈ ದೇವಸ್ಥಾನವನ್ನು ಅಣೆಕಟ್ಟೆಯಿಂದ ತೆರವುಗೊಳಿಸಿಲ್ಲವಂತೆ.

ಕಿತ್ತೂರು ಗ್ರಾಮಕ್ಕೆ ತನ್ನದೇ ಆದ ಇತಿಹಾಸವಿದೆ

ಕಿತ್ತೂರು ಗ್ರಾಮಕ್ಕೆ ತನ್ನದೇ ಆದ ಇತಿಹಾಸವಿದೆ

ಕಿತ್ತೂರಿಗೆ ತನ್ನದೇ ಆದ ಇತಿಹಾಸವಿದ್ದು, ವೈಭವದಿಂದ ಕೂಡಿದ ಸಂಪದ್ಭರಿತ ಗ್ರಾಮ ಇದಾಗಿತ್ತು. ಇಲ್ಲಿನ ಸಾಮಂತರು ಹತ್ತೂರು ಕೊಟ್ಟರೂ ಕಿತ್ತೂರು ಕೊಡುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಶ್ರೀಮಂತ ಗ್ರಾಮವಾಗಿತ್ತು.

ಯದುವಂಶಸ್ಥರ ಆಳ್ವಿಕೆಗೆ ಒಳಪಟ್ಟಿತ್ತಂತೆ

ಯದುವಂಶಸ್ಥರ ಆಳ್ವಿಕೆಗೆ ಒಳಪಟ್ಟಿತ್ತಂತೆ

ಕಿತ್ತೂರು ಮೈಸೂರಿನ ಯದುವಂಶಸ್ಥರ ಆಳ್ವಿಕೆಗೆ ಒಳಪಟ್ಟಿತ್ತಂತೆ. ಈಗ ಅದೆಲ್ಲವೂ ಇತಿಹಾಸ. ಕಬಿನಿ ಆಳಕ್ಕೆ ಹೋದರೆ ಇಂತಹ ಇನ್ನೆಷ್ಟು ಕತೆಗಳು ಸಿಗುತ್ತವೆಯೋ..

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The two temples that are located in Beechanahalli in H D Kote, Mysuru near here which were submerged in the backwaters of Kabana dam. Mankalamma and Bhavanishankar temple having historical significance.
Please Wait while comments are loading...