ತಮಿಳುನಾಡಿಗೆ ಹರಿಯುತ್ತಿದೆ ಕಬಿನಿ ನೀರು, ಕ್ರಮ ಯಾವಾಗ?

By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಜನವರಿ 7: ಸಿಎಂ ತವರು ಜಿಲ್ಲೆಯ ಕಬಿನಿ ಜಲಾಶಯದಲ್ಲಿ ನೀರು ನಿಲ್ಲುತ್ತಿಲ್ಲ ಎಂದು ಜನರು ಶಾಪ ಹಾಕುತ್ತಿದ್ದಾರೆ. ಕಬಿನಿ ಜಲಾಸಯದ ನೀರು ಎಲ್ಲಿಗೆ ಹೊಗುತ್ತಿದೆ ಎಂದರೆ ತಮಿಳುನಾಡಿಗೆ ಅಧಿಕಾರಿಗಳ ಆಟಕ್ಕೆ ನಿತ್ಯವೂ ನೂರು ಕ್ಯೂಸೆಕ್ಸ್ ನೀರು ತಮಿಳರ ಪಾಲಾಗುತ್ತಿದೆ.

ಹೌದು, ಅಧಿಕಾರಿಗಳ ಬೇಜವಬ್ದಾರಿತನವೋ.? ಅಥವಾ ಕಣ್ಣಾಮುಚ್ಚಾಲೆ‌ ಆಟವೋ ಗೊತ್ತಿಲ್ಲ.? ಆದರೆ ನಿತ್ಯವೂ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯ ಕಬಿನಿ ಡ್ಯಾಂನ ಎಡದಂಡೆ ಮೂಲಕ ತಮಿಳುನಾಡಿಗೆ 100 ಕ್ಯೂಸೆಕ್ಸ್ ನೀರು ಹರಿದು ಹೋಗುತ್ತಿದೆ. ಆದರೆ ಇದು ಅಧಿಕಾರಿಗಳ ಗಮನಕ್ಕೆ ಬಂದಿಲ್ಲವಂತೆ. ಏಕೆಂದರೆ ಡ್ಯಾಂನಿಂದ ನೀರು ಬಿಡುತ್ತಿರುವ ಮಹಾನುಭಾವರು ಇವರೇ ಅಲ್ಲವೇ..!

kabini

ಒಂದೂವರೆ ತಿಂಗಳಿಂದ ಹರಿಯುತ್ತಿದೆಯಂತೆ ಡ್ಯಾಂನ ನೀರು?
ಸತತ ಒಂದೂವರೆ ತಿಂಗಳಿಂದಲೂ ಹೀಗೆ ನೀರು ಹರಿಯುತ್ತಲೇ ಇದೆ ಎಂಬ ಮಾಹಿತಿ ರೈತರಿಂದ ಲಭ್ಯವಾಗಿದೆ. ಇದರಿಂದ ಕೋಪಗೊಂಡ ರೈತರು ಕೂಡ ನೀರಾವರಿ ಇಲಾಖೆ ಅಧಿಕಾರಿಗಳ ಮೇಲೆ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಪ್ರಕರಣವನ್ನೇ ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಜನರ ಆರೋಪ.

kabini

ಪೊಲೀಸ್ ಠಾಣೆ ಇರೋದೆ ನೀರಾವರಿ ಇಲಾಖೆ‌ ಕಟ್ಟಡದಲ್ಲಿ...!!
ವಿಪರ್ಯಾಸವೆಂದರೆ ಬೀಚನಹಳ್ಳಿ ಪೊಲೀಸ್ ಠಾಣೆಗೆ ಸ್ವಂತ ಕಟ್ಟಡವೇ ಇಲ್ಲ. ಈ ಕಾರಣದಿಂದ ಪೊಲೀಸ್ ಠಾಣೆ ನೀರಾವರಿ ಇಲಾಖೆಯ ಕಟ್ಟಡವನ್ನ ಆಶ್ರಯಿಸಿದೆ. ಇದರಿಂದ ಕಬಿನಿ ಡ್ಯಾಂ ಅಧಿಕಾರಿಗಳ ವಿರುದ್ಧವಾದ ಪ್ರಕರಣಗಳನ್ನ ಕೈಗೆತ್ತಿಕೊಂಡರೆ ಠಾಣೆಗೆ ತೊಂದರೆಯಾಗಲಿದೆ. ಎಂಬ ಭಾವನೆಯಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

kabini

ಮೇಲಿನ ಅಧಿಕಾರಿಗಳು ಕ್ರಮ ಕೈಗೊಳ್ತಾರಾ..?
ರೈತರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಅಧಿಕಾರಿಗಳ ಕಣ್ಣಾಮುಚ್ಚಾಲೆ ಇದೀಗ ಬಯಲಿಗೆ ಬಂದಿದೆ. ಪೊಲೀಸರು ಈ ಬಗ್ಗೆ ಅದ್ಯಾವಾ ರೀತಿಯ ಕ್ರಮ ಕೈಗೊಳ್ಳುತ್ತಾರೆ ನೋಡಬೇಕಿದೆ. ಜೊತೆಯಲ್ಲಿ ಕಬಿನಿ ಜಲಾಶಯದ ಬಗ್ಗೆ ಅಧಿಕಾರಿಗಳು ಏಕೆ ಇಷ್ಟೊಂದು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ರೈತರ ಮಾತುಗಳಿಗೆ ಉತ್ತರ ಕೊಡಬೇಕಿದೆ.

ನೀರಾವರಿ ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟಕ್ಕೆ ಬ್ರೇಕ್ ಬೀಳದಿದ್ರೆ ಮುಂದಿನ ದಿನಗಳಲ್ಲಿ ಎಲ್ಲರೂ ನೀರಿಗಾಗಿ ಹಾಹಾಕಾರಪಡೋದಂತೂ ಸುಳ್ಳಲ್ಲ ಅಂತಾರೆ ಸ್ಥಳೀಯ ಜನತೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kabini dam, where the water is flowing. Kabini water is flowing to Tamil Nadu qustion the farmars in mysuru.
Please Wait while comments are loading...