ಮೈಸೂರಿನಲ್ಲಿ ಡಿಸೆಂಬರ್ 31ರಂದು ಉದ್ಯೋಗ ಮೇಳ

Posted By:
Subscribe to Oneindia Kannada

ಮೈಸೂರು, ಡಿಸೆಂಬರ್ 28 : ಮೈಸೂರು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮತ್ತು GVK EMRI ಅವರ ಸಹಯೋಗದಲ್ಲಿ ಮೈಸೂರಿನಲ್ಲಿ ಡಿಸೆಂಬರ್ 31ರಂದು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. 108 ಅಂಬ್ಯಲೆನ್ಸ್‌ಗೆ ಡ್ರೈವರ್ ಮತ್ತು ಸ್ಟಾಫ್‌ ನರ್ಸ್ ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಡಿಸೆಂಬರ್ 31 ರ ಗುರುವಾರ ಬೆಳಗ್ಗೆ 10 ಗಂಟೆಗೆ ಬಿ.ಎಂ.ಆಸ್ಪತ್ರೆ ಮುಂಭಾಗದಲ್ಲಿರುವ ಜಿಲ್ಲಾ ಉದ್ಯೋಗ ಮತ್ತು ವಿನಿಮಯ ಕಚೇರಿ ಆವರಣದಲ್ಲಿ ಉದ್ಯೋಗ ಮೇಳ ನಡೆಯಲಿದೆ. ಸ್ಟಾಫ್ ನರ್ಸ್‌ ಹುದ್ದೆಯ ಸಂದರ್ಶನಕ್ಕೆ ಬರುವವರು ಎ.ಎನ್.ಎಂ ಅಥವಾ ಜಿ.ಎನ್.ಎಂ ತರಬೇತಿ ಪಡೆದು ತೇರ್ಗಡೆಯಾಗಿರಬೇಕು. ವಯೋಮಿತಿ 18 ರಿಂದ 28 ವರ್ಷ. [ಕೆನರಾ ಬ್ಯಾಂಕಿನಲ್ಲಿ 7 ಹುದ್ದೆಗಳಿವೆ, ಅರ್ಜಿ ಹಾಕಿ]

jobs

ಡ್ರೈವರ್ ಹುದ್ದೆಯ ಸಂದರ್ಶನಕ್ಕೆ ಬರುವವರು ಎಸ್‍ಎಸ್‍ಎಲ್‍ಸಿ ತೇರ್ಗಡೆಯಾಗಿರಬೇಕು. ಭಾರಿ ವಾಹನಾ ಚಾಲನಾ ಪರವಾನಗಿ ಪಡೆದು 5 ವರ್ಷಗಳಾಗಿರಬೇಕು, ವಯೋಮಿತಿ 25 ರಿಂದ 35 ವರ್ಷ. ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಉದ್ಯೋಗ ಮೇಳದಲ್ಲಿ ಭಾಗವಹಿಸಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2489972. [ಕಾರ್ಮಿಕರ ರಾಜ್ಯ ವಿಮಾ ನಿಗಮದಲ್ಲಿ ಕೆಲಸ ಖಾಲಿ ಇದೆ]

ಬೀದರ್‌ನಲ್ಲಿ ಸೇನಾ ನೇಮಕಾತಿ : ಬೆಳಗಾವಿಯ ಸೇನಾ ನೇಮಕಾತಿ ವಲಯದಿಂದ ಭಾರತೀಯ ಸೇನೆಯ ವಿವಿಧ ಹುದ್ದೆಗಳ ಭರ್ತಿಗಾಗಿ ಜನವರಿ 5 ರಿಂದ ಬೀದರ್‌ನ ನೆಹರೂ ಕ್ರೀಡಾಂಗಣದಲ್ಲಿ ನೇಮಕಾತಿ ನಡೆಯಲಿದೆ. ಸಿಪಾಯಿ ಕ್ಲಾರ್ಕ್, ಸಿಪಾಯಿ ಎಸ್‍ಕೆಟಿ, ಸಿಪಾಯಿ ಜನರಲ್ ಡ್ಯೂಟಿ, ಸಿಪಾಯಿ ಟೆಕ್ನಿಕಲ್, ಸಿಪಾಯಿ ಟ್ರೇಡ್ಸ್‍ಮನ್ ಹಾಗೂ ಸಿಪಾಯಿ ನರ್ಸಿಂಗ್ ಸಹಾಯಕರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಈ ನೇಮಕಾತಿಗೆ ಕಳೆದ ನವೆಂಬರ್ 07 ರಿಂದ ಡಿಸೆಂಬರ್ 22 ರವರೆಗೆ ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮಾತ್ರ ಪಾಲ್ಗೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ 08354-235434 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru employment exchange office organized job fair in Mysuru city on December 31, 2015.
Please Wait while comments are loading...