ಮೈಸೂರು: ಜೀಪ್- ಬಸ್ ಭೀಕರ ಅಪಘಾತ; ಕರ್ತವ್ಯದಲ್ಲಿದ್ದ ಪೊಲೀಸರಿಬ್ಬರ ಸಾವು

Subscribe to Oneindia Kannada

ಮೈಸೂರು, ಜನವರಿ 29: ಜಿಲ್ಲಾ ಕ್ರೈಂ ಬ್ರಾಂಚ್ ವಿಭಾಗದ ಇಬ್ಬರು ಪೊಲೀಸರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇಲ್ಲಿನ ಟಿ.ನರಸೀಪುರ- ಮೈಸೂರು ಹೆದ್ದಾರಿಯ ಚಿಕ್ಕಳ್ಳಿ ಎಂಬಲ್ಲಿ ಶನಿವಾರ (ಜನವರಿ 28) ಪೊಲೀಸ್ ಜೀಪ್ ಮತ್ತು ವೇಗದಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ, ಈ ದುರಂತ ನಡೆದಿದೆ.[ಮೈಸೂರು ಮೃಗಾಲಯ ನಿರ್ದೇಶಕಿ ವಿರುದ್ಧ ಪ್ರತಿಭಟನೆ]

 Jeep-KSRTC bus collision, Two cops on duty killed

ಜೀಪ್ ಚಾಲಕ ಲಕ್ಷ್ಮಣ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ಸ್ ಸ್ಪೆಕ್ಟರ್ ಮಹೇಶ್ ಕುಮಾರ್ ರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯ ಸಾವನ್ನಪ್ಪಿದ್ದಾರೆ. ಇಬ್ಬರಿಗೂ ತಲೆ ಸೇರಿದಂತೆ ಹಲವು ಕಡೆಗಳಿಗೆ ಗಾಯವಾಗಿತ್ತು. ಪೊಲೀಸರಿಬ್ಬರು ಸುತ್ತೂರು ಜಾತ್ರೆಗೆ ತೆರಳುತ್ತಿದ್ದರು ಎನ್ನಲಾಗಿದ್ದು, ಕೆಆರ್ ಪೇಟೆಯಿಂದ ಪಾಂಡವಪುರಕ್ಕೆ ಹೋಗುವ ಬಸ್ ಎದುರಿನಿಂದ ಬಂದು ಗುದ್ದಿದೆ. ಗುದ್ದಿದ ರಭಸಕ್ಕೆ ಜೀಪಿನ ಮುಂಭಾಗ ನಜ್ಜು ಗುಜ್ಜಾಗಿದೆ.[ಮೈಸೂರಲ್ಲಿ ಶೂಟ್ ಮಾಡ್ತೀವಿ ಅಂದೋರಿಗೆ ಬಿತ್ತು ಧರ್ಮದೇಟು]

ಸ್ಥಳಕ್ಕೆ ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ಹರೀಶ್ ಕುಮಾರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a collision between police jeep and a KSRTC bus near Chikkahalli on Mysuru -T Narasipur road, Two district crime branch policemen were killed in the spot.
Please Wait while comments are loading...