ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮೇಯರ್ ಚುನಾವಣೆ: ಆಪರೇಷನ್ ಕಮಲದ ಭೀತಿ!

|
Google Oneindia Kannada News

ಮೈಸೂರು, ನವೆಂಬರ್. 16: ತೀವ್ರ ಕುತೂಹಲ ಕೆರಳಿಸಿರುವ ಮೈಸೂರು ಮಹಾನಗರ ಪಾಲಿಕೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಮಹಾಪೌರರ ಸ್ಥಾನ ಮೈತ್ರಿ ಪಕ್ಷದಲ್ಲಿ ಯಾವ ಪಕ್ಷಕ್ಕೆ ಎಂಬುದು ಇನ್ನೂ ನಿಗೂಢವಾಗಿದ್ದು, ಎಲ್ಲರ ದೃಷ್ಟಿ ರಾಜಧಾನಿ ಬೆಂಗಳೂರಿನತ್ತ ನೆಟ್ಟಿದೆ.

ಉನ್ನತ ಮೂಲಗಳ ಪ್ರಕಾರ ಜಾ.ದಳಕ್ಕೆ ಮಹಾ ಪೌರರ ಸ್ಥಾನ ದೊರೆಯಲಿದೆ. ಆದರೆ ಕಾಂಗ್ರೆಸ್ ಕೂಡ ಪಟ್ಟು ಹಿಡಿದಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಿರ್ಧಾರವೇ ಅಂತಿಮ ಎನ್ನಲಾಗಿದೆ.

ಈ ಮಧ್ಯೆ ಬೆಂಗಳೂರಿನಲ್ಲಿ ಮಹಾಪೌರರ ಸ್ಥಾನವನ್ನು ಕಳೆದ 5 ವರ್ಷದಿಂದ ಕಾಂಗ್ರೆಸ್ ಗೆ ಬಿಟ್ಟುಕೊಟ್ಟಿರುವ ಹಿನ್ನೆಲೆಯಲ್ಲಿ ಜಾ.ದಳ ಮೈಸೂರು ಮಹಾಪೌರ ಸ್ಥಾನವನ್ನು ಪಡೆಯುವುದು ನಿಶ್ಚಿತ ಎಂದು ಹೇಳಲಾಗಿದೆ.

ಜಾ.ದಳ ಮಹಾಪೌರರ ಸ್ಥಾನ ಪಡೆದು, ಮೈತ್ರಿ ಪಕ್ಷ ಕಾಂಗ್ರೆಸ್ ಗೆ ಉಪಮಹಾಪೌರ ಸ್ಥಾನ ಹಾಗೂ ಎರಡು ಸ್ಥಾಯಿ ಸಮಿತಿ, ಮುಡಾ ಸದಸ್ಯ ಸ್ಥಾನ ನೀಡುವ ಬಗ್ಗೆ ಒಪ್ಪಂದವಾಗಿದೆ ಎಂದು ತಿಳಿಸಿವೆ.

ಮೈಸೂರು ಮೇಯರ್ ಗಾದಿಗೆ ಮುಹೂರ್ತ ಫಿಕ್ಸ್: ಪಟ್ಟಕ್ಕಾಗಿ ರಾಜಕೀಯದಾಟ ಶುರುಮೈಸೂರು ಮೇಯರ್ ಗಾದಿಗೆ ಮುಹೂರ್ತ ಫಿಕ್ಸ್: ಪಟ್ಟಕ್ಕಾಗಿ ರಾಜಕೀಯದಾಟ ಶುರು

ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಹೊಂದಾಣಿಕೆಗೆ ಬರಲಾಗಿದೆ ಎನ್ನಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರ ನೇತೃತ್ವದಲ್ಲಿ ನಗರದ ಖಾಸಗಿ ಹೋಟೆಲ್ ನಲ್ಲಿ ನಗರಪಾಲಿಕೆ ಜಾ.ದಳ ಸದಸ್ಯರ ಸಭೆ ನಡೆದು ಮಹಾಪೌರರ ಆಕಾಂಕ್ಷಿಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ.
ಅಂತಿಮವಾಗಿ ಅಭ್ಯರ್ಥಿ ಆಯ್ಕೆಯ ಅಧಿಕಾರವನ್ನು ವರಿಷ್ಠರಿಗೆ ಬಿಡುವ ತೀರ್ಮಾನ ಕೈಗೊಳ್ಳಲಾಯಿತು.

 ವಿಶೇಷ ಸಭೆ ನಡೆಯಲಿದೆ

ವಿಶೇಷ ಸಭೆ ನಡೆಯಲಿದೆ

ಚುನಾವಣಾಧಿಕಾರಿಗಳೂ ಆದ ಪ್ರಾದೇಶಿಕ ಆಯುಕ್ತ ಯಶವಂತ್ ಅವರ ಅಧ್ಯಕ್ಷತೆಯಲ್ಲಿ ನ.17 (ಶನಿವಾರ) ರಂದು ಬೆಳಿಗ್ಗೆ11.30ಕ್ಕೆ ಚುನಾವಣಾ ವಿಶೇಷ ಸಭೆ ನಡೆಯಲಿದೆ. ಬೆಳಿಗ್ಗೆ 7 ಗಂಟೆಯಿಂದ 9.30ರವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ನಾಮಪತ್ರಗಳ ಪರಿಶೀಲನೆ, ನಾಮಪತ್ರಗಳ ವಾಪಾಸು ಪ್ರಕ್ರಿಯೆ ನಂತರ ಅಗತ್ಯ ಬಿದ್ದರೆ ಚುನಾವಣೆ ನಡೆಯಲಿದೆ.

 ನ.17ರಂದು ಮೈಸೂರು ಪಾಲಿಕೆ ಮೇಯರ್, ಉಪ ಮೇಯರ್ ಆಯ್ಕೆ ನ.17ರಂದು ಮೈಸೂರು ಪಾಲಿಕೆ ಮೇಯರ್, ಉಪ ಮೇಯರ್ ಆಯ್ಕೆ

 ಮೈತ್ರಿ ಆಡಳಿತ ಅನಿವಾರ್ಯ

ಮೈತ್ರಿ ಆಡಳಿತ ಅನಿವಾರ್ಯ

ಮಹಾಪೌರರ ಸ್ಥಾನ ಸಾಮಾನ್ಯ ಮಹಿಳೆಗೆ, ಉಪಮಹಾಪೌರರ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಾಗಿದೆ. ನಗರಪಾಲಿಕೆಯ 65 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಾನಗರಪಾಲಿಕೆಗೆ ನಡೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದ ಹಿನ್ನೆಲೆಯಲ್ಲಿ ಮೈತ್ರಿ ಆಡಳಿತ ಅನಿವಾರ್ಯವಾಗಿದೆ.

 ಮೂರು ಮಹಾನಗರ ಪಾಲಿಕೆಗಳಿಗೆ ಇನ್ನೂ ಹೊಸ ಮೇಯರ್ ಸಿಕ್ಕಿಲ್ಲ! ಮೂರು ಮಹಾನಗರ ಪಾಲಿಕೆಗಳಿಗೆ ಇನ್ನೂ ಹೊಸ ಮೇಯರ್ ಸಿಕ್ಕಿಲ್ಲ!

 ಆಪರೇಷನ್ ಕಮಲದ ಭೀತಿ

ಆಪರೇಷನ್ ಕಮಲದ ಭೀತಿ

ಕಾಂಗ್ರೆಸ್‌ ಮತ್ತು ಜೆಡಿಎಸ್ ಗೆ 'ಆಪರೇಷನ್‌ ಕಮಲ'ದ ಭೀತಿ ಎದುರಾಗಿದೆ. ಕಾಂಗ್ರೆಸ್‌, ಜೆಡಿಎಸ್ ಮೈತ್ರಿ ಮಾಡಿಕೊಂಡು ಪಾಲಿಕೆಯ ಅಧಿಕಾರ ಹಿಡಿಯಲು ನಿರ್ಧರಿಸಿವೆ. ಆದರೆ ಮೇಯರ್ ಸ್ಥಾನ ಯಾರಿಗೆ ನೀಡಬೇಕು ಎಂಬ ವಿಚಾರದಲ್ಲಿ ಉಭಯ ಪಕ್ಷಗಳು ಇನ್ನೂ ಒಮ್ಮತಕ್ಕೆ ಬಂದಿಲ್ಲ. ಪಾಲಿಕೆಯ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಜೆಪಿ ಕೊನೆಯ ಕ್ಷಣದಲ್ಲಿ 'ಆಪರೇಷನ್‌ ಕಮಲ'ಕ್ಕೆ ಮುಂದಾಗಬಹುದು ಎಂಬ ಭಯ ಎರಡೂ ಪಕ್ಷಗಳ ಮುಖಂಡರನ್ನು ಕಾಡುತ್ತಿದೆ.

 ಕೆಲವು ಸದಸ್ಯರಲ್ಲಿ ಅಸಮಾಧಾನ

ಕೆಲವು ಸದಸ್ಯರಲ್ಲಿ ಅಸಮಾಧಾನ

ತಮ್ಮ ಸದಸ್ಯರನ್ನು ಬಿಜೆಪಿ ಸೆಳೆಯದಂತೆ ಹಿಡಿದಿಟ್ಟುಕೊಳ್ಳುವ ಸವಾಲು ಈ ಪಕ್ಷಗಳ ಮುಂದಿವೆ. ಎರಡೂ ಪಕ್ಷಗಳ ಮುಖಂಡರು ಮತ್ತು ಪಾಲಿಕೆ ಸದಸ್ಯರು ಶುಕ್ರವಾರ ಸಭೆ ಸೇರಲಿದ್ದು, ಮುಂದಿನ ನಡೆಯ ಬಗ್ಗೆ ನಿರ್ಧರಿಸಲಿದ್ದಾರೆ. ಅನಿವಾರ್ಯವೆನಿಸಿದರೆ ಎಲ್ಲ ಸದಸ್ಯರನ್ನು ನಗರದ ಹೊರವಲಯದಲ್ಲಿರುವ ರೆಸಾರ್ಟ್‌ಗೆ ಕರೆದೊಯ್ಯುವ ಚಿಂತನೆಯೂ ನಡೆದಿದೆ.

ಕಾಂಗ್ರೆಸ್‌ ಹೈಕಮಾಂಡ್ ಮೇಯರ್ ಚುನಾವಣೆಯ ಉಸ್ತುವಾರಿಯನ್ನು ಸಚಿವ ಕೃಷ್ಣಬೈರೇಗೌಡ ಅವರಿಗೆ ವಹಿಸಿದ್ದು, ಅವರು ಇಂದು ಶುಕ್ರವಾರ ನಗರಕ್ಕೆ ಬರಲಿದ್ದಾರೆ. ಪಾಲಿಕೆಯಲ್ಲಿ ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದಕ್ಕೆ ಎರಡೂ ಪಕ್ಷಗಳ ಕೆಲವು ಸದಸ್ಯರಲ್ಲಿ ಅಸಮಾಧಾನವಿದೆ ಎನ್ನಲಾಗಿದೆ.

ಅವರನ್ನು ಸೆಳೆದುಕೊಂಡು ಬಿಜೆಪಿ ಅಧಿಕಾರ ಹಿಡಿಯುವ ತಂತ್ರ ರೂಪಿಸಬಹುದು ಎಂದು ಮೂಲಗಳು ತಿಳಿಸಿವೆ.

English summary
According to the top sources, Jds will get a Mayor position. In this regard decision of Chief Minister HD Kumaraswamy is final.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X