• search
For mysore Updates
Allow Notification  

  ಎಚ್ ವಿಶ್ವನಾಥ್ ಗೂ ಬಿಜೆಪಿ ಗಾಳ? ಪುತ್ರನಿಂದ ಹೊರಬಿತ್ತು ಸತ್ಯ!

  By ಯಶಸ್ವಿನಿ ಎಂ.ಕೆ
  |
    ಎಚ್ ವಿಶ್ವನಾಥ್ ಗೂ ಬಿಜೆಪಿ ಗಾಳ? ಪುತ್ರನಿಂದ ಹೊರಬಿತ್ತು ಸತ್ಯ | Oneindia Kannada

    ಮೈಸೂರು, ಮೇ 18 : ರಾಜ್ಯ ರಾಜಕಾರಣದ ಬೃಹನ್ನಾಟಕಕ್ಕೆ ಮೈಸೂರಿಗರನ್ನು ಭರ್ಜರಿ ಸರ್ಜರಿ ಮಾಡಲು ಕಮಲ ಪಾಳಯ ಮುಂದಾಗಿದೆ. ಹುಣಸೂರಿನ ಜೆಡಿಎಸ್ ಅಭ್ಯರ್ಥಿ ವಿಶ್ವನಾಥ್ ರವರನ್ನು ಬಿಜೆಪಿ ಸೆಳೆಯಲು ಪ್ಲಾನ್ ನಡೆಸಿದೆ. ಈ ಕುರಿತಾಗಿ ವಿಶ್ವನಾಥ್ ಪುತ್ರ ಪೂರ್ವಜ್ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

    ನಿಮ್ಮ ತಂದೆಗೆ ಬೆಂಬಲ ನೀಡುವಂತೆ ಹೇಳಿ ಎಂದು ಸಾಕಷ್ಟು ಕರೆಗಳು ಬರುತ್ತಿವೆ. ಆದರೆ, ನಾವು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಹಾಗಾಗಿ ಅವಕಾಶಕ್ಕಾಗಿ ಹುಡುಕುವವರಲ್ಲ ಎಂದು ಶಾಸಕ ಹೆಚ್. ವಿಶ್ವನಾಥ್ ಪುತ್ರ ಪೂರ್ವಜ್ ವಿಶ್ವನಾಥ್ ತಮ್ಮ ಫೇಸ್‌ ಬುಕ್‌ನಲ್ಲಿ ಬಿಜೆಪಿಯ ಫರ್ ಕುರಿತು ಬರೆದುಕೊಂಡಿದ್ದಾರೆ.

    Live : ಶನಿವಾರವೇ ಬಿಜೆಪಿ ವಿಶ್ವಾಸ ಮತ ಸಾಬೀತು ಮಾಡಬೇಕು

    ಕರ್ನಾಟಕ ವಿಧಾನಸಭೆಯ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಅತಂತ್ರ ಸ್ಥಿತಿ ನಿರ್ಮಾಣಗೊಂಡಿದೆ. ಬಿಜೆಪಿ 104 ಸ್ಥಾನಗಳನ್ನ ಪಡೆಯುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಈಗಾಗಲೇ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಒಟ್ಟು 78 ಸ್ಥಾನಗಳನ್ನ ಪಡೆದು ಜೆಡಿಎಸ್ 38 ಸ್ಥಾನಗಳನ್ನ ಪಡೆಯುವ ಮೂಲಕ ಮೈತ್ರಿ ಸರ್ಕಾರ ರಚನೆ ಮುಂದಾಗಿದ್ದು, ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ನ ಎಲ್ಲಾ ಶಾಸಕರನ್ನ ರೆಸಾರ್ಟ್ ಗೆ ಕರೆದುಕೊಂಡು ಹೋಗಲಾಗಿದೆ.

    JDS leader H Vishwanths son Poorvaj reveals BJPs offer in his Facebook post

    ಕುದುರೆ ವ್ಯಾಪಾರ ನಡೆಯುವ ಹಿನ್ನಲ್ಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ಮೇಲೆ ನಿಗಾ ಇಡಲಾಗಿದ್ದು, ಈಗಾಗಲೇ ಬಿಜೆಪಿಯ ಕೆಲ ಮುಖಂಡರು ಆಪರೇಷನ್ ಕಮಲಕ್ಕೆ ಕೈಹಾಕಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಹುಣಸೂರು ಕ್ಷೇತ್ರದ ಜೆಡಿಎಸ್ ಶಾಸಕ ಹೆಚ್.ವಿಶ್ವನಾಥ್ ಅವರಿಗೆ ಬಿಜೆಪಿ ಗಾಳ ಹಾಕಿರುವ ಬಗ್ಗೆ ಅವರ ಮಗ ಪೂರ್ವಜ್ ವಿಶ್ವನಾಥ್ ಫೇಸ್ ಬುಕ್ ನಲ್ಲಿ ತಿಳಿಸಿದ್ದಾರೆ.

    ನಮ್ಮ ತಂದೆಯನ್ನ ಖರೀದಿ ಮಾಡಲು ಸಾಧ್ಯವಿಲ್ಲ. ನೀವು ಏನ್ ಹೇಳುತ್ತೀರಾ ಕುದುರೆ ವ್ಯಾಪಾರ ಅಥವಾ ಕುದುರೆ ಖರೀದಿಗೆ ಎ.ಹೆಚ್.ವಿಶ್ವನಾಥ್ ಒಪ್ಪುವುದಿಲ್ಲ. ನಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಅವಕಾಶ ರಾಜಕಾರಣ ಮಾಡುವುದಕ್ಕೆ ನಮ್ಮ ತಂದೆಗೆ ಬರುವುದಿಲ್ಲ. ನಮ್ಮ ತಂದೆಯ ಚಿಂತೆಯನ್ನ ಬಿಟ್ಟುಬಿಡಿ.

    JDS leader H Vishwanths son Poorvaj reveals BJPs offer in his Facebook post

    ನೀವು ನಂಬುವುದಿಲ್ಲ, ನಿಮ್ಮ ತಂದೆಗೆ ಹೇಳಿ ಬಿಜೆಪಿ ಬೆಂಬಲಿಸುವಂತೆ ಎಂದು ಸಾಕಷ್ಟು ಫೋನ್ ಕಾಲ್ ಬರುತ್ತಿದ್ದು ಸಾಕಷ್ಟು ಆಮಿಷಗಳನ್ನ ಒಡ್ಡುತ್ತಿದ್ದಾರೆ. ಆದರೆ ನಿಮ್ಮ ಆಟ ನಮ್ಮ ತಂದೆಯ ಬಳಿ ನಡೆಯುವುದಿಲ್ಲ. ಯಾವುದೇ ಪವರ್ ಇಲ್ಲದೆ ಕೇವಲ ಶಾಸಕರಾಗಿಯೇ ಜನರ ಸಮಸ್ಯೆಗಳನ್ನ ಪರಿಹರಿಸಬಹುದಾಗಿದೆ ಎಂದು ಶಾಸಕ ವಿಶ್ವನಾಥ್ ಅವರಿಗೆ ಬಿಜೆಪಿ ಗಾಳ ಹಾಕಿರುವ ಬಗ್ಗೆ ಪೂರ್ವಜ್ ವಿಶ್ವನಾಥ್ ಫೇಸ್ ಬುಕ್ ನಲ್ಲಿ ತಿಳಿಸಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    ಇನ್ನಷ್ಟು ಮೈಸೂರು ಸುದ್ದಿಗಳುView All

    English summary
    The BJP has planned to draw JDS candidate H Vishwanath from the Hunusur constituency. Vishwanath's son, Poorvaj posted on his Facebook Wall on this issue.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more