ಚಾಮುಂಡೇಶ್ವರಿ ಗರ್ಭಗುಡಿ ಬಾಗಿಲಿಗೆ ಚಿನ್ನದ ಪಟ್ಟಿ ಕಾಣಿಕೆ

Posted By:
Subscribe to Oneindia Kannada
ಚಾಮುಂಡೇಶ್ವರಿ ಗರ್ಭಗುಡಿ ಬಾಗಿಲಿಗೆ ಚಿನ್ನದ ಪಟ್ಟಿ ಕಾಣಿಕೆ | Oneindia Kannada

ಮೈಸೂರು, ಅಕ್ಟೋಬರ್ 29 : ನಾಡ ಅಧಿದೇವತೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭಕ್ತರೊಬ್ಬರು ಚಿನ್ನದ ಪಟ್ಟಿ ಬಾಗಿಲನ್ನು ಅರ್ಪಿಸಿದ್ದಾರೆ. ಹರಕೆ ಹೊತ್ತುಕೊಂಡಿದ್ದ ಭಕ್ತರು, ಇಷ್ಟಾರ್ಥ ಈಡೇರಿದ ಹಿನ್ನಲೆಯಲ್ಲಿ ಹರಕೆ ತೀರಿಸಿದ್ದಾರೆ.

ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ ಜಯಶ್ರೀ ಶೀಧರ್ ಅವರು ಚಾಮುಂಡೇಶ್ವರಿ ದೇವಾಲಯದ ಗರ್ಭಗುಡಿಯ ಬೆಳ್ಳಿಯ ಬಾಗಿಲಿಗೆ ಚಿನ್ನದ ಪಟ್ಟಿ ಅರ್ಪಿಸಿದ್ದಾರೆ. ಶುಕ್ರವಾರ ಇದನ್ನು ಅಳವಡಿಸಿ ಪೂಜೆ ಸಲ್ಲಿಸಲಾಗಿದೆ.

Jayashree Shridar offers gold-plated doors to Chamundeshwari temple

ವಕೀಲರಾಗಿ ಕೆಲಸ ಮಾಡುತ್ತಿರುವ ಜಯಶ್ರೀ ಶೀಧರ್ ಚಾಮುಂಡೇಶ್ವರಿಗೆ ಹರಕೆ ಹೊತ್ತುಕೊಂಡಿದ್ದರು. ಇಷ್ಟಾರ್ಥ ಸಿದ್ಧಿಸಿದ ಹಿನ್ನಲೆಯಲ್ಲಿ ಹರಕೆಯನ್ನು ತೀರಿಸಿದ್ದಾರೆ. ಚಿನ್ನದ ಪಟ್ಟಿಯ ಮೌಲ್ಯ ಸುಮಾರು 26 ಲಕ್ಷ ರೂ.ಗಳು ಎಂದು ತಿಳಿದುಬಂದಿದೆ.

'1987ರಲ್ಲಿ ವಕೀಲ ವೃತ್ತಿ ಆರಂಭಿಸಿದಾಗಲೇ ಚಾಮುಂಡಿ ದೇವಿಗೆ ಶಾಶ್ವತ ಕಾಣಿಕೆ ನೀಡಬೇಕು ಎಂದು ಹರಕೆ ಹೊತ್ತುಕೊಂಡಿದ್ದೆ. ಪತಿ ಹಾಗೂ ಕುಟುಂಬ ಸದಸ್ಯರ ನೆರವಿನಿಂದ ದೊಡ್ಡ ಕಾಣಿಕೆ ನೀಡಲು ಸಾಧ್ಯವಾಗಿದೆ' ಎನ್ನುತ್ತಾರೆ ಜಯಶ್ರೀ ಶೀಧರ್.

ಚಿನ್ನದ ಪಟ್ಟಿ ಬಾಗಿಲು ಮಾಡಿಸಲು ಎರಡು ವಷ೯ಗಳ ಹಿಂದೆಯೇ ಜಯಶ್ರೀ ಶೀಧರ್ ಅವರು ಅನುಮತಿ ಪಡೆದುಕೊಂಡಿದ್ದರು. ಈಗ ನವದುರ್ಗೆಯರ ಚಿನ್ನದ ಪಟ್ಟಿ ಬಾಗಿಲನ್ನು ಸಮರ್ಪಣೆ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru based lawyer Jayashree Shridar presented gold-plated doors to Chamundeshwari temple, Mysuru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ