ಮೈಸೂರಿನ ತುಂಬೆಲ್ಲಾ ಸಂಚರಿಸಿದ ರಸ್ತೆ ರಾಜ!

Posted By:
Subscribe to Oneindia Kannada

ಮೈಸೂರು, ಜುಲೈ 11 : ನಗರದ ಪ್ರಮುಖ ರಸ್ತೆಗಳು ಥಟ್ಟನೆ ಎಂಬಂತೆ 1960ರ ದಶಕಕ್ಕೆ ಜಾರಿಹೋಗಿದ್ದವು. ಹಾಲಿವುಡ್ ನ ಜನಪ್ರಿಯ ಬೈಕ್ ಗಳು ಅರಮನೆ ನಗರಿಯ ರಸ್ತೆ ಮೇಲೆ ಅವತರಿಸಿತೇನೋ ಎಂಬ ಭ್ರಮೆಯನ್ನೂ ಕ್ಷಣಕಾಲ ಉಂಟು ಮಾಡಿತ್ತು. ಇದಕ್ಕೆ ಕಾರಣವಾಗಿದ್ದು, ಮೈಸೂರಿಗರಿಗೆ ಚಿರಪರಿಚಿತವಾದ ಜಾವಾ ಕಾರ್ಖಾನೆಯ ಬಗೆಬಗೆಯ ದ್ವಿಚಕ್ರ ವಾಹನಗಳ ಮೆರವಣಿಗೆ ಜು.10 ರಂದು ನಡೆದಿದ್ದು.

ನಗರದ ಕೆಲವು ರಸ್ತೆಗಳಲ್ಲಿ ಜಾವಾ ಬೈಕ್ ಗಳದ್ದೇ ಕಾರು ಬಾರು. ಮುಖ್ಯರಸ್ತೆಯಲ್ಲಿ ತನ್ನ ಸಾಂಪ್ರದಾಯಿಕ ಸದ್ದಿನೊಂದಿಗೆ ಜಾವಾ ಬೈಕ್ ಗಳು ಸಾಗುತ್ತಿದ್ದರೆ ಯುವಕರು, ಮಕ್ಕಳು ರಸ್ತೆಯ ಇಕ್ಕೆಲೆಗಳಲ್ಲಿ ನಿಂತು ಅವುಗಳ ಸುಂದರ ವಿನ್ಯಾಸ, ಆಕಾರ, ಅದರಿಂದ ಹೊರ ಬರುತ್ತಿದ್ದ ಲಯಬದ್ಧವಾದ ಸದ್ದನ್ನು ಕೇಳುತ್ತಾ ಆನಂದಿಸಿದರು.
ರಸ್ತೆ ರಾಜನಾಗಿ 60-70ರ ದಶಕದಲ್ಲಿ ಮೆರೆದು ಯುವಕರ ಆಕರ್ಷಣೆಯ ದ್ವಿಚಕ್ರ ವಾಹನವಾಗಿದ್ದ ಜಾವಾ ಮೋಟಾರ್ ಬೈಕ್ ಗಳ ಟೂ ಸ್ಟ್ರೋಕ್ ಇಂಜಿನ್ ಶಬ್ದ ನಗರದಲ್ಲಿ ಅನುರಣಿಸಿತು. ಅಂದು ಇದರ ಒಡೆಯರಾಗಿದ್ದವರನ್ನು ಕಲ್ಪನಾ ಲೋಕಕ್ಕೆ ಕರೆದೊಯ್ದಿತು.

ರಾಗಿ ಮುದ್ದೆ ತಯಾರಿಗೂ ಬಂತು ಅತ್ಯಾಧುನಿಕ ಯಂತ್ರ

Java bike rally in Mysore City

ಅಂತಾರಾಷ್ಟ್ರೀಯ ಜಾವಾ ದಿನದ ಅಂಗವಾಗಿ ಮೈಸೂರು ಜಾವಾ ಫ್ರೆಂಡ್ಸ್ ಕ್ಲಬ್ ಆಯೋಜಿಸಿದ್ದ ಜಾವಾ ಬೈಕ್ರ್ಯಾಲಿಯಲ್ಲಿ 350ಕ್ಕೂ ಹೆಚ್ಚು ಬೈಕ್ ಗಳು ಸಾಗಿದವು. ಬೆಂಗಳೂರಿನಿಂದ ಬಂದಿದ್ದ 80 ಬೈಕ್ ಗಳೂ ಸಾಲಿನಲ್ಲಿ ಸೇರಿಕೊಂಡಿದ್ದವು. 1929ರಲ್ಲಿ ಜಕೊಸ್ಲೋವಾಕಿಯಾದಲ್ಲಿ ತಯಾರಾದ ಮೋಟಾರ್ ಬೈಕ್ ಮೊದಲ ಬಾರಿಗೆ ರಸ್ತೆಗಿಳಿದಿತ್ತು. ಉದ್ಯಮಿ ಎಫ್.ಕೆ.ಇರಾನಿ ಅವರ ಪರಿಶ್ರಮದ ಫಲವಾಗಿ ಮೈಸೂರಿನ ಯಾದವಗಿರಿಯಲ್ಲಿ ಮೊದಲಿಗೆ ಜಾವಾ ಬೈಕ್ ತಯಾರಿಕೆ ಆರಂಭವಾಯಿತು. ಇದು ದೇಶದ ದ್ವಿಚಕ್ರ ವಾಹನ ಉತ್ಪಾದನಾ ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣವಾಯಿತು. ಕಾರಣಾಂತರಗಳಿಂದ 1981ರಲ್ಲಿ ಉತ್ಪಾದನೆ ಸ್ಥಗಿತಗೊಂಡಿತು.

Java bike rally in Mysore City

ನಜರಬಾದ್ ಮುಖ್ಯರಸ್ತೆಯಿಂದ ಸಾಗಿದ ರ್ಯಾಲಿ, ಸಿದ್ದಾರ್ಥ ಹೊಟೇಲ್ ರಸ್ತೆ, ಜಯಚಾಮರಾಜೇಂದ್ರ ವೃತ್ತ, ದೊಡ್ಡಕೆರೆ ಮೈದಾನದ ರಸ್ತೆ, ಶಿವರಾತ್ರಿ ರಾಜೇಂದ್ರ ವೃತ್ತ, ಬಸವೇಶ್ವರ ವೃತ್ತ, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಸರಸ್ವತಿಪುರಂ ಮುಖ್ಯ ರಸ್ತೆ, ಕುಕ್ಕರಹಳ್ಳಿ ಕೆರೆ ರಸ್ತೆ, ಗಂಗೋತ್ರಿ ರಸ್ತೆ, ಹುಣಸೂರು ರಸ್ತೆ, ಸಂತ ಜೋಸೆಫ್ ಶಾಲೆ ಜಂಕ್ಷನ್, ಜಯಲಕ್ಷ್ಮಿಪುರಂ ರಸ್ತೆ, ಮಾತೃ ಮಂಡಳಿ ವೃತ್ತ, ಕಾಳಿದಾಸ ರಸ್ತೆ ಮೂಲಕ ಯಾದವಗಿರಿಯಲ್ಲಿನ ಜಾವಾ ಫ್ಯಾಕ್ಟರಿ ಇದ್ದ ಸ್ಥಳ (ಈಗ ಸಂಕಲ್ಪ ಪಾರ್ಕ್) ತಲುಪಿತು. ಅಲ್ಲಿ ಸ್ವಲ್ಪ ಸಮಯ ವಿರಮಿಸಿದ ಜಾವಾ ಬೈಕ್ ಪ್ರಿಯರು, ನಂತರ ಶ್ರೀರಂಗಪಟ್ಟಣಕ್ಕೆ ತೆರಳಿದರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Like every year, this year too Java day has taken place in Mysuru city on Jully 10th. Java bike lovers rode their Java bikes in major streets of the city. The rally was inaugurated in front of the residence of the owner of Java, Irani.
Please Wait while comments are loading...