ಜಗ್ಗೇಶ್ ಕರೆದರೆಂದು ದರ್ಶನ್ ಮೈಸೂರಿಗೆ ಬಂದದ್ದು ಯಾಕೆ ಅಂತ ತಿಳ್ಕಳಿ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ 30: ಮೈಸೂರಿನ ವಿಜಯನಗರ ಮೂರನೇ ಹಂತದ ಬಡಾವಣೆಯಲ್ಲಿ ನಿರ್ಮಿಸಿರುವ ಚಿತ್ರನಟ ಜಗ್ಗೇಶ್ ಮಾಲೀಕತ್ವದ 'ಜಗ್ಗೇಶ್ ಕನ್ವೆನ್ಷನ್ ಹಾಲ್' ಅನ್ನು ನಟ ದರ್ಶನ್ ಉದ್ಘಾಟಿಸಿದರು. ಮೈಸೂರಲ್ಲಿ ಇಂತಹ ಭವ್ಯವಾದ ಭವನ ನಿರ್ಮಿಸಬೇಕೆಂದು ಜಗ್ಗೇಶ್ ಹಲವಾರು ವರ್ಷಗಳಿಂದ ಕನಸು ಕಂಡಿದ್ದರು.

ಚಿತ್ರ ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಈ ಭವನ ನಿರ್ಮಾಣಕ್ಕೆ ಜಾಗ ನೀಡಿದ್ದರು. 'ಸಮಾವೇಶ ಭವನ' ಉದ್ಘಾಟನೆಗೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿ, ಶುಭ ಹಾರೈಸಿದರು.

Jaggesh convention hall inaugurated in Mysuru

"ಈ ಭವನವನ್ನು ಹಣ ಮಾಡಲು ನಿರ್ಮಿಸಿಲ್ಲ" ಎಂದು ಜಗ್ಗೇಶ್ ಹೇಳಿದರು. ಈ ಕಾರ್ಯಕ್ರಮದಲ್ಲಿ ಹಾಜರಿದ್ದ ನಟ ದರ್ಶನ್ ಕೂಡ ಜಗ್ಗೇಶ್‌ ಅವರ ಸ್ನೇಹಪರ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ಮಾತಾಡಿದರು. ನಟ ಕೋಮಲ್, ಚಿತ್ರ ನಿರ್ಮಾಪಕ ಸಂದೇಶ್ ನಾಗರಾಜ್ ಸೇರಿ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.[ಕನ್ನಡಿಗರಲ್ಲಿ ಒಗ್ಗಟ್ಟಿನ ಕೊರತೆ: ಜಲ್ಲಿಕಟ್ಟುವಿನಂತೆ ಕಂಬಳವೂ ನಡೆಯಲಿ]

ಕಂಬಳ ಪರ ನಡೆಯುತ್ತಿರುವ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು ನಟ ಜಗ್ಗೇಶ್ ಮನವಿ ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಬಳ ಕ್ರೀಡೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹೀಗಾಗಿ ಅದಕ್ಕೆ ನಿರ್ಬಂಧ ಹೇರುವುದು ಸರಿಯಲ್ಲ. ಜಲ್ಲಿಕಟ್ಟು ಮಾದರಿಯಲ್ಲಿಯೇ ಕಂಬಳ ಕ್ರೀಡೆಗೂ ಅವಕಾಶ ನೀಡಬೇಕು. ರಾಜ್ಯದ ಜನರು ಕಂಬಳ ಪರವಾದ ಹೋರಾಟದಲ್ಲಿ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ರಾಜಕೀಯದಿಂದ ದೂರ ಉಳಿಯಬೇಡಿ: ರಾಜಕೀಯಕ್ಕೆ ನನ್ನನ್ನು ಕರೆತಂದವರು ಎಸ್.ಎಂ.ಕೃಷ್ಣ. ಒಂದು ವೇಳೆ ಅವರು ಈ ಕ್ಷೇತ್ರವನ್ನು ತೊರೆದರೆ ಮೊದಲು ಬೇಸರ ಮಾಡಿಕೊಳ್ಳುವವನೇ ನಾನು. ಅವರು ಕಾಂಗ್ರೆಸ್ ತೊರೆಯಲು ಕಾರಣ ಏನೇ ಇರಬಹುದು. ಆದರೆ ರಾಜಕೀಯದಿಂದ ದೂರ ಉಳಿಯಬಾರದು. ಅವರ ಸಲಹೆ-ಸೂಚನೆ, ಮಾರ್ಗದರ್ಶನ ಬೇಕಾಗಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jaggesh convention hall inaugurated in Vijayanagar 3rd stage, Mysuru by actor Darshan.
Please Wait while comments are loading...