ಐಟಿ ದಾಳಿ: ಮೈಸೂರಿನಲ್ಲಿ ಕಾರ್ಯಾಚರಣೆ ಮುಕ್ತಾಯ

Posted By:
Subscribe to Oneindia Kannada

ಮೈಸೂರು, ಆಗಸ್ಟ್ 5: ಕಳೆದ 76 ಗಂಟೆಗಳಿಂದ ನಿರಂತರವಾಗಿ ಡಿ.ಕೆ.ಶಿವಕುಮಾರ್ ಅವರ ಮಾವ ತಿಮ್ಮಯ್ಯ ಮನೆಗೆ ಮೇಲೆ ಐಟಿ ದಾಳಿ ನಾಲ್ಕನೇ ದಿನಕ್ಕೆ ಪೂರ್ಣಗೊಂಡಿದ್ದು, ಐಟಿ ಅಧಿಕಾರಿಗಳು ಈಗ ತಿಮ್ಮಯ್ಯ ನಿವಾಸದಿಂದ ಹೊರನಡೆದಿದ್ದಾರೆ.

ಡಿಕೆಶಿ ಮಾವನ ಮನೆಯಲ್ಲಿ 3ನೇ ದಿನವೂ ಮುಂದುವರಿದ ಐಟಿ ದಾಳಿ

ತಿಮ್ಮಯ್ಯ ಮನೆಯಲ್ಲೇ 3 ದಿನಗಳಿಂದ ತಂಗಿದ್ದ ಅಧಿಕಾರಿಗಳುಇಂದು 12 ಗಂಟೆಯ ವೇಳೆ ಹೊರನಡೆದಿದ್ದಾರೆ. ಇದೇ ವೇಳೆ ಸತತ ಒಂದು ಬಾಕ್ಸ್, ಎರಡು ಬ್ಯಾಗ್, ಪ್ರಿಂಟರ್ ಸಮೇತ ಮೂರು ಐಟಿ ಅಧಿಕಾರಿಗಳು ಹೊರ ಬಂದಿದ್ದಾರೆ. ಸತತ ಮೂರು ದಿನಗಳಿಂದ ಐಟಿ ಅಧಿಕಾರಿಗಳು ಎಡೆಬಿಡದೆ ಅಗತ್ಯ ದಾಖಲೆಗಳ ಪರಿಶೀಲನೆ ನಡೆಸಿದ್ದರು. ತಿಮ್ಮಯ್ಯ ನಿವಾಸದಲ್ಲಿ ವಶಪಡಿಸಿಕೊಂಡ ದಾಖಲೆಗಳ ಬಗ್ಗೆ ಪರಿಚಯಸ್ಥರಿಂದ ಐಟಿ ಅಧಿಕಾರಿಗಳ ತಂಡ ಸಹಿ ಪಡೆದುಕೊಂಡಿದ್ದಾರೆ.

IT raid in D K Shivakumar's relative's residence in Mysuru Completed

ಒಟ್ಟು ನಾಲ್ವರು ಅಧಿಕಾರಿಗಳಿಂದ ತನಿಖೆ ನಡೆದಿತ್ತು. ಮನೆಯ ಒಳಗೆ ಮತ್ತು ಹೊರಗೆ ಪೊಲೀಸ್ ಕಾವಲು ಹಾಕಿದ್ದು, ಮ್ಯಾರಥಾನ್ ವಿಚಾರಣೆಯಿಂದ ಕುಟುಂಬ ಸದಸ್ಯರು ಹೈರಾಣಾಗಿದ್ದ ಹಿನ್ನೆಲೆ ನಾವು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಸಿದ್ಧರಿಲ್ಲವೆಂದು ತಿಮ್ಮಯ್ಯ ಸ್ಪಷ್ಟಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
IT raid on Karnataka power minister D K Shivakumar's relative's residence in Mysuru has completed today(August 5th). Operation from IT officers was taking place continuously from 76 hours.
Please Wait while comments are loading...