ಶ್ರೀನಿವಾಸಪ್ರಸಾದ್ ಗೆ ಆತ್ಮವಿಶ್ವಾಸವೇ ಮುಳುವಾಯಿತೇ?

By: ಬಿ.ಎಂ.ಲವಕುಮಾರ್
Subscribe to Oneindia Kannada

ಮೈಸೂರು, ಏಪ್ರಿಲ್ 13: ಗೆದ್ದೇ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸವೇ ನಂಜನಗೂಡು ಬಿಜೆಪಿ ಅಭ್ಯರ್ಥಿ ಶ್ರೀನಿವಾಸಪ್ರಸಾದ್ ಅವರ ಸೋಲಿಗೆ ಕಾರಣವಾಯಿತೆ?
ಖಂಡಿತ ಹೌದು, ಬಹುಶಃ ಇದು ಅನಿರೀಕ್ಷಿತ ಸೋಲು. ಪ್ರತಿಬಾರಿ ನಂಜನಗೂಡಿನಲ್ಲಿ ಗೆದ್ದು ಬರುತ್ತಿದ್ದ ಶ್ರೀನಿವಾಸಪ್ರಸಾದ್ ಈ ಬಾರಿಯೂ ಸುಮಾರು 25ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರಲ್ಲದೆ, ಆ ಧೈರ್ಯದಿಂದಲೇ ಹೆಚ್ಚಾಗಿ ಪ್ರಚಾರಕ್ಕೂ ತೆರಳಿರಲಿಲ್ಲ.[ಶ್ರೀನಿವಾಸ್ ಪ್ರಸಾದ್ ಸೋಲಿಗೆ ಟಿಎನ್ ಸೀತಾರಾಂ ಬೇಸರ]

ಖುದ್ದು ಯಡಿಯೂರಪ್ಪ ಮತ್ತು ಬೆಂಬಲಿಗರ ತಂಡ ಅವರ ಅನುಪಸ್ಥಿತಿಯಲ್ಲಿ ಹಳ್ಳಿ ಹಳ್ಳಿಗೆ ತೆರಳಿ ಮತಯಾಚಿಸಿತ್ತು. ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಹೆಚ್ಚಿನ ಚುನಾವಣಾ ಜವಬ್ದಾರಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಹಿಸಿದ್ದರು. ಇದು ಸ್ಥಳೀಯ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಇರಿಸು ಮುರಿಸಿಗೂ ಕಾರಣವಾಗಿತ್ತು.

Is it overconfidence, which defeats Shrinivas Prasad?

ಮೂಲಗಳ ಪ್ರಕಾರ ಪ್ರಚಾರಕ್ಕೆ ತೆರಳುತ್ತಿದ್ದ ಕಾರ್ಯಕರ್ತರೇ ಶ್ರೀನಿವಾಸಪ್ರಸಾದ್ ಅವರ ವಿರುದ್ಧ ತಿರುಗಿಬಿದ್ದಿದ್ದರು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಪ್ರಚಾರಕ್ಕೆ ಪಕ್ಷದ ನಾಯಕರು ಬೆಳಿಗ್ಗೆ 6 ಗಂಟೆಗೆ ತೆರಳಿ ಹಳ್ಳಿಗಳಲ್ಲಿ ಮತಯಾಚನೆ ನಡೆಸುತ್ತಿದ್ದರೆ, ಶ್ರೀನಿವಾಸ ಪ್ರಸಾದ್ ಅವರು ಮಧ್ಯಾಹ್ನ 12ಕ್ಕೆ ತೆರಳುತ್ತಿದ್ದರಂತೆ. ಹಲವು ಕಡೆಗಳಿಗೆ ಅವರು ಬರಲು ಹಿಂದೇಟು ಹಾಕುತ್ತಿದ್ದರಂತೆ.
ಇನ್ನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಲ್ಲಿ ಹೆಚ್ಚಿನವರು ದಿವಂಗತ ಎಂ.ಮಹದೇವು ಅವರ ಬೆಂಬಲಿಗರಾಗಿದ್ದರು. ಎಂ.ಮಹದೇವು ಮತ್ತು ಶ್ರೀನಿವಾಸಪ್ರಸಾದ್ ಅವರ ನಡುವೆ ಹಾದು ಬರುತ್ತಿರಲಿಲ್ಲ. ಅವರಿಬ್ಬರೂ ರಾಜಕೀಯವಾಗಿ ಬದ್ಧ ವೈರಿಗಳಾಗಿದ್ದರು.

ಎಂ.ಮಹದೇವು ನಿಧನ ಬಳಿಕ ಅವರ ಬೆಂಬಲಿಗರು ಬಿಜೆಪಿಯಲ್ಲೇ ಇದ್ದರಾದರೂ ಶ್ರೀನಿವಾಸಪ್ರಸಾದ್ ಅವರ ಬಿಜೆಪಿ ಸೇರ್ಪಡೆ ಅವರಲ್ಲಿ ಬೇಸರಕ್ಕೆ ಕಾರಣವಾಗಿತ್ತು.[ಸೋತರೂ ಯಡಿಯೂರಪ್ಪ ಮೇಲೆ ಪ್ರತಾಪ್ ಸಿಂಹ ವಿಶ್ವಾಸ]

Is it overconfidence, which defeats Shrinivas Prasad?

ಶ್ರೀನಿವಾಸಪ್ರಸಾದ್ ಬಿಜೆಪಿ ಸೇರ್ಪಡೆ ಬಳಿಕ ದಿವಂಗತ ಎಂ.ಮಹದೇವು ಅವರ ಮನೆಗೆ ತೆರಳಿ ಬೆಂಬಲಿಗರಿಂದ ತಮಗೆ ಬೆಂಬಲ ಕೇಳಬಹುದಿತ್ತು. ಆದರೆ ಆ ಕೆಲಸವನ್ನು ಅವರು ಮಾಡಿರಲಿಲ್ಲ.

ಬಿಜೆಪಿ ಕಚೇರಿ ಕೂಡ ಎಂ.ಮಹದೇವು ಅವರ ನಿವಾಸದಲ್ಲೇ ಇತ್ತು. ಅವರ ಬಳಿಗೆ ನಾನೇಕೆ ಹೋಗಬೇಕೆಂಬ ಧೋರಣೆ ಬಹುಶಃ ಶ್ರೀನಿವಾಸಪ್ರಸಾದ್ ಅವರದ್ದಾಗಿತ್ತೇನೋ? ಅದನ್ನೇ ದಾಳವಾಗಿಸಿಕೊಂಡ ಕಾಂಗ್ರೆಸ್ ನಾಯಕರು ದಿವಂಗತ ಎಂ.ಮಹದೇವು ಅವರ ಮನೆಗೆ ತೆರಳಿ ಅವರ ಶ್ರೀಮತಿಯವರ ಆಶೀರ್ವಾದ ಪಡೆದು ಬೆಂಬಲ ಕೋರಿದ್ದರು. ಇದು ಕೂಡ ಶ್ರೀನಿವಾಸಪ್ರಸಾದ್ ಸೋಲಿಗೆ ಕಾರಣವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.'
ಒಟ್ಟಿನಲ್ಲಿ ಅತಿಯಾದ ಆತ್ಮವಿಶ್ವಾಸಕ್ಕೆ ಜನರು ಪಾಠ ಕಲಿಸಿದ್ದಾರೆ ಎನ್ನಬಹುದು!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
According to Nanjangud people, over confidence is the reason for Nanjangud BJP candidate Shrinivas Prasad's defeat. He has defeated by Congress candidate Kalale Keshavamurthy in the by election.
Please Wait while comments are loading...