ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಬ್!?

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ 13 : ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಾಂಬ್ ಇರಿಸಲಾಗಿದೆ. ಹೀಗಂತ ಜಿಲ್ಲಾಧಿಕಾರಿಗಳ ನಿಯಂತ್ರಣ ಕೊಠಡಿಗೆ ಗುರುವಾರ ಸಾಯಂಕಾಲದ ವೇಳೆ ಒಂದು ಕರೆ ಬಂದ ತಕ್ಷಣ ಪೊಲೀಸರು ಜಾಗೃತರಾದರು. ಎಲ್ಲರಿಗೂ ಸುದ್ದಿ ತಲುಪಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಪಾಸಣೆ ನಡೆಸಲು ಆರಂಭಿಸಿದರು. ಆದರೆ ಇದು ಒಂದು ಹುಸಿ ಕರೆ ಎನ್ನವುದನ್ನು ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ.

ಹಾಗಾದರೆ ಕರೆ ಮಾಡಿದ ವ್ಯಕ್ತಿ ಯಾರು ಎಂದು ಜಾಡು ಹಿಡಿದು ಹೊರಟ ಲಕ್ಷ್ಮಿಪುರಂ ಠಾಣೆಯ ಪೊಲೀಸರಿಗೆ ಸುಳಿವು ದೊರಕಿದ್ದು, ತೋಟಗಾರಿಕಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಉದ್ಯೋಗಿ ದಿನೇಶ್ ಎನ್ನುವುದು ತಿಳಿದು ಬಂತು. ತಕ್ಷಣ ಸ್ಥಳಕ್ಕೆ ತೆರಳಿ ದಿನೇಶ್ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು.[ಸಿರಿಯಾದಲ್ಲಿ ಕಾರ್ ಬಾಂಬ್ ಸ್ಫೋಟ : ಕನಿಷ್ಠ 14 ಸಾವು]

is-it-bomb-in-mysore-deputy-commissioner-office

ಹುಸಿ ಕರೆ ಮಾಡಲು ಕಾರಣವೇನು? ಆತಂಕ ಸೃಷ್ಟಿಸಲು ಕಾರಣವೇನು ಎಂಬಿತ್ಯಾದಿ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಆದರೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸಿದೆ. ಎಲ್ಲಿಯೂ ಬಾಂಬ್ ಇರಿಸಿದ ಸುಳಿವು ಲಭಿಸಿಲ್ಲ ಎನ್ನಲಾಗಿದೆ.[ಪಾಕ್ ಪೊಲೀಸರ ಮೇಲೆ ಉಗ್ರರ ಆತ್ಮಾಹುತಿ ಬಾಂಬ್ ದಾಳಿ]

ಲಕ್ಷ್ಮಿಪುರಂ ಠಾಣೆಯ ಇನ್ಸಪೆಕ್ಟರ್ ಸಿದ್ದರಾಜು ನೇತೃತ್ವದಲ್ಲಿ ದಿನೇಶ್ ವಿಚಾರಣೆ ನಡೆಯುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Is it bomb in mysore deputy commissioner office..?. It was a hoax call. Police have arrested the person who made the call.
Please Wait while comments are loading...