ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ನಾಲ್ಕು ದಿನಗಳ ಕರಿಮೆಣಸು ಸಮ್ಮೇಳನ

By Prasad
|
Google Oneindia Kannada News

ಮೈಸೂರು, ನವೆಂಬರ್ 23 : ಪ್ರತಿಷ್ಠಿತ ಅಂತಾರಾಷ್ರ್ಟೀಯ ಕರಿಮೆಣಸು ಕಮ್ಯುನಿಟಿಯ (IPC-International Pepper Community) 43ನೇ ಸಭೆ ವಿಶ್ವವಿಖ್ಯಾತ ಮೈಸೂರಿನಲ್ಲಿ ನವೆಂಬರ್ 22ರಿಂದ 25ರವರೆಗೆ ಆಯೋಜಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಕರಿಮೆಣಸು ಉತ್ಪಾದನೆಯಲ್ಲಿ ಮುಂಚೂಣಿಗೆ ಕರ್ನಾಟಕ ಬಂದಿದ್ದು, ಇದಕ್ಕೆ ಪೂರಕವಾಗಿ ಇನ್ನಷ್ಟು ಉತ್ತೇಜನೆ ನೀಡುವ ಉದ್ದೇಶದಿಂದ ಈ ನಾಲ್ಕು ದಿನಗಳ ಸಭೆಯನ್ನು ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. [ಮಳೆಗಾಲದ ಇಳಿಸಂಜೆಯಲ್ಲಿ ಮೆಣಸಿನಕಾಳು ತಂಬುಳಿ!]

International Pepper Community convention in Mysuru

ಈ ಅಂತಾರಾಷ್ರ್ಟೀಯ ಮಟ್ಟದ ಸಭೆಗೆ ಸುಮಾರು 300ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದು, ಕರಿಮೆಣಸು ಬೆಳಯ ಕೃಷಿ, ಸಂಸ್ಕರಣೆ, ಮಾರಾಟ ಹಾಗೂ ಇತರೆ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಪ್ರಪಂಚದಲ್ಲೇ ಅತಿ ಹೆಚ್ಚು ಕರಿಮೆಣಸು ಬೆಳೆಯುವ ಹಾಗೂ ರಫ್ತು ಮಾಡುವ ದೇಶವಾದ ವಿಯೆಟ್ನಾಂನೊಂದಿಗೆ ಪರಸ್ಪರ ವ್ಯವಹಾರ ಸಂಬಂಧವಾಗಿ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. [ಮೆಣಸಿನ ಚಿಕನ್ ಕರಿ]

ಪ್ರತಿಷ್ಠಿತ ಅಂತಾರಾಷ್ರ್ಟೀಯ ಕರಿಮೆಣಸು ಕಮ್ಯುನಿಟಿಯ ಅಧ್ಯಕ್ಷ ಸ್ಥಾನ ಸರದಿ ಪ್ರಕಾರ ಅಯ್ಕೆಯಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಭಾರತವು ಅಧ್ಯಕ್ಷ ಸ್ಥಾನವನ್ನು ಹೊಂದಿದ್ದು, ಅಧ್ಯಕ್ಷರಾಗಿ ಡಾ|| ಎ ಜಯತಿಲಕ್(IPS)ರವರು ನೇಮಕಗೊಂಡಿರುತ್ತಾರೆ ಹಾಗೂ ಸಾಂಬಾರು ಮಂಡಳಿಯ ಸದಸ್ಯರಾದ ಸಂಸದ ಪ್ರತಾಪ್ ಸಿಂಹರವರು ಕೂಡ ಸದರಿ ಸಭೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. [ಕರಿಮೆಣಸು ಕಳ್ಳರಿಂದ ರಾಧಿಕಾ ಮನೆ ದರೋಡೆಗೆ ಯತ್ನ]

English summary
43rd International Pepper Community convention has begun in Mysuru from 22nd November. In this international event more than 300 delegates are expected to attend. Mysuru-Madikeri Pratap Simha, IPC president Dr A Jayalilak are also participating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X