ಮೈಸೂರಿನ ಕೆ.ಆರ್.ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

Posted By: Ramesh
Subscribe to Oneindia Kannada

ಮೈಸೂರು, ಡಿಸೆಂಬರ್ 22 : ಬಿಜೆಪಿ ಪಕ್ಷದ ಮಾಜಿ ಸಚಿವ ರಾಮದಾಸ್ ಹಾಗೂ ಬಿಜೆಪಿ ಮುಖಂಡ ಎಚ್.ವಿ. ರಾಜೀವ್ ಬೆಂಬಲಿಗರ ನಡುವೆ ಬುಧವಾರ ಮಾರಾಮಾರಿ ನಡೆದಿರುವುದು ವರದಿಯಾಗಿದೆ.

ಎಚ್.ವಿ. ರಾಜೀವ್ ಜೊತೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ರಂಗನಾಥ್ ಮೇಲೆ ಮಾಜಿ ಸಚಿವ ಎಸ್‍.ಎ.ರಾಮದಾಸ್ ಬೆಂಬಲಿಗ ಸಾಗರ್ ಚಕ್ರವರ್ತಿ ಹಲ್ಲೆ ನಡೆಸಿದ್ದಾರೆ.

ರಾಮದಾಸ್ ಬೆಂಗಲಿಗರಾದ ಸಾಗರ್ ಸೇರಿ ನಾಲ್ವರ ತಂಡ ಬಿಜೆಪಿ ಕಾರ್ಯಕರ್ತ ರಂಗನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ರಂಗನಾಥ್ ಅವರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.

Internal party feud 3 member gang attacks bjp man at Mysuru K R constituency

ರಂಗನಾಥ್ ಮೊದಲು ರಾಮದಾಸ್ ತಂಡದಲ್ಲಿದ್ದು, ಕೆಲ ದಿನಗಳಿಂದ ರಾಜೀವ್ ಅವರ ಜೊತೆ ಗುರುತಿಸಿಕೊಂಡಿದ್ದೇ ಹಲ್ಲೆಗೆ ಕಾರಣ ಎನ್ನಲಾಗಿದೆ. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆದಿದೆ ಎಂದು ಬಿಂಬಿಸಲಾಗುತ್ತಿದೆ.

ಕಪ್ಪುಹಣ ಬಿಳಿ ಮಾಡುವ ವಿಚಾರವಾಗಿ ಈ ಹಲ್ಲೆ ನಡೆದಿದೆ ಎಂದು ಬಿಜೆಪಿ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
political dispute in BJP Mysuru K R constituency, former minister S A Ramadas followers attacked on a BJP leader Sagar Chakravarthy follower Ranganath.
Please Wait while comments are loading...