ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಗ್ ಬಾಸ್ ಶೋ ನಿಂದ ಅನ್ಯಾಯ : ದೂರು ನೀಡಲು ಮುಂದಾದ ಟೈಲರ್

By Yashaswini
|
Google Oneindia Kannada News

ಮೈಸೂರು, ನವೆಂಬರ್ 15 : ಖಾಸಗಿ ವಾಹಿನಿ ಕಲರ್ಸ್ ಕನ್ನಡದಲ್ಲಿ, ಪರಮೇಶ್ವರ ಗುಂಡ್ಕಲ್ ಅವರ ಉಸ್ತುವಾರಿಯಲ್ಲಿ ಬಿತ್ತರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 5ರ ರಿಯಾಲಿಟಿ ಶೋನಲ್ಲಿ ಅನ್ಯಾಯವಾಗಿದೆ ಎಂದು ನಗರದ ಟೈಲರ್ ಭಯಾನಕ ನಾಗರಾಜ ಉರುಫ್ ನಾಗರಾಜ್ ದೂರಿದರು.

ಬಿಗ್ ಬಾಸ್ ಸ್ಪರ್ಧಿ ಸಿಹಿಕಹಿ ಚಂದ್ರು ವಿರುದ್ದ ಭೋವಿ ಜನಾಂಗದ ಪ್ರತಿಭಟನೆಬಿಗ್ ಬಾಸ್ ಸ್ಪರ್ಧಿ ಸಿಹಿಕಹಿ ಚಂದ್ರು ವಿರುದ್ದ ಭೋವಿ ಜನಾಂಗದ ಪ್ರತಿಭಟನೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ನಡೆಯುತ್ತಿರುವ ಬಿಗ್ ಬಾಸ್ ನಲ್ಲಿ ಸಾಮಾನ್ಯರಿಗೆ ಅವಕಾಶ ನೀಡಲಾಗುವುದೆಂದು ಘೋಷಿಸಿತ್ತು, ಈ ಹಿನ್ನಲೆಯಲ್ಲಿ ಅನ್ ಲೈನ್ ಮುಖಾಂತರ 40 ಸಾವಿರ ಅಧಿಕ ಅರ್ಜಿಗಳು ಬಂದಿದ್ದು, ಇದರಂತೆ ನಾನು ಅರ್ಜಿ ಗುಜರಾಯಿಸಿದ್ದೆ, ಅರ್ಜಿ ಅಂಗೀಕೃತವಾಗಿ ರಸೀದಿಯು ಬಂದಿತ್ತು, ಕಾರ್ಯಕ್ರಮ ಆರಂಭವಾಗುವವರೆಗೆ ಕಾದಿದ್ದೆ, ಆದರೆ ಯಾವುದೇ ಸೂಚನೆ ನೀಡದೆ ಇದ್ದರಿಂದ ನನ್ನ ಸಮಯ ವ್ಯರ್ಥವಾಗಿದೆ, ಈ ಬಗ್ಗೆ ನ್ಯಾಯಾಂಗ ಹೋರಾಟ ಮಾಡಲಾಗುವುದು ಎಂದು ದೂರಿದರು.

ಬಿಗ್ ಬಾಸ್ ನಲ್ಲಿ ಗಾಯತ್ರಿ ಮಂತ್ರಕ್ಕೆ ಅವಮಾನ, ಬ್ರಾಹ್ಮಣರ ಆಕ್ರೋಶಬಿಗ್ ಬಾಸ್ ನಲ್ಲಿ ಗಾಯತ್ರಿ ಮಂತ್ರಕ್ಕೆ ಅವಮಾನ, ಬ್ರಾಹ್ಮಣರ ಆಕ್ರೋಶ

Injustice from the Kannada Big Boss reality show: Taylor, who has filed a complaint

ಬಿಗ್ ಬಾಸ್ ನಲ್ಲಿ ರಾಜಕಾರಣಿಗಳು: ಈ ಎಲ್ಲ ಸ್ಪರ್ಧಿಗಳಿದ್ದರೆ ಹೇಗೆ?ಬಿಗ್ ಬಾಸ್ ನಲ್ಲಿ ರಾಜಕಾರಣಿಗಳು: ಈ ಎಲ್ಲ ಸ್ಪರ್ಧಿಗಳಿದ್ದರೆ ಹೇಗೆ?

ಟೈಲರ್ ವೃತ್ತಿ ನಿರ್ವಹಿಸುತ್ತಿರುವ ನಾನು ಒಬ್ಬ ಸಾಮಾನ್ಯ, ನನ್ನ ಸ್ವವಿವರ ಹಾಗೂ ಇತರರಿಗಿಂತ ಭಿನ್ನವೆಂದು ವಿಡಿಯೋವನ್ನು ಅಪ್ ಲೋಡ್ ಮಾಡಿದ್ದೆ, ಈಗ ಸ್ಪರ್ಧೆಯಲ್ಲಿ ಭಾಗಿಯಾಗಿರುವ ಸಾಮಾನ್ಯರು ಹೇಗೆ ಭಿನ್ನವೆಂದು ಎಲ್ಲಿಯೂ ಸ್ಪಷ್ಟನೇ ನೀಡಿಲ್ಲ.
ಪ್ರಯೋಜಕರು ಪೂರ್ವ ನಿರ್ಣಯದಂತೆ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಕೇವಲ ಟಿಆರ್.ಪಿಗಾಗಿ ಸಾಮಾನ್ಯರಿಗೆ ಅವಕಾಶ ನೀಡಲಾಗುವುದು ಎಂದು ಸುಳ್ಳು ಪ್ರಕಟಣೆ ನೀಡಿದ್ದು ಅಕ್ಷಮ್ಯವೆಂದ ಅವರು, ಕೊನೆಪಕ್ಷ ಸೈನಿಕರ ಮಕ್ಕಳಿಗಾದರೂ ಅವಕಾಶ ನೀಡಿದ್ದರೆ ಅವರ ಕುಟುಂಬಗಳಿಗೆ ಸಹಾಯವಾಗುತ್ತಿತ್ತು, ಪೂರ್ವ ನಿಯೋಜಿತ ಕಾರ್ಯಕ್ರಮದಂತೆ ನಡೆಯುತ್ತಿರುವ ಬಿಗ್ ಬಾಸ್ ನಿಲ್ಲಬೇಕೆಂದು ಇಲ್ಲವೇ ವಾಹಿನಿ ವಿರುದ್ಧ ನ್ಯಾಯಾಂಗ ಹೋರಾಟ ನಡೆಸುವುದಾಗಿ ಹೇಳಿದರು.

English summary
A man from Mysuru is getting ready to file a Judicial action on Big Boss Kannada Season 5 reality show. which is being sponsored by Parameshwara Gundakal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X