ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಬಾರಿ ಸಾಂಪ್ರದಾಯಿಕ ದಸರಾ, ಉದ್ಘಾಟನೆ ಮಾಡಲಿದ್ದಾರೆ ಸುಧಾಮೂರ್ತಿ

By Yashaswini
|
Google Oneindia Kannada News

Recommended Video

Mysore Dasara 2018: ಸುಧಾಮೂರ್ತಿ ಅವರಿಂದ ಉದ್ಘಾಟನೆ | Oneindia Kannada

ಮೈಸೂರು, ಆಗಸ್ಟ್ 28: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವನ್ನು ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಿದ್ದು, ಇನ್ಫೋಸಿಸ್ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಅವರ ಪತ್ನಿ ಸುಧಾಮೂರ್ತಿ ಅವರಿಗೆ ಈ ಭಾರಿ ದಸರಾ ಉದ್ಘಾಟನೆ ಮಾಡುವ ಗೌರವ ನೀಡಲಾಗುವುದು ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಾಡ ಹಬ್ಬ ಮೈಸೂರು ದಸರಾ ಆಚರಣೆ 2018 ಉನ್ನತ ಮಟ್ಟದ ಸಮಿತಿ ಸಭೆಯನ್ನು ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ನಡೆಸಲಾಯಿತು.

ಈ ಸಲ ಡಿಫರೆಂಟ್‌ ದಸರಾ ಅಂತೆ: ಎಚ್ಡಿಕೆ ಪ್ಲ್ಯಾನ್‌ ಏನು?
ಸಭೆ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ, ಇದು ದಸರೆಯ ಕುರಿತು ಎರಡನೇ ಸಭೆ. ಈಗಾಗಲೇ ಬೆಂಗಳೂರಿನಲ್ಲಿ ಮೊದಲ ಸಭೆ ನಡೆಸಲಾಗಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಯಾವುದೂ ಉಲ್ಲಂಘನೆಯಾಗದ ರೀತಿ ಸಭೆ ಸೇರಿದ್ದೇವೆ ಎಂದರು.

ಸೆಪ್ಟೆಂಬರ್‌ 02ರಂದು ಗಜಪಯಣ

ಸೆಪ್ಟೆಂಬರ್‌ 02ರಂದು ಗಜಪಯಣ

ಹಲವು ಸಚಿವರು, ಶಾಸಕರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಸೆಪ್ಟಂಬರ್ 2ರಂದು ಅರ್ಜುನ ಆನೆ ನೇತೃತ್ವದಲ್ಲಿ ಮೊದಲ ತಂಡದ ಗಜ ಪಯಣ ಆರಂಭವಾಗಲಿದೆ. ವೀರನಹೊಸಳ್ಳಿಯ ನಾಗಾಪುರದ ಆಶ್ರಮ ಶಾಲೆಯ ಬಳಿ ಗಜ ಪಯಣ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

ಕರಾವಳಿ ಜಿಲ್ಲೆಗಳು ಸಂಕಷ್ಟದಲ್ಲಿವೆ

ಕರಾವಳಿ ಜಿಲ್ಲೆಗಳು ಸಂಕಷ್ಟದಲ್ಲಿವೆ

ಕೊಡಗು ಜಿಲ್ಲೆಯ ಅನಾಹುತಗಳನ್ನು ಕಂಡಿದ್ದೇವೆ. ಜೊತೆಗೆ ಹಲವೆಡೆ ಮಳೆಯ ಕೊರತೆ ಕಾಣುತ್ತಿದ್ದೇವೆ. 65 ತಾಲೂಕುಗಳು ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕಿದೆ. ಜತೆಗೆ ಎಲ್ಲರ ಭಾವನೆಗಳಿಗೆ ಬೆಲೆ ನೀಡಬೇಕಿದೆ. ರಾಜ್ಯದ ನಾಡಹಬ್ಬ ದಸರ ಉತ್ಸವಗಳು ಉತ್ತಮ ರೀತಿ, ಸಂಪ್ರಯಾದಕವಾಗಿ ನಡೆಯಬೇಕಿದ್ದು, ಸಭೆಯಲ್ಲಿ ಹಲವು ಅಂಶಗಳ ಕುರಿತು ಚರ್ಚೆಯಾಗಿದೆ ಎಂದರು.

ಪ್ರವಾಹದ ಪರಿಣಾಮವಾಗಿ ದಸರಾ ಗಜಪಡೆಯ ಅವಧಿಗೂ ಕತ್ತರಿಪ್ರವಾಹದ ಪರಿಣಾಮವಾಗಿ ದಸರಾ ಗಜಪಡೆಯ ಅವಧಿಗೂ ಕತ್ತರಿ

ಈ ಬಾರಿ ಸಾಂಪ್ರದಾಯಿಕ ದಸರಾ

ಈ ಬಾರಿ ಸಾಂಪ್ರದಾಯಿಕ ದಸರಾ

ಈ ಬಾರಿ ಸಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗುತ್ತದೆ. ಕೆಲವು ಕಾರ್ಯಕ್ರಮಗಳು ಶಾಶ್ವತವಾಗಿ ನಡೆಯುವಂತೆ ಅಭಿಪ್ರಾಯ ಬಂದಿದೆ ಎಂದರು. ಕಳೆದ ವರ್ಷ 15 ಕೋಟಿ ಹಣ ನೀಡಿದ್ದಾರೆ. ಆಯಾಯ ಸ್ಥಳಗಳಲ್ಲಿ ದೊಡ್ಡ ಸ್ಕ್ರೀನ್ ಇರುತ್ತದೆ. ಪಾಸಿನ ಗೊಂದಲಕ್ಕೆ ತೆರೆ ಬೀಳಲಿದ್ದು, ಹಿಂದಿನಿಂದ ನಡೆದುಕೊಂಡು ಬರುತ್ತಿರುವ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಚಿವ ಜಿ.ಟಿ.ದೇವೇಗೌಡ ಹಾಜರು

ಸಚಿವ ಜಿ.ಟಿ.ದೇವೇಗೌಡ ಹಾಜರು

ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಮತ್ತ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ ಟಿ ದೇವೇಗೌಡ, ಡಾ. ಜಯಮಾಲ .ಕನ್ನಡ ಸಂಸ್ಕೃತಿ ಸಚಿವರು. ಡಿ.ಸಿ .ತಮ್ಮಣ್ಣ ಸಾರಿಗೆ ಸಚಿವರು, ಸಾ .ರಾ .ಮಹೇಶ್ .ಪ್ರವಾಸೋದ್ಯಮ ಸಚಿವರು, ಪುಟ್ಟರಾಜು ಸಣ್ಣ ನೀರಾವರಿ ಸಚಿವರು ಉಪಸ್ಥಿತರಿದ್ದರು.

ನಾಡಹಬ್ಬ ದಸರಾದಲ್ಲಿ ಪರಿಸರ ಸ್ನೇಹಿ ದೀಪಾಲಂಕಾರಕ್ಕೆ ವ್ಯವಸ್ಥೆನಾಡಹಬ್ಬ ದಸರಾದಲ್ಲಿ ಪರಿಸರ ಸ್ನೇಹಿ ದೀಪಾಲಂಕಾರಕ್ಕೆ ವ್ಯವಸ್ಥೆ

English summary
Infosys Narayanmurthy 's wife Sudha Murthy will inaugurate the Dasara this year. CM Kumaraswamy and many ministers and officers attended meeting in Mysuru today about Dasara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X