ಮೈಸೂರಿನ ಯೋಗ ದಿನಾಚರಣೆ ಬಗ್ಗೆ ಒಂದಿಷ್ಟು ಮಾಹಿತಿ

Posted By:
Subscribe to Oneindia Kannada

ಮೈಸೂರು, ಜೂನ್ 19 : ಜಿಲ್ಲಾಡಳಿತದ ವತಿಯಿಂದ ಜೂ.21 ರಂದು ನಗರದ ರೇಸ್ ಕ್ಲಬ್ ಆವರಣದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮ ಆಯೋಜಿಸಲಾಗಿದ್ದು, ಗಿನ್ನಿಸ್ ದಾಖಲೆಗಾಗಿ ಸಕಲ ಪ್ರಯತ್ನ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಅರಮನೆ ಆಡಳಿತ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಮೈಸೂರು ಅರಮನೆ ಮಂಡಳಿ, ಆಯುಷ್ ಇಲಾಖೆ, ನೆಹರು ಯುವ ಕೇಂದ್ರ, ಜೆಎಸ್ಎಸ್ ಮಹಾವಿದ್ಯಾಪೀಠ, ಎಲ್ಲಾ ಯೋಗಾ ನೆಟ್ ವರ್ಕಿಂಗ್, ಸಂಸ್ಥೆಗಳು, ಮೈಸೂರು ವಿಶ್ವವಿದ್ಯಾಲಯ, ಮೈಸೂರು ರೇಸ್ ಕ್ಲಬ್, ಸಿಐಎಸ್ಪಿಎಂಎಎಂ, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್, ಹೋಟೆಲ್ ಮಾಲೀಕರ ಸಂಘ ಸೇರಿದಂತೆ ಇತರೆ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜೂ.21 ರಂದು ಬೆಳಿಗ್ಗೆ 6ಕ್ಕೆ ನಗರದ ರೇಸ್ ಕ್ಲಬ್ ಆವರಣದಲ್ಲಿ 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಏಕಕಾಲದಲ್ಲಿ ಸಾಮೂಹಿಕ ಯೋಗ ಮಾಡುವ ಮೂಲಕ ಆಚರಿಸಲಾಗುವುದು.

ಯೋಗ ದಿನಾಚರಣೆ: ಗಿನ್ನಿಸ್ ದಾಖಲೆಯತ್ತ ಮೈಸೂರು ದಾಪುಗಾಲು

Information regarding International Yoga day in Mysuru

ಇದಕ್ಕೆ ಸೈಕಲ್ ಬ್ರಾಂಡ್ ಅಗರಬತ್ತಿ ಹಾಗೂ ವೈಷ್ಣವಿ ಸ್ವೀಟ್ಸ್ ನವರು ಈ ಕಾರ್ಯಕ್ರಮದ ಪ್ರಾಯೋಜಕರಾಗಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಯೋಗಪಟುಗಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಇಂದು ಮಾಹಿತಿ ನೀಡಿದರು.

ಎಲ್ಲಾ ಪ್ರವೇಶ ದ್ವಾರಗಳು ಬೆಳಿಗ್ಗೆ 5 ಗಂಟೆಯಿಂದ ತೆರೆದಿರುತ್ತವೆ. ಪ್ರದರ್ಶನ 7 ಗಂಟೆಯಿಂದ ಪ್ರಾರಂಭವಾಗುವುದರಿಂದ ಬೆಳಿಗ್ಗೆ 6.45ಕ್ಕೆ ಪ್ರವೇಶ ದ್ವಾರಗಳನ್ನು ಮುಚ್ಚಲಾಗುವುದು. ಹೀಗಾಗಿ ಎಲ್ಲಾ ಯೋಗ ಪಟುಗಳು 5.45ರೊಳಗೆ ಹಾಜರಾಗಿ ನಿಗದಿಪಡಿಸಿರುವ ಸ್ಥಳದಲ್ಲಿ ಇರಬೇಕು. ಗುರುತಿನ ಚೀಟಿಯನ್ನು ಹೊಂದಿರುವ ಸ್ಟೀವರ್ಡ್ ಗಳು ಯೋಗಪಟುಗಳನ್ನು ನಿಗಧಿಪಡಿಸಿರುವ ಸ್ಥಳಗಳಲ್ಲಿ ಕೂರಿಸಲು ನೆರವನ್ನು ನೀಡುತ್ತಾರೆ ಎಂದರು.

ಮೈಸೂರಿನಲ್ಲಿ ಗಿನ್ನಿಸ್ ದಾಖಲೆಗಾಗಿ ಯೋಗ: ಕುಸಿದು ಬಿದ್ದ 10 ಮಕ್ಕಳು

ಎಲ್ಲರೂ ಬಿಳಿ ಬಣ್ಣದ ಟಿ-ಶರ್ಟ್ ಅನ್ನು ಧರಿಸಿರಬೇಕು. ಮಹಿಳೆಯರು ಯೋಗ ಮಾಡಲು ಅನುಕೂಲವಾಗಿರುವ ಪ್ಯಾಂಟ್ ಅಥವಾ ಚೂಡಿದಾರ್ ಧರಿಸಬೇಕು. ಯೋಗ ಮ್ಯಾಟ್ ಇಲ್ಲದೆ ಯೋಗ ಮಾಡಿದರೆ ಅದನ್ನು ಗಿನ್ನಿಸ್ ದಾಖಲೆಗೆ ಪರಿಗಣಿಸಲಾಗುವುದಿಲ್ಲ. ಹೀಗಾಗಿ ಎಲ್ಲರೂ ಯೋಗ ಮ್ಯಾಟ್ ಗಳನ್ನು ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದರು.

ಗುಂಪುಗಳಲ್ಲಿ ಭಾಗವಹಿಸುವವರಿಗೆ ಗುಂಪಿನ ಮುಖ್ಯಸ್ಥರ ಮೂಲಕ ಬಾರ್ ಕೋಡೆಡ್ ಟಿಕೆಟ್ ಗಳನ್ನು ಮುಂಚಿತವಾಗಿ ನೀಡಲಾಗುವುದು. ಭಾಗವಹಿಸುವವರು ಅವರಿಂದ ಟಿಕೆಟ್ ಗಳನ್ನು ಪಡೆದು ನಿಗಧಿಪಡಿಸಿರುವ ಪ್ರವೇಶ ದ್ವಾರದಲ್ಲಿ ಅದನ್ನು ಸ್ಕ್ಯಾನ್ ಮಾಡಿಸಬೇಕು. ಟಿಕೆಟ್ ಇದ್ದವರು ಮಾತ್ರ ಇದರಲ್ಲಿ ಭಾಗವಹಿಸಲು ಸಾಧ್ಯವಾಗಿರುವುದರಿಂದ ಪ್ರವೇಶ ದ್ವಾರಗಳ ಬಳಿ ಟಿಕೆಟ್ ಗಳನ್ನು ಉಚಿತವಾಗಿ ವಿತರಿಸುವ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ಹೇಳಿದರು.

ಮೈಸೂರಿನಲ್ಲಿ 20 ಸಾವಿರ ಜನರಿಂದ ಯೋಗಾಭ್ಯಾಸ

ಯೋಗ ಪ್ರದರ್ಶಕರು ನೀಡುವ ಸೂಚನೆಯಂತೆ ಎಲ್ಲರೂ ಯೋಗಾಸನಗಳನ್ನು ಮಾಡಬೇಕು. ಭಾಗವಹಿಸುವವರಲ್ಲಿ ಶೇ.10 ಕ್ಕಿಂತ ಹೆಚ್ಚು ಜನರು ಯೋಗವನ್ನು ಮಾಡಿದ್ದರೆ ಗಿನ್ನಿಸ್ ದಾಖಲೆಯವರು ತಾಂತ್ರಿಕವಾಗಿ ಇದನ್ನು ಅಮಾನ್ಯ ಮಾಡುತ್ತಾರೆ. ಕಾರ್ಯಕ್ರಮ ಮುಗಿದ ನಂತರ ಗಿನ್ನಿಸ್ ದಾಖಲೆ ಪ್ರಯತ್ನದ ಭಾಗವಹಿಸುವಿಕೆಯ ಪ್ರಮಾಣಪತ್ರ ಸ್ವೀಕರಿಸಿ ತೆರಳಬಹುದು ಎಂದರು.

ಭಾರಿ ವಾಹನದಲ್ಲಿ ಬರುವವರು ನಿಗದಿಪಡಿಸಿರುವ ಮತ್ತು ಸೂಚಿಸಿರುವ ನಿಲುಗಡೆ ಸ್ಥಳದಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡಬೇಕು. ಸಂಚಾರಿ ಪೊಲೀಸರು ನಿರ್ದೇಶನಗಳನ್ನು ಪಾಲಿಸಬೇಕು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರ ಬಸ್ ನಿಲ್ದಾಣದಿಂದ ರೇರ್ಸ್ ಕೋರ್ಸ್ ಗೆ ನಿರಂತರವಾಗಿ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದ ಅವರು ಹೆಚ್ಚಿನ ಮಾಹಿತಿಗಾಗಿ www.yogadamysuru.com ನೋಡಬಹುದು ಎಂದು ತಿಳಿಸಿದರು.

7 ಪ್ರವೇಶ ದ್ವಾರ: ದ್ವಾರ 1- ಜೆಎಸ್ಎಸ್ ಶಿಕ್ಷಣ ಸಂಸ್ಥೆಗೆ ಮಹಾರಾಣಾ ಪ್ರತಾಪ ವೃತ್ತ-ಲಲಿತ ಮಹಲ್ ರಸ್ತೆ, ದ್ವಾರ 2- ಯೋಗ ಸಂಸ್ಥೆಗಳು, ಸಿಬಿಎಸ್ಇ ಶಾಲೆಗಳಿಗೆ ರೇಸ್ ಕೋರ್ಸ್ ಆಡಳಿತ ಕಚೇರಿ ದ್ವಾರ- ಲಲಿತ ಮಹಲ್ ರಸ್ತೆ, ಖಾಸಗಿ ಶಾಲಾ-ಕಾಲೇಜುಗಳು, ದ್ವಾರ 3- ಸಾರ್ವಜನಿಕರಿಗೆ ಪಂಟರ್ಸ್ ಗೇಟ್-ರೇಸ್ ಕೋರ್ಸ್ ಸರ್ಕಲ್ (ಮಾಲ್ ಆಫ್ ಮೈಸೂರು ಹಿಂಭಾಗ), ದ್ವಾರ 4- ಸಾರ್ವಜನಿಕರಿಗೆ ಗಾಲ್ಫ್ ಕ್ಲಬ್ ಗೇಟ್ (ಮಾಲ್ ಆಫ್ ಮೈಸೂರು ಹಿಂಭಾಗ), ದ್ವಾರ 5-ಡಿಡಿಪಿಐ ಮತ್ತು ಡಿಡಿಪಿಯು ಅಧೀನದಲ್ಲಿ ಬರುವ ವಿದ್ಯಾರ್ಥಿಗಳು, ಬಿಸಿಎಂ-ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಿದ್ಯಾರ್ಥಿಗಳು, ಮೈಸೂರು ವಿಶ್ವವಿದ್ಯಾನಿಲಯಕ್ಕೆ ಲಾರಿ ಟರ್ಮಿನಲ್ ಗೇಟ್, ದ್ವಾರ 6-ಸಾರ್ವಜನಿಕರಿಗೆ ಸಿಎಆರ್ ಕಚೇರಿಗೆ ಹೋಗುವ ರಸ್ತೆ, ದ್ವಾರ 7-ಗಣ್ಯರು, ಮಾಧ್ಯಮ ಪ್ರತಿನಿಧಿಗಳು, ಅಧಿಕಾರಿಗಳು, ಸಂಘಟಕರಿಗೆ ಸಿಎಆರ್ ಕಚೇರಿಗೆ ಹೋಗುವ ರಸ್ತೆಯಲ್ಲಿ ಗೇಟ್ ಗಳನ್ನು ತೆರೆಯಲಾಗಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
District collector of Mysuru gave information regarding mass yoga program in the wake of International Yoga day on June 21.
Please Wait while comments are loading...